ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪ್ರೇಯಸಿಯ ಕೈ ಕಟ್‌! ಅಸಲಿಗೆ ಆಗಿದ್ದೇನು?

author-image
admin
Updated On
ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪ್ರೇಯಸಿಯ ಕೈ ಕಟ್‌! ಅಸಲಿಗೆ ಆಗಿದ್ದೇನು?
Advertisment
  • ಆಸ್ಪತ್ರೆಯಲ್ಲಿ ಕೈ ಕಟ್ ಆದ ಮಹಿಳೆಯನ್ನು ಭೇಟಿ ಮಾಡಿದ್ದ ಆರೋಪಿ
  • ಹೇರ್ ಡ್ರೈಯರ್ ಬ್ಲಾಸ್ಟ್ ಮಾಡಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತು
  • ಆರೋಪಿ ಸಿದ್ದಪ್ಪ ಸ್ಕೆಚ್ ಹಾಕಿದ್ದು ಒಬ್ಬರಿಗೆ ಬ್ಲಾಸ್ಟ್ ಆಗಿದ್ದು ಪ್ರೇಯಸಿಗೆ!

ಬಾಗಲಕೋಟೆ: ಇಳಕಲ್ ಮನೆಯಲ್ಲಿ ಬ್ಲಾಸ್ಟ್‌ ಆದ ಹೇರ್ ಡ್ರೈಯರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೇರ್ ಡ್ರೈಯರ್‌ನಿಂದ ಮುಂಗೈ ಕತ್ತರಿಸಿಕೊಂಡಿರುವ ಬಸಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಳಕಲ್ ಪೊಲೀಸರು ಹೇರ್ ಡ್ರೈಯರ್ ಬ್ಲಾಸ್ಟ್ ಆದ ವಾರದಲ್ಲಿ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇರ್ ಡ್ರೈಯರ್ ಬ್ಲಾಸ್ಟ್ ಮಾಡಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತು ಅನ್ನೋದು ಇಳಕಲ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆರೋಪಿ ಸಿದ್ದಪ್ಪ ಶೀಲವಂತ ಇಷ್ಟಕ್ಕೆಲ್ಲಾ ಕಾರಣ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

publive-image

ಅನೈತಿಕ ಸಂಬಂಧವೇ ಕಾರಣ!
ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಕೈ ಕಳೆದುಕೊಂಡ ಬಸಮ್ಮ ಹಾಗೂ ಆರೋಪಿ ಸಿದ್ದಪ್ಪ ಶೀಲವಂತ ಮಧ್ಯೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಬಸಮ್ಮ-ಆರೋಪಿ ಸಿದ್ದಪ್ಪ ಸಂಬಂಧದ ಬಗ್ಗೆ ಸ್ನೇಹಿತೆ ಶಶಿಕಲಾ ತಕರಾರು ಮಾಡಿದ್ದರು. ಶಶಿಕಲಾ ಬುದ್ಧಿವಾದಕ್ಕೆ ಆರೋಪಿ ಸಿದ್ದಪ್ಪ ಕೋಪಗೊಂಡಿದ್ದರು. ಶಶಿಕಲಾರನ್ನು‌ ಮುಗಿಸಲು ಸಿದ್ದಪ್ಪ ಮುಂದಾಗಿದ್ದು, ಆರೋಪಿ ಮಾಡಿದ್ದ ಪ್ಲಾನ್ ತನ್ನ ಪ್ರೇಯಸಿ ಬಸಮ್ಮರಿಗೆ ತಿರುಗು ಬಾಣವಾಗಿದೆ.
ಆರೋಪಿ ಸಿದ್ದಪ್ಪ ತಾನೇ ಹೇರ್ ಡ್ರೈಯರ್ ಖರೀದಿಸಿ ಅದು ಆನ್ ಮಾಡಿದ ಕೂಡಲೇ ಸ್ಫೋಟಗೊಳ್ಳುವಂತೆ ಡಿಟೊನೇಟರ್ ಬಳಸಿದ್ದ. ಬ್ಲಾಸ್ಟ್ ಆಗುವ ಹೇರ್ ಡ್ರೈಯರ್‌ ಅನ್ನು ಆರೋಪಿ ಕೊರಿಯರ್ ಮೂಲಕ ಶಶಿಕಲಾ ವಿಳಾಸಕ್ಕೆ ಕಳುಹಿಸಿದ್ದ.

ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ದುರಂತ.. ಇಬ್ಬರು ಮಕ್ಕಳ ಜೀವ ತೆಗೆದ ಹೆತ್ತತಾಯಿ; ಕಾರಣವೇನು? 

ಅದೃಷ್ಟವಶಾತ್ ಅಂದು ಶಶಿಕಲಾ ಊರಲ್ಲಿ ಇರಲಿಲ್ಲ. ಶಶಿಕಲಾ ತನ್ನ ಸ್ನೇಹಿತೆ ಬಸಮ್ಮಳಿಗೆ ಹೇರ್ ಡ್ರೈಯರ್ ಪಡೆಯುವಂತೆ ತಿಳಿಸಿದ್ದಾಳೆ. ಸ್ನೇಹಿತೆ ಶಶಿಕಲಾ ಹೇಳಿದಂತೆ ಬಸಮ್ಮ ಡಿಟಿಡಿಸಿ ಕೊರಿಯರ್ ಸೆಂಟರ್‌ಗೆ ತೆರಳಿ ಹೇರ್ ಡ್ರೈಯರ್ ಪಡೆದುಕೊಂಡಿದ್ದಾಳೆ.

publive-image

ಕ್ಯೂರಿಯಾಸಿಟಿ ತಂದ ಆಪತ್ತು!
ನವೆಂಬರ್ 15ರಂದು ಮನೆಗೆ ಕೊರಿಯರ್ ಬಾಕ್ಸ್ ತಂದ ಬಸಮ್ಮಳಿಗೆ ಕ್ಯೂರಿಯಾಸಿಟಿ ಹುಟ್ಟಿದೆ. ಕ್ಯೂರಿಯಾಸಿಟಿ ತಾಳದೇ ಹೇರ್ ಡ್ರೈಯರ್ ಆನ್ ಮಾಡಲು ಹೋಗಿದ್ದಾರೆ. ಹೇರ್ ಡ್ರೈಯರ್ ಆನ್ ಮಾಡ್ತಿದ್ದಂತೆ ಅದು ಬ್ಲಾಸ್ಟ್ ಆಗಿದೆ.

ಆರೋಪಿ ಸಿದ್ದಪ್ಪ ಶೀಲವಂತ ಕೊಪ್ಪಳದಲ್ಲಿ ಡಾಲ್ಫಿನ್ ಇಂಟರ್ನ್ಯಾಷನಲ್ ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಂಎ, ಬಿಇಡಿ ಮುಗಿಸಿದ್ದ ಆರೋಪಿ ಕಳೆದ 16 ವರ್ಷಗಳಿಂದ ಗ್ರಾನೈಟ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇರ್ ಡ್ರೈಯರ್ ಒಳಗೆ ಕಲ್ಲುಗಳನ್ನು ಬ್ಲಾಸ್ಟ್ ಮಾಡಲು ಬಳಕೆ ಮಾಡುವ ಡೆಟೋನೇಟರ್ ಹಾಕಿ ಸಂಚು ರೂಪಿಸಿದ್ದ. ಇವನ ದುರಾದೃಷ್ಟಕ್ಕೆ ತನ್ನ ಪ್ರೇಯಸಿಯೇ ಬಲಿಪಶು ಆಗಿದ್ದಾರೆ.

[caption id="attachment_97814" align="aligncenter" width="800"]publive-image ಆರೋಪಿ ಸಿದ್ದಪ್ಪ ಹಾಗೂ ಕೈ ಕಳೆದುಕೊಂಡ ಮಹಿಳೆ ಬಸಮ್ಮ[/caption]

ಸಿದ್ದಪ್ಪ-ಬಸಮ್ಮ ಪರಿಚಯ ಹೇಗಾಯ್ತು?
ಆರೋಪಿ ಸಿದ್ದಪ್ಪ (35), ಬಸಮ್ಮ ಕುಷ್ಟಗಿ ತಾಲ್ಲೂಕಿನ ಪುರ್ತಗೇರಿ ಗ್ರಾಮದವರು. ಒಂದೇ ಊರಲ್ಲಿ ಇದ್ದಾಗ ಇಬ್ಬರ ಮಧ್ಯೆ ಪ್ರೀತಿ‌ ಮೂಡಿತ್ತು. ಆದರೆ ಬಸಮ್ಮ ಮನೆಯವರು ಬಾಗಲಕೋಟೆಯ ರಕ್ಕಸಗಿ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದರು. ಬಸಮ್ಮಳ ಗಂಡ ಯೋಧ ಪಾಪಣ್ಣ ಯರನಾಳ 2017ರಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಜಸ್ಟ್‌ ಮಿಸ್.. ಚಿತೆ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವಾಗ ಎದ್ದು ಕುಳಿತ ವ್ಯಕ್ತಿ; ಇದು ಪವಾಡ ಅಲ್ಲವೇ ಅಲ್ಲ! 

ಕಳೆದ 5 ವರ್ಷಗಳ ಹಿಂದೆ ಬಸಮ್ಮ-ಸಿದ್ದಪ್ಪ ಪುನಃ ಭೇಟಿಯಾಗಿದ್ದಾರೆ. ಇಳಕಲ್‌ ಬಸವನಗರದಲ್ಲಿ ವಾಸವಿದ್ದ ಬಸಮ್ಮ ಮನೆಗೆ ಆರೋಪಿ ಸಿದ್ದಪ್ಪ ಆಗಾಗ ಬಂದು ಹೋಗುತ್ತಿದ್ದ. ಬಾಗಲಕೋಟೆಯ ಮಿಲಿಟರಿ ಕ್ಯಾಂಟೀನ್‌ಗೆ ಬಂದಾಗ ಬಸಮ್ಮ, ಶಶಿಕಲಾಗೆ ಸಿದ್ದಪ್ಪನ ಪರಿಚಯ ಮಾಡಿಸಿದ್ದರು. ಶಶಿಕಲಾ ಇವರಿಬ್ಬದ ಅನೈತಿಕ ಸಂಬಂದಕ್ಕೆ ತಕರಾರು ಮಾಡಿದ್ದರು.

ಶಶಿಕಲಾ ಮಾತಿನಂತೆ ಬಸಮ್ಮ ಪ್ರಿಯಕರ ಸಿದ್ದಪ್ಪಳನ್ನು ದೂರ ಮಾಡಿದ್ದಳು. 15 ದಿನಗಳ ಹಿಂದೆ ಬಸಮ್ಮಳ‌ ಮನೆಗೆ ಸಿದ್ದಪ್ಪ ಬಂದಾಗ ಬೈದು ವಾಪಸ್ ಕಳಿಸಿದ್ದಾಳೆ. ಇದಕ್ಕೆ ಕುಪಿತಗೊಂಡಿದ್ದ ಆರೋಪಿ ಸಿದ್ದಪ್ಪ, ಶಶಿಕಲಾಯಿಂದಲೇ ಬಸಮ್ಮ ದೂರ ಆದಳು ಎಂದು ತೀರ್ಮಾನ ಮಾಡಿದ್ದಾನೆ. ಆ ಮೇಲೆ ಶಶಿಕಲಾ ಮುಗಿಸೋಕೆ ಹೇರ್ ಡ್ರೈಯರ್ ಬ್ಲಾಸ್ಟ್ ಮಾಡುವ ಸಂಚು ರೂಪಿಸಿದ್ದಾನೆ. ಈ ಘಟನೆ ಬಳಿಕ ಗಾಯಾಳು ಬಸಮ್ಮಳನ್ನು ಸಿದ್ದಪ್ಪ ಭೇಟಿ‌ ಮಾಡಿ ಆರೋಗ್ಯ ವಿಚಾರಿಸಿದ್ದಾನೆ. ಆಗಲೂ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಕೊನೆಗೆ ಪೊಲೀಸರ ತನಿಖೆಯಲ್ಲಿ ಸತ್ಯ ಗೊತ್ತಾಗಿದೆ. ಆರೋಪಿ ಸಿದ್ದಪ್ಪ ಸ್ಕೆಚ್ ಹಾಕಿದ್ದು ಶಶಿಕಲಾಗೆ ಆದ್ರೆ ಈಗ ಪೆಟ್ಟು ತಿಂತಿರೋದು ಬಸಮ್ಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment