20 ವರ್ಷ ಹಿಂದಿನ ನಟಿ ಸೌಂದರ್ಯ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್.. ಪತಿ ರಘು ಬಿಚ್ಚಿಟ್ಟ ಸತ್ಯವೇನು?

author-image
admin
Updated On
20 ವರ್ಷ ಹಿಂದಿನ ನಟಿ ಸೌಂದರ್ಯ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್.. ಪತಿ ರಘು ಬಿಚ್ಚಿಟ್ಟ ಸತ್ಯವೇನು?
Advertisment
  • ಸೌಂದರ್ಯ ಕೊನೆಯ ಸಿನಿಮಾ ಶಿವ ಶಂಕರದಲ್ಲಿ ನಾಯಕ ಮೋಹನ್​ ಬಾಬು
  • ದೂರು ದಾಖಲಾದ ಬಳಿಕ ನಟಿ ಸೌಂದರ್ಯ ಪತಿ ರಘು ಮೊದಲ ಪ್ರತಿಕ್ರಿಯೆ
  • 17 ಏಪ್ರಿಲ್​​​ 2004ರಂದು ಬೆಂಗಳೂರಿಂದ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದ ಸೌಂದರ್ಯ

ಹೈದರಾಬಾದ್: ಸರಿಯಾಗಿ 20 ವರ್ಷಗಳ ಹಿಂದೆ 17 ಏಪ್ರಿಲ್​​​ 2004. ಬೆಂಗಳೂರಲ್ಲಿ ನಟಿ ಸೌಂದರ್ಯ ಅವರು ಎಲೆಕ್ಷನ್​​​​ ಪ್ರಚಾರ ಮುಗಿಸಿ ಹೋಗುವಾಗ ಹೆಲಿಕಾಪ್ಟರ್‌ ಪತನವಾಗಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ಸೌಂದರ್ಯ ಸಾವು ಆಕಸ್ಮಿಕ ದುರಂತ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ನಟ ಮೋಹನ್ ಬಾಬು ವಿರುದ್ಧ ಒಂದು ಪ್ರಕರಣ ದಾಖಲಾಗಿದ್ದು, 20 ವರ್ಷದ ಬಳಿಕ ಸೌಂದರ್ಯ ಅವರನ್ನು ಹತ್ಯೆ ಮಾಡಲಾಗಿದೆ ಅನ್ನೋ ಆರೋಪ ಮಾಡಲಾಗಿದೆ.
ನಟಿ ಸೌಂದರ್ಯ ಅವರಿಗೆ ಸೇರಿದ 6 ಎಕರೆ ಜಮೀನು ಅತಿಕ್ರಮಣ ಹಾಗೂ ನಟ ಮೋಹನ್ ಬಾಬು ವಿರುದ್ಧ ಕೇಳಿ ಬಂದ ಆರೋಪಕ್ಕೆ ನಟಿ ಸೌಂದರ್ಯ ಪತಿ ರಘು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸೌಂದರ್ಯ ಪತಿ ರಘು ಹೇಳಿದ್ದೇನು?
ನಟ ಮೋಹನ ಬಾಬು ವಿರುದ್ಧದ ಆರೋಪಗಳೆಲ್ಲಾ ಸಂಪೂರ್ಣ ಸುಳ್ಳು. ನಟಿ ಸೌಂದರ್ಯ ಹಾಗೂ ನಟ ಮೋಹನ್ ಬಾಬು ಮಧ್ಯೆ ಯಾವುದೇ ಜಮೀನು ವ್ಯವಹಾರ ನಡೆದಿಲ್ಲ. ನನ್ನ ಪತ್ನಿ ದಿವಂಗತ ಸೌಂದರ್ಯರಿಂದ ಯಾವುದೇ ಆಸ್ತಿಯನ್ನ ನಟ ಮೋಹನ್ ಬಾಬು ಅಕ್ರಮವಾಗಿ ಪಡೆದಿಲ್ಲ ಎಂದು ರಘು ಸ್ಪಷ್ಟಪಡಿಸಿದ್ದಾರೆ.

publive-image

ಮೋಹನ್ ಬಾಬು ಸರ್ ಅವರನ್ನು ನಾನು ಕಳೆದ 25 ವರ್ಷಗಳಿಂದ ಬಲ್ಲೆ. ನಮ್ಮ ಮತ್ತು ಅವರ ನಡುವೆ ಬಲವಾದ ಮತ್ತು ಉತ್ತಮ ಸ್ನೇಹ ಸಂಬಂಧ ಇದೆ. ನಾನು, ನನ್ನ ದಿವಂಗತ ಪತ್ನಿ, ಅತ್ತೆ, ಭಾಮೈದ ಎಲ್ಲರೂ ಮೋಹನ್ ಬಾಬು ಅವರ ಮೇಲೆ ಗೌರವ, ನಂಬಿಕೆ ಹೊಂದಿದ್ದೇವೆ. ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ ಎಂದು ಸೌಂದರ್ಯ ಪತಿ ರಘು ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ನಟಿ ಸೌಂದರ್ಯ ಕೇಸ್.. 6 ಎಕರೆ ಭೂಮಿಗಾಗಿ ದುರಂತ ನಡೆಸಿದ್ರಾ? 

ಏನಿದು ಆರೋಪ? ದೂರು ಕೊಟ್ಟಿದ್ದು ಯಾರು?
ತೆಲಂಗಾಣದ ಖಮ್ಮಂ ಜಿಲ್ಲೆ ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಎಂಬಾತ ನಟ ಮೋಹನ್​ ಬಾಬು ವಿರುದ್ಧ ದೂರು ನೀಡಿದ್ದಾರೆ. ಮೋಹನ್ ಬಾಬು ವಾಸವಿರೋ ಹೈದರಾಬಾದಿನ ಜಲಪಲ್ಲಿ ಬಳಿಯ ಟೌನ್​ಶಿಪ್​ ಸೌಂದರ್ಯಾ ಅವರಿಗೆ ಸೇರಿದ್ದು. ಕೂಡಲೇ ಮೋಹನ್ ಬಾಬು ಅವರನ್ನು ಖಾಲಿ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಶಿವ ಶಂಕರ. ಈ ಸಿನಿಮಾದ ನಾಯಕ ಮೋಹನ್​ ಬಾಬು. ಅದೇ ಸಮಯದಲ್ಲಿ ಸೌಂದರ್ಯ ಜಲಪಲ್ಲಿ ಬಳಿ 6 ಎಕರೆ ಜಮೀನು ಖರೀದಿ ಮಾಡಿದ್ದರು. ಈ ವಿಷಯವನ್ನು ಮೋಹನ್ ಬಾಬು ಬಳಿ ಸೌಂದರ್ಯ ಹೇಳಿಕೊಂಡಿದ್ದರು. ಆಗ ಮೋಹನ್ ಬಾಬು ಸೌಂದರ್ಯ ಕಡೆಯಿಂದ ಆ ಜಮೀನು ಖರೀದಿ ಮಾಡಲು ಮುಂದಾದರು. ಅದಕ್ಕೆ ಸೌಂದರ್ಯ ಒಪ್ಪಲಿಲ್ಲ. ಹೀಗಾಗಿ ಮೋಹನ್ ಬಾಬು ಸೌಂದರ್ಯ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment