ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠಾ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್​ಗೆ ಭಾರೀ ಮೆಚ್ಚುಗೆ

author-image
Veena Gangani
Updated On
ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠಾ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್​ಗೆ ಭಾರೀ ಮೆಚ್ಚುಗೆ
Advertisment
  • ಆಹ್ಹಾ ನನ್ನ ಮದುವೆಯಂತೆ ಅಂತ ಕುಣಿದು ಕಪ್ಪಳಿಸುತ್ತಿರೋ ಶ್ರೇಷ್ಠ
  • ‘ಭಾಗ್ಯ ಇದು, ಇದು.. ಚೆನ್ನಾಗಿರೋದು’ ಎಂದು ಹಾಡಿ ಹೊಗಳುತ್ತಿರೋ ಫ್ಯಾನ್ಸ್​
  • ಮದುವೆಯಾಗೋ ತವಕದಲ್ಲಿದ್ದಾರೆ ಭಾಗ್ಯಳ ಪತಿ ತಾಂಡವ್ ಹಾಗೂ ಶ್ರೇಷ್ಠ​

ಅತ್ತೆ-ಸೊಸೆಯರ ಸೀರಿಯಲ್​ ಕತೆಗಳಲ್ಲಿ ಪ್ರತಿ ಭಾರೀ ಜಗಳ, ಮುನಿಸು ಸರ್ವೇ ಸಾಮಾನ್ಯ. ಮೊಟ್ಟ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅತ್ತೆ ಸೊಸೆಯ ಕಾಂಬಿನೇಷನ್​ನ ಮೈನ್ ಆಗಿ ಫೋಕಸ್ ಮಾಡಲಾಗಿದೆ. ಈ ಸೀರಿಯಲ್​ನಲ್ಲಿ ಅತ್ತೆ ಸೊಸೆಯನ್ನ ತುಂಬಾ ಪಾಸಿಟಿವ್ ಆಗಿ ತೋರಿಸಿದ್ದಾರೆ. ಇದೇ ಕಾರಣದಿಂದಾಗಿ ಈ ಸೀರಿಯಲ್​ಗೆ ಒಂದು ತೂಕ ಬಂದಿದೆ.

publive-image

ಗೃಹಿಣಿ ಬದುಕನ್ನ ವಿಭಿನ್ನ ರೀತಿಯಲ್ಲಿ ಪ್ರೆಸೆಂಟ್​ ಮಾಡುತ್ತಿರುವ ಭಾಗ್ಯಲಕ್ಷ್ಮೀಗೆ ವೀಕ್ಷಕರೂ ಭೇಷ್​ ಎನ್ನುತ್ತಿದ್ದಾರೆ. ಅದರಲ್ಲೂ ಅತ್ತೆ-ಸೊಸೆ ಕಾಂಬಿನೇಷನ್​ ಸೂಪರ್​ ಡೂಪರ್​ ಹಿಟ್​ ಆಗಿದೆ. ಸೊಸೆಯನ್ನು ಓದಿಸುವ ಕುಸುಮಾ ನಿರ್ಧಾರಕ್ಕೆ ಪ್ರಶಂಸೆ ಕೇಳಿ ಬಂದಿತ್ತು. ಗಂಡನಿಗೆ ಬೇಡವಾದ ಭಾಗ್ಯ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂದು ವೀಕ್ಷಕರು ಕುತೂಹಲ ಭರಿತರಾಗಿದ್ದಾರೆ. ಅದರಲ್ಲೂ ಕಳೆದ ಒಂದು ವಾರದಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತದೆ. ಏನೂ ಬರದಿದ್ದ ಭಾಗ್ಯ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡು ಮತ್ತೆ ಸ್ಟಾರ್​ ಆಗಿದ್ದಳು. ಆದರೆ ಶ್ರೇಷ್ಠಾಳ ಕುತಂತ್ರದಿಂದ ಮತ್ತೆ ಭಾಗ್ಯ ನೋವು ಪಡುವಂತಾಗಿತ್ತು.

ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್‌ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?

publive-image

ಭಾಗ್ಯಳ ವಿರುದ್ಧ ಸುಖಾ ಸುಮ್ಮನೆ ದುಡ್ಡು ಕೊಟ್ಟು ವಿಡಿಯೋ ವೈರಲ್​ ಮಾಡಿಸಿದ್ದಳು ಶ್ರೇಷ್ಠ. ಸ್ಟಾರ್ ಹೋಟೆಲ್​ ನೌಕರಿ ಸಿಕ್ಕ ಕೂಡಲೇ ಡಿವೋರ್ಸ್​ ಕೊಡಲು ಮುಂದಾಗಿದ್ದಾಳೆ ಎಂದೆಲ್ಲಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಈ ವಿಡಿಯೋ ಮಾಡಿಸಿದ್ದು ಯಾರು ಅಂತ ಭಾಗ್ಯಳಿಗೆ ತಿಳಿದಿದೆ. ನನ್ನ ವಿರುದ್ಧ ವಿಡಿಯೋ ಹರಿಬಿಡುವಂತೆ ಮಾಡಿದ್ದು ಶ್ರೇಷ್ಠ ಎನ್ನುವ ಸತ್ಯ ಭಾಗ್ಯಳಿಗೆ ತಿಳಿದ ಕೂಡಲೇ ಕೆಂಡಾಮಂಡಲ ಆಗಿದ್ದಾಳೆ. ಅತ್ತ ಶ್ರೇಷ್ಠಾಳ ಅಪ್ಪ-ಅಮ್ಮ ಮಗಳ ಕನ್ಯಾಶುದ್ಧಿ ಸಂಭ್ರಮದಲ್ಲಿದ್ದರು. ಇದರ ನಡುವೆಯೇ ಭಾಗ್ಯ ಅಲ್ಲಿಗೆ ಬಂದು ತಾನೇ ಕನ್ಯಾಶುದ್ಧಿ ಮಾಡುತ್ತೇನೆ ಎಂದು ಹೇಳಿ ಎಂಟ್ರಿ ಕೊಟ್ಟಿದ್ದಾಳೆ. ಕೊನೆಗೆ ರೆಡಿಯಾಗಿ ಕುಳಿತಿದ್ದ ಶ್ರೇಷ್ಠಾಳಿಗೆ ಬಿಂದಿಗೆಯಿಂದ ನೀರು ಸುರಿದಿದ್ದಾಳೆ. ಇದನ್ನು ನೋಡಿದ ಶ್ರೇಷ್ಠಾಳ ಅಪ್ಪ-ಅಮ್ಮ ಶಾಕ್​ ಆಗಿದ್ದಾರೆ.

publive-image

ಶ್ರೇಷ್ಠಾಳಿಗೆ ಬುದ್ಧಿ ಕಲಿಸುವುದಾಗಿ ಪಣತೊಟ್ಟಿರೋ ಭಾಗ್ಯಳನ್ನು ನೋಡಿದ ಸೀರಿಯಲ್​ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ಆದರೆ ಭಾಗ್ಯಳಿಗೆ ಅವರ ಕುಟುಂಬಸ್ಥರಿಗೆ ಶ್ರೇಷ್ಠಾ ಮದುವೆಯಾಗುತ್ತಿರುವುದು ತಾಂಡವ್​ನನ್ನೇ ಎನ್ನುವ ಸತ್ಯ ತಿಳಿದಿಲ್ಲ. ಅದು ತಿಳಿದ ಮೇಲೆ ಭಾಗ್ಯಳ ಸ್ಥಿತಿ ಹೇಗಿರುತ್ತೆ? ಭಾಗ್ಯ ಆಗ ಶ್ರೇಷ್ಠಾಗೆ ಹೇಗೆ ಬುದ್ದಿ ಕಲಿಸುತ್ತಾಳೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment