ಸೇತುವೆಯಿಂದ ನದಿಗೆ ತಳ್ಳಿದ ಕೇಸ್​ಗೆ ಟ್ವಿಸ್ಟ್‌.. ಬಂಧನದ ಭೀತಿಯಲ್ಲಿ ತಾತಪ್ಪ, ಆತನ ಕುಟುಂಬಸ್ಥರು..!

author-image
Ganesh
Updated On
ಸೇತುವೆಯಿಂದ ನದಿಗೆ ತಳ್ಳಿದ ಕೇಸ್​ಗೆ ಟ್ವಿಸ್ಟ್‌.. ಬಂಧನದ ಭೀತಿಯಲ್ಲಿ ತಾತಪ್ಪ, ಆತನ ಕುಟುಂಬಸ್ಥರು..!
Advertisment
  • ಪತಿ ತಾತಪ್ಪ ವಿರುದ್ಧ ಮಹಿಳಾ ಠಾಣೆಯಲ್ಲಿ ಎಫ್‌ಐಆರ್
  • ಶಾಲಾ ದಾಖಲಾತಿ ಬಹಿರಂಗ ಪಡಿಸಿದೆ ಸ್ಫೋಟಕ ಸತ್ಯ
  • ರಾಯಚೂರಿನ ಗುರ್ಜಾಪುರ ಬ್ರಿಡ್ಜ್‌ ಕಂ ಬ್ಯಾರೇಜ್‌ ನಡೆದಿದ್ದ ಕೇಸ್

ರಾಯಚೂರಿನ ಗುರ್ಜಾಪುರ ಬ್ರಿಡ್ಜ್‌ ಕಂ ಬ್ಯಾರೇಜ್‌ ಬಳಿ ಸೇತುವೆ ಮೇಲಿಂದ ಪತಿಯನ್ನು ಪತ್ನಿ ನದಿಗೆ ತಳ್ಳಿದ್ದಾಳೆ ಎಂಬ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. ಸೇತುವೆಯಿಂದ ಪತಿ ನದಿಗೆ ತಳ್ಳಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಸೇತುವೆಯಿಂದ ಪತಿಯನ್ನ ನದಿಗೆ ತಳ್ಳಿದ ಕೇಸ್​ಗೆ ಟ್ವಿಸ್ಟ್‌

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗುರ್ಜಾಪುರ ಬ್ಯಾರೇಜ್‌ನಿಂದ ಹರಿಯುವ ನೀರಿಗೆ ಪತಿಯನ್ನು ಪತ್ನಿಯೇ ನೂಕಿರುವ ಘಟನೆ ಜುಲೈ 11ರಂದು ನಡೆದಿತ್ತು. ಪತಿಯೇ ಪತ್ನಿಯ ವಿರುದ್ಧ ಆರೋಪ ಮಾಡಿದ್ದರೂ, ಪೊಲೀಸ್ ಠಾಣೆಗೆ ದೂರು ನೀಡದೇ ರಾಜಿ ಸಂಧಾನದ ಮೂಲಕವೇ ವಿವಾಹ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರ ಹಿಂದಿನ ಪ್ರಮುಖ ಕಾರಣವೀಗ ಬಯಲಾಗಿದೆ. ಇದು ಬಾಲ್ಯವಿವಾಹ ನಡೆದಿರುವ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅಚ್ಚರಿ ಮೂಡಿಸಿದ ಧನಕರ್ ದಿಢೀರ್​ ರಾಜೀನಾಮೆ.. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಏನಿದೆ..?

ಶಾಲಾ ದಾಖಲಾತಿಯ ಪ್ರಕಾರ ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವುದು ದೃಢಪಟ್ಟಿದೆ. 15 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿ ಎನ್ನುವುದು ತಿಳಿದು ಬಂದಿದೆ. ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿಗಳ ತಂಡದಿಂದ ಇದನ್ನು ಪತ್ತೆ ಮಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಇದರ ಬೆನ್ನಲ್ಲೇ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಾತಪ್ಪ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ.

ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಅಧಿಕಾರಿಗಳು ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರ ಅನ್ವಯ A1 ಆರೋಪಿ ಪತಿ ತಾತಪ್ಪ, A2 ತಾತಪ್ಪನ ತಾಯಿ, A3 ಅಪ್ರಾಪ್ತೆಯ ತಾಯಿ.. ಹೀಗೆ ಮೂವರ ವಿರುದ್ಧ ಸೆಕ್ಷನ್ 9 ಹಾಗೂ 10ರ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಆಕಾಶ್ ದೀಪ್ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಶಾಕ್.. ಸ್ಟಾರ್​ ಆಲ್​ರೌಂಡರ್ ಔಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment