/newsfirstlive-kannada/media/post_attachments/wp-content/uploads/2024/11/robary.jpg)
ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಬೆಚ್ಚಿ ಬೀಳಿಸೋ ರಾಬರಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಕಾರಿನಲ್ಲಿ ತೆಗೆದುಕೊಂಡು ಹೋಗ್ತಿದ್ದ 1.17 ಕೋಟಿ ಹಣವಿದ್ದ ಕಾರನ್ನೇ ಇಬ್ಬರು ಆರೋಪಿಗಳು ಅಬೇಸ್ ಮಾಡಿಬಿಟ್ಟಿದ್ದರು. ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದಿದ್ದ ಸಂಕೇಶ್ವರ ಪೊಲೀಸರು ಪ್ರಕರಣ ಭೇದಿಸಿದ್ದೇ ರಣರೋಚಕ.
ಇದನ್ನೂ ಓದಿ: ಹೇರ್ ಡ್ರೈಯರ್ ಭಯಾನಕ ಸ್ಫೋಟಕ್ಕೆ ಸಿನಿಮಾವನ್ನು ಮೀರಿಸಿದ ಸಂಚು; ಹುಚ್ಚು ಪ್ರೇಮಿ ಮಾಡಿದ್ದೇನು?
/newsfirstlive-kannada/media/post_attachments/wp-content/uploads/2024/11/robbery2.jpg)
ನವೆಂಬರ್ 15ರಂದು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಹೈವೇಯಲ್ಲಿ ನಡೆದಿದ್ದ ರಾಬರಿ ಪ್ರಕರಣವನ್ನು ಪೊಲೀಸು ಭೇದಿಸಿದ್ದಾರೆ. ಕೇರಳ ಮೂಲದ ಉದ್ಯಮಿ ಭರತ್ ಎಂಬಾತ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಗೋಲ್ಡ್ ಸ್ಮಗ್ಲಿಂಗ್ ಮಾಡ್ತಿದ್ದ. ಭರತ್ ಕಳುಹಿಸಿದ್ದ ಸೂರಜ್, ಅಜಯ್ ಹಾಗೂ ಡ್ರೈವರ್ ಆರೀಫ್ ಕೊಲ್ಲಾಪುರದಲ್ಲಿ ಚಿನ್ನ ಕೊಟ್ಟು ದುಡ್ಡಿನೊಂದಿಗೆ ಕೇರಳಕ್ಕೆ ವಾಪಸ್ ಆಗ್ತಾ ಇದ್ರು. ಈ ವೇಳೆ ಸಂಕೇಶ್ವರ ಬಳಿ ದರೋಡೆ ನಡೆದಿತ್ತು.
/newsfirstlive-kannada/media/post_attachments/wp-content/uploads/2024/11/robbery.jpg)
ರಾಬರಿ ಕೇಸ್​​ಗೆ ಟ್ವಿಸ್ಟ್!
ಗೋಲ್ಡ್ ಸ್ಮಗ್ಲಿಂಗ್ ಮಾಡಲೆಂದೇ ಕಾರು ಮಾಡಿಫೈ ಮಾಡಲಾಗಿತ್ತು, ಮಾಡಿಫೈ ಮಾಡಿ ಕಾರಿನಲ್ಲಿ ಒಂದು ಕಂಪಾರ್ಟಮೆಂಟ್ ನಿರ್ಮಾಣ ಮಾಡಲಾಗಿತ್ತು. ಈ ಕಂಪಾರ್ಮೆಂಟ್​ನಲ್ಲೇ ಚಿನ್ನ ಮಾರಿದ್ದ ಹಣವನ್ನು ಮೂವರು ಕೊಂಡೊಯ್ಯುತ್ತಿದ್ದರು. ಈ ವೇಳೆ ನಕಲಿ ಗನ್​ ತೋರಿಸಿ ಕಾರಿನಲ್ಲಿದ್ದ ಮೂವರನ್ನು ಕೆಳಗಿಸಿ ಕೋಟ್ಯಂತರ ಹಣವಿದ್ದ ಕಾರು ಸಮೇತ ಪರಾರಿಯಾಗಿದ್ದರು, ಉದ್ಯಮಿ ಭರತ್ ಮಾಜಿ ಚಾಲಕನ ಸ್ನೇಹಿತನಾಗಿದ್ದ ಆರೋಪಿ ನವೀನ್​​ ನೀಡಿದ ಮಾಹಿತಿ ಮೇರೆಗೆ ಹೆದ್ದಾರಿಯಲ್ಲೇ ಕಾರು ದರೋಡೆ ನಡೆದಿತ್ತು.
/newsfirstlive-kannada/media/post_attachments/wp-content/uploads/2024/11/robbery3.jpg)
ಕಾರು ದರೋಡೆ ನಡೆದ ಕೂಡಲೇ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು. ಹೈಜಾಕ್ ಆಗಿದ್ದ ಕಾರು ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಪೊಲೀಸರು ತಮ್ಮ ಬೆನ್ನು ಬಿದ್ದಿರುವ ಮಾಹಿತಿ ಅರಿತ ಆರೋಪಿಗಳು ರೂಟ್ ಚೇಂಜ್ ಮಾಡಿದ್ದರು. ಹುಕ್ಕೇರಿಯ ನೇರ್ಲಿ ಗ್ರಾಮದ ಬಳಿ ಕಾರು ನಿಲ್ಲಿಸಿ 16 ಲಕ್ಷ ಎಗರಿಸಿ ಪರಾರಿಯಾಗಿದ್ದರು. ಪೊಲೀಸರ ತಪಾಸಣೆ ವೇಳೆ 1.1 ಕೋಟಿ ಹಣದ ಸಮೇತ ಕಾರು ಪತ್ತೆಯಾಗಿತ್ತು. ಮೊಬೈಲ್ ಟ್ರ್ಯಾಪ್ ಮಾಡಿ ಸಾಂಗ್ಲಿಯಲ್ಲಿ ಆರೋಪಿಗಳಾದ ನವೀನ್ ಹಾಗೂ ಸೂರಜ್​​ನನ್ನ ಬಂಧಿಸಿರುವ ಪೊಲೀಸರು 16 ಲಕ್ಷ ನಗದು ಹಾಗೂ ನಕಲಿ ಗನ್​ ಜಪ್ತಿ ಮಾಡಿದ್ದಾರೆ.
ಕಾರಿನಲ್ಲಿದ್ದವ್ರೇ ಹಣದಾಸೆಗೆ ರಾಬರಿ ಕಥೆ ಕಟ್ಟಿರಬಹುದು ಎಂಬ ಪೊಲೀಸರ ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ ತನಿಖೆ ಬಳಿಕ ಅವರು ಅಮಾಯಕರೆಂದು ತಿಳಿದಿದೆ. ಹಣದಾಸೆಗೆ ಬಿದ್ದ ಮೂವರು ಅಸಲಿ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us