/newsfirstlive-kannada/media/post_attachments/wp-content/uploads/2025/04/annanya.jpg)
ಅಣ್ಣಯ್ಯ ಅದ್ಭುತವಾದ ಸಂಚಿಕೆಗಳನ್ನ ವೀಕ್ಷಕರಿಗೆ ನೀಡ್ತಿದೆ. ಮಾಕಾಳವ್ವನ ಮಹಾ ದೃಶ್ಯ ವೈಭವ ತೆರೆಮೇಲೆ ವಿಜೃಂಭಿಸುತ್ತಿದೆ. ಶಿವಣ್ಣನ ಮೈ ಮೇಲೆ ಮಾಕಾಳವ್ವ ಆಹ್ವಾನೆ ಆಗ್ತಾಳೆ ಅನ್ನೋದು ಧಾರಾವಾಹಿ ಮೊದಲ ಸಂಚಿಕೆಯಲ್ಲೇ ತೋರಿಸಲಾಗಿತ್ತು. ಆದಾದ ಬಳಿಕ ದೇವಿ ವೈಭವ ಸಾರುವ ದೃಶ್ಯಗಳು ಕೊಂಚ ಕಡಿಮೆ ಆಗಿತ್ತು. ಈಗ ಮತ್ತೊಮ್ಮೆ ಆ ಅದ್ಭುತ ದೃಶ್ಯವನ್ನ ತೋರಿಸುತ್ತಿದೆ ತಂಡ.
ಇದನ್ನೂ ಓದಿ:ಪತ್ನಿ, ಅಪ್ಪ-ಅಮ್ಮನ ಜೊತೆ ಪಹಲ್ಗಾಮ್ಗೆ ಹೋಗಿದ್ದ ಗಣೇಶ್ ಕಾರಂತ್.. ವಿಡಿಯೋದಲ್ಲಿ ಹೇಳಿದ್ದೇನು?
ನಿರ್ಮಾಪಕಿ ಸುಪ್ರಿತಾ ಶೆಟ್ಟಿ ಹಾಗೂ ನಿರ್ದೇಶಕ ರಾಜೇಶ್ ಮಾವಳ್ಳಿ ಕಲ್ಪನೆಯಲ್ಲಿ ಮೈ ಜುಮ್ ಎನಿಸೋ ರೋಮಾಂಚನ ಸೃಷ್ಟಿಸಿದೆ. ವಿಕಾಶ್ ಉತ್ತಯ್ಯ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಮುಗ್ಧ ಶಿವು ತಾಯಿ ಹೊತ್ತು ರೌದ್ರಾವತಾರ ತಾಳೋ ಬದಲಾವಣೆಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ವಿಕಾಶ್.
ಇನ್ನೂ ಸ್ಟೋರಿಗೆ ಬರೋದಾದ್ರೇ, ಊರಿಗೆ ಏನೋ ಕೆಟ್ಟ ಸೂಚನೆ ಸಿಗ್ತಿದೆ ಎಂಬ ಭಯದಲ್ಲಿ ಹಿರಿಯರೆಲ್ಲಾ ಸೇರಿ ತಾಯಿಯನ್ನ ಪ್ರಶ್ನೆ ಮಾಡೋಕೆ ಜಾತ್ರೆ ಏರ್ಪಾಡು ಮಾಡ್ತಾರೆ. ಶಿವು ತಾಯಿಯನ್ನ ಮೈಮೇಲೆ ಆಹ್ವಾನೆ ಮಾಡಬಾರದು ಅಂತ ದುಷ್ಟ ಶಕ್ತಿಯ ಮೋರೆ ಹೋಗ್ತಾನೆ ವಿರಭದ್ರಯ್ಯ. ಮಾಟ ಮಂತ್ರದಿಂದ ತಾಯಿಯನ್ನ ಕಟ್ಟಿಹಾಕೋಕೆ ನೋಡಿದ ವಿರಭದ್ರಯ್ಯನಿಗೆ ತಿರುಗೇಟು ಕೊಟ್ಟಿದ್ದಾಳೆ ದೇವಿ. ಶಿವು ಭಕ್ತಿ ಗೆದ್ದಿದೆ.
ಕಳ್ಳನ ಮನಸ್ಸು ಹುಳ್ಳುಳ್ಳಗೆ ಅನ್ನೋ ಹಾಗೇ ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತೋ ಅನ್ನೋ ಭಯದಲ್ಲಿ ಸೀನ, ಸೀನನ ತಾಯಿ, ವಿರಭದ್ರಯ್ಯ ಸೇರಿದಂತೆ ಎಲ್ಲರೂ ಭಯದಲ್ಲೇ ದೇವಿ ದರ್ಶನ ಮಾಡಿದ್ದಾರೆ. ಮುಂದೆ ತಾಯಿ ಏನ್ ಹೇಳ್ತಾಳೆ ಅನ್ನೋ ಕುತೂಹಲ ವೀಕ್ಷಕರು ನಿರೀಕ್ಷೆಯಿಂದ ಕಾದು ನೋಡುವಂತೆ ಮಾಡಿದೆ ಈ ದೃಶ್ಯ. ಒಟ್ಟಿನಲ್ಲಿ ದೇವಿಪುರದ ಮಾಕಳವ್ವನ ವೈಭವ ಕಲ್ಪನೆ ಆದ್ರೂ ನೋಡುಗರಿಗೆ ಪಾಸಿಟಿವ್ ಎನರ್ಜಿ ಪಾಸ್ ಆದಂತಹ ಅನುಭವ ಕೊಡುತ್ತೆ. ವಿಕಾಶ್ ಅಭಿನಯವನ್ನ ಕಣ್ತುಂಬಿಕೊಳ್ಳೋಕೆ ವೀಕ್ಷಕರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ