ಅಸ್ಮಾ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್.. ಲ್ಯಾಪ್​ಟಾಪ್​​ನಲ್ಲಿ ರಾಸಲೀಲೆ ವಿಡಿಯೋಗಳು..!

author-image
Ganesh
Updated On
ಬೆಂಗಳೂರಲ್ಲಿ ಆಘಾತಕಾರಿ ಘಟನೆ.. ಸುಂದರ ಬದುಕಿಗೆ ವಿದಾಯ ಹೇಳಿದ ಮಹಿಳೆ
Advertisment
  • ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಶಂಕೆ
  • ಮಗಳ ಕೊಲೆ ಮಾಡಿ ನೇಣು ಬಿಗಿದಿದ್ದಾರೆ ಎಂದ ಪೋಷಕರು
  • ಆರೋಪಿ ಬಷೀರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ

ಬೆಂಗಳೂರು: ಅಸ್ಮಾ ಅಸಹಜ ಸಾವು ಪ್ರಕರಣದಲ್ಲಿ ಆರೋಪಿತ ಪತಿ ಬಷೀರ್​ ವುಲ್ಲಾನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿರುವ ಹೆಬ್ಬಾಳ ಪೊಲೀಸರು, ಬಷೀರ್ ಹಾಗೂ ಮೃತ ಅಸ್ಮಾರ ಮೊಬೈಲ್​, ಲ್ಯಾಪ್​ಟಾಪ್​ ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ನಡೆಸ್ತಿರುವ ಪೊಲೀಸ್ ಅಧಿಕಾರಿಗಳಿಗೆ ಅಸ್ಮಾ ಲ್ಯಾಪ್​ಟಾಪ್​ನಲ್ಲಿ ಪತಿಯ ರಾಸಲೀಲೆಗಳು ಸಿಕ್ಕಿವೆ ಎನ್ನಲಾಗಿದೆ.

ಇದೀಗ ಬಷೀರ್​​ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಲ್ಯಾಪ್​ಟಾಪ್​ನಲ್ಲಿ ಇವೆ ಎಂದು ಹೇಳಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೂ ಆರೋಪಿ ಹಲವು ಯುವತಿಯರ ಜೊತೆ ರಿಲೇಷನ್​ಶಿಪ್​​ನಲ್ಲಿ ಇರೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಬಷೀರ್ ವುಲ್ಲ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅಸ್ಮಾ ಮರಣೋತ್ತರ ಪರೀಕ್ಷೆ ರಿಪೋರ್ಟ್​ ಬಂದ ಬಳಿಕ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದತ್ತು ಪುತ್ರ vs ಮನೆ ಮಗ.. ಚಿನ್ನಸ್ವಾಮಿಯಲ್ಲಿ ಇವತ್ತು ಆರ್​ಸಿಬಿ ಸ್ಪೆಷಲ್ ಪ್ಲಾನ್..!

publive-image

ಏನಿದು ಪ್ರಕರಣ..?

ಕಳೆದ ವರ್ಷ 2023ರ ಜುಲೈನಲ್ಲಿ ವಿಜಯನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಾಹರ್ ಅಸ್ಮಾ ಹಾಗೂ ಬಷೀರ್ ವುಲ್ಲಾ ವಿವಾಹ ನಡೆದಿತ್ತು. ಕುಟುಂಬದ ಹಿರಿಯರು ನಿಶ್ವಯಿಸಿದ ಮದುವೆ ಇದಾಗಿತ್ತು. ಪತಿ ಬಷೀರ್ ವುಲ್ಲ ಸುಲ್ತಾನ್ ಪಾಳ್ಯದ ನಿವಾಸಿಯಾಗಿದ್ದ. ಬಾಹರ್ ಅಸ್ಮಾ ಬಾಪೂಜಿನಗರ ಶ್ಯಾಮಣ್ಣ ಗಾರ್ಡನ್ ನಿವಾಸಿಯಾಗಿದ್ದಳು. ಮೃತ ಬಾಹರ್ ಅಸ್ಮಾ ಎಂ.ಎ ಪದವಿಧರೆ. ಈಕೆಯ ಪತಿ ಬಷೀರ್ ವುಲ್ಲ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ಲೈನ್ಸ್ ಸಿಬ್ಬಂದಿಯಾಗಿದ್ದ. ಏರ್ ಲೈನ್ಸ್​ನ ಕ್ರೂ ಮೆಂಬರ್ಸ್​​ಗೆ ಟ್ರೈನಿಂಗ್ ಕೊಡುವ ಕೆಲಸ ಮಾಡ್ತಿದ್ದ. ಈ ಖಾಸಗಿ ಏರ್ಲೈನ್ಸ್​​ನ ಮಹಿಳಾ ಸಿಬ್ಬಂದಿ ಹಾಗೂ ಗಗನಸಖಿಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಅಸ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಆಕೆಯ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪತಿ, ಪತ್ನಿ ಮತ್ತು ಗಗನಸಖಿಯರು.. ಅಸ್ಮಾ ಸಾವಿಗೂ 2 ದಿನ ಮೊದಲು ಏನೆಲ್ಲ ನಡೆಯಿತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment