/newsfirstlive-kannada/media/post_attachments/wp-content/uploads/2024/10/bbk-1130.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಮನೆಯಲ್ಲಿ ​ಅಚ್ಚರಿಯ ಸಂಗತಿ ನಡೆದಿದೆ. ಯಾವಾಗ ಯಾರು ಬಿಗ್​ಬಾಸ್​ ಮನೆಯಿಂದ ಅಚ್ಚರಿ ರೀತಿಯಲ್ಲಿ ಆಚೆ ಬರುತ್ತಾರೆ ಅಂತ ಗೊತ್ತಾಗೋದಿಲ್ಲ. ಅದರಲ್ಲೂ ಹಲವಾರು ಅಚ್ಚರಿಯ ಘಟನೆಗಳು ಬಿಗ್​ಬಾಸ್​ನಲ್ಲಿ ನಡೆದಿದೆ.
ಆದರೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 11ರಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ನಡೆದಿದೆ. ಹೌದು, ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​​ ಸಂದರ್ಭದಲ್ಲಿ ಗ್ರ್ಯಾಂಡ್​ ಆಗಿ ವೇದಿಕೆಗೆ ಆಗಮಿಸಿ, ರಾಯಲ್​ ಲುಕ್​ನಲ್ಲಿ ಬಿಗ್​ಬಾಸ್​ ಮನೆಯ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದರಂತೆ ಒಂದು ವಾರ ಬಿಗ್​ಬಾಸ್​ ಮನೆಯ ಸ್ವರ್ಗದಲ್ಲಿ ಆರಾಮದಾಯಕವಾಗಿ ಇದ್ದುಕೊಂಡಿದ್ದ ಲಾಯರ್​ ಜಗದೀಶ್​ ಈಗ ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಬಿಗ್​ಬಾಸ್​ ಮನೆಯ ಮೊದಲ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ ಹಂಸ ಅವರು ತಮ್ಮ ಇಮ್ಯುನಿಟಿ ಮೂಲಕ ಕಿಚ್ಚ ಸುದೀಪ್​ ಮುಂದೆಯೇ ನರಕದಲ್ಲಿದ್ದ ಸ್ಪರ್ಧಿ ರಂಜಿತ್​ ಅವರನ್ನು ಸ್ವರ್ಗಕ್ಕೆ ಕರೆಸಿಕೊಂಡಿದ್ದರು. ಜೊತೆಗೆ ಸ್ವರ್ಗದಲ್ಲಿ ಕಾಲ ಕಳೆಯುತ್ತಿದ್ದ ಲಾಯರ್ ಜಗದೀಶ್​ ಅವರನ್ನು ನೇರವಾಗಿ ನರಕಕ್ಕೆ ಕಳುಹಿಸಲಾಗಿದೆ. ಸದ್ಯ ಮುಂದಿನ ವಾರದವರೆಗೂ ಲಾಯರ್​ ಜಗದೀಶ್​ ನರಕದಲ್ಲಿ ಹೇಗೆ ಕಾಲ ಕಳೆಯುತ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ