/newsfirstlive-kannada/media/post_attachments/wp-content/uploads/2024/10/bigg-boss.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡು ಎರಡು ವಾರ ಕಳೆದಿದೆ. ಇದೇ ಎರಡು ವಾರದಲ್ಲಿ ಬಿಗ್ಬಾಸ್ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.
ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಅತಿ ದೊಡ್ಡ ಎಡವಟ್ಟು.. ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಕಠಿಣ ಶಿಕ್ಷೆ; ಏನಾಯ್ತು?
ಹೌದು, ಸೆಪ್ಟೆಂಬರ್ 29ರಂದು ಬಹಳ ಅದ್ಧೂರಿಯಾಗಿ ಬಿಗ್ಬಾಸ್ ಓಪನಿಂಗ್ ಪಡೆದುಕೊಂಡಿತ್ತು. ಆದರೆ ಇದೀಗ ಬಿಗ್ಬಾಸ್ ಮನೆ ಪೂರ್ತಿಯಾಗಿ ಬದಲಾಗಿ ಬಿಟ್ಟಿದೆ. ಇಷ್ಟು ದಿನ ನರಕ ಸ್ವರ್ಗ ಎಂಬ ಎರಡು ಕಾನ್ಸೆಪ್ಟ್ಗಳನ್ನು ಒಳಗೊಂಡಿತ್ತು. ಆದರೆ ಬಿಗ್ಬಾಸ್ ಮನೆಯ ಆಟದ ಶೈಲಿ ಈಗ ಬದಲಾಗಿ ಬಿಟ್ಟಿದೆ.
ಇದನ್ನೂ ಓದಿ: BBK11: ಬಿಗ್ಬಾಸ್ ಮನೆಯಲ್ಲಿರೋ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ; ಶೋ ವಿರುದ್ಧ ದೂರು ದಾಖಲು
ನರಕದ ಮನೆಯನ್ನೇ ಬಿಗ್ಬಾಸ್ ತಂಡ ಒಡೆದು ಹಾಕಿದೆ. ಮಹಿಳಾ ಆಯೋಗ ಎಂಟ್ರಿ ಬೆನ್ನಲ್ಲೇ ನರಕವನ್ನು ಡೆಮಾಲಿಷ್ ಮಾಡಲಾಗಿದೆ. ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಸಂಬಂಧ ಬಿಗ್ಬಾಸ್ ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಮಹಿಳಾ ಆಯೋಗವು 5 ದಿನದ ಡೆಡ್ ಲೈನ್ ಕೊಟ್ಟಿತ್ತು. ಅದರಂತೆ ಇಂದಿನ ಎಪಿಸೋಡ್ನಲ್ಲಿ ಬಿಗ್ಬಾಸ್ ತಂಡ ಬಿಗ್ ಮನೆಗೆ ಹೋಗಿ ನರಕದ ಬೇಲಿ ತೆರವು ಮಾಡಿದ್ದಾರೆ.
ಇನ್ನು, ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅದರಲ್ಲಿ 7 ಮಂದಿ ಬಿಗ್ಬಾಸ್ ನರಕಕ್ಕೆ ಸೇರಿದ್ದರು. ಉಳಿದ 10 ಮಂದಿ ಸ್ವರ್ಗಕ್ಕೆ ಸೇರಿದ್ದರು. ನರಕದಲ್ಲಿ ಇರೋ ಸ್ಪರ್ಧಿಗಳಿಗೆ ಸರಿಯಾದ ಊಟ ನೀಡುತ್ತಿರಲಿಲ್ಲ. ಜೊತೆಗೆ ಶೌಚಾಲಯದ ಸಮಸ್ಯೆ ಕೂಡ ಇದೆ ಅಂತ ಸ್ಪರ್ಧಿಗಳು ಕ್ಯಾಮೆರಾ ಮುಂದೆ ಬಂದು ಹೇಳುತ್ತಿದ್ದರು. ಈಗ ಬಿಗ್ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಇಂದಿನ ಎಪಿಸೋಡ್ನಲ್ಲಿ ಏನೆಲ್ಲಾ ಆಯ್ತು ಅಂತ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ