ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರನ ಸಾವಿ​ಗೆ ಬಿಗ್​ ಟ್ವಿಸ್ಟ್​; ಹನಿಟ್ರ್ಯಾಪ್​ಗೆ ಬಲಿಯಾದ್ರಾ?

author-image
Veena Gangani
Updated On
ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರನ ಸಾವಿ​ಗೆ ಬಿಗ್​ ಟ್ವಿಸ್ಟ್​; ಹನಿಟ್ರ್ಯಾಪ್​ಗೆ ಬಲಿಯಾದ್ರಾ?
Advertisment
  • ಬ್ಯುಸಿನೆಸ್‌ನಲ್ಲಿ ಚೆನ್ನಾಗಿದ್ದವ ಆತ್ಮಹತ್ಯೆಯ ಮೊರೆ ಹೋಗಿದ್ದು ಏಕೆ?
  • ಶಾಸಕ ಸಹೋದರ ಆತ್ಮಹತ್ಯೆಗೆ ಶರಣಾಗುವಂತಾದ್ದು ಏನಾಗಿತ್ತು?
  • ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ ಮಾಜಿ ಶಾಸಕ ಸಹೋದರ ಸಾವು

ಬರೋಬ್ಬರಿ 24 ಗಂಟೆ ಬಳಿಕ ಮಾಜಿ ಶಾಸಕ ಮೊಯಿದ್ದೀನ್​ ಸಹೋದರ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಆದ್ರೀಗ ಉತ್ತರ ಸಿಗದ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಮಾಜಿ ಶಾಸಕನೊಬ್ಬನ ಸಹೋದರ ಆತ್ಮಹತ್ಯೆಗೆ ಶರಣಾಗುವಂತಾದ್ದು ಏನಾಗಿತ್ತು? ಬ್ಯುಸಿನೆಸ್‌ನಲ್ಲಿ ಚೆನ್ನಾಗಿದ್ದವ ಆತ್ಮಹತ್ಯೆಯ ಮೊರೆ ಹೋಗಿದ್ದು ಏಕೆ? ಈ ಸಾವಿನ ಹಿಂದೆ ಕಾಣದ ಕೈವಾಡಗಳು ಕೆಲಸ ಮಾಡಿದ್ವಾ? ಈ ಸಾವಿನ ಹಿಂದೆ ಹೆಣ್ಣಿನ ನೆರಳು ಬಿದ್ದಿದ್ಯಾಕೆ ಎಂಬ ಗೊಂದಲಗಳು ಸೃಷ್ಟಿಯಾಗಿವೆ.

publive-image

ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ, ಭಾನುವಾರ ಮುಂಜಾನೆ 3 ಗಂಟೆಗೆ ಮನೆ ಬಿಟ್ಟವರು ಎಲ್ಲಿದ್ದಾರೆ. ಏನಾಗಿದ್ದಾರೆ ಅನ್ನೋ ಸುಳಿವೇ ಸಿಕ್ಕಿರಲಿಲ್ಲ. ಆದ್ರೆ ಕುಳೂರು ಬ್ರಿಡ್ಜ್‌ ಬಳಿ ಕಾರು ನಿಲ್ಲಿಸಿ, ಬಳಿಕ ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿಯಷ್ಟೆ ಸಿಕ್ಕಿತ್ತು. ಕಾರು ನಿಲ್ಲಿಸಿದ ನಂತರ ಫಲ್ಗುಣಿ ನದಿಗೆ ಅವರು ಹಾರಿರಬಹುದಾ ಅನ್ನೋ ಅನುಮಾನವಿತ್ತು. ಹೀಗಾಗಿ ಪಲ್ಗುಣಿ ನದಿಯಲ್ಲಿ ಮುಮ್ತಾಜ್ ಅಲಿಗಾಗಿ ಶೋಧ ಕಾರ್ಯ ನಡೆದಿತ್ತು. ಭಾನುವಾರ ಏಳು ತಂಡಗಳು ಫಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸಿದ್ರು. ಆದ್ರೆ ಎಷ್ಟೆ ಹುಡಕಿದ್ರೂ ಮುಮ್ತಾಜ್ ಅಲಿ ಸಿಕ್ಕಿರಲಿಲ್ಲ. ಆದ್ರೆ 28 ಗಂಟೆ ಬಳಿಕ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಮುಮ್ತಾಜ್ ಅಲಿಯ ಮೃತದೇಹ ನೋಡ್ತಿದ್ದಂತೆ ಇಡೀ ಕುಟುಂಬ ನದಿ ದಡದಲ್ಲಿ ಗೋಳಾಟವಿಟ್ಟಿತ್ತು. ಅದ್ರಲ್ಲೂ ಮಾಜಿ ಶಾಸಕ ಮೊಯಿದ್ದೀನ್ ಅಕ್ಷರಶಃ ಕಂಗಾಲ ಆಗಿ ಹೋಗಿದ್ದರು.

ಇದನ್ನೂ ಓದಿ: BBK11: ಜಗದೀಶ್​ ಅಲ್ವಂತೆ! ಬಿಗ್​ ಬಾಸ್​ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!

ಹೌದು, ಮಾಜಿ ಶಾಸಕನ ಸಹೋದರನೊಬ್ಬನ ಸಾವಿನ​ ಹಿಂದೆ ಈಗ ಹತ್ತು ಹಲವು ಅನುಮಾನಗಳನ್ನ ಹುಟ್ಟಿ ಹಾಕಿದೆ. ಒಬ್ಬ ಮಾಜಿ ಶಾಸಕನ ಆತ್ಮಹತ್ಯೆಗೆ ಶರಣಾಗೋದು ಮನೆಯವರಿಗೂ ಶಾಕ್ ನೀಡಿದ್ದು ಮಾತ್ರವಲ್ಲ ರಾಜ್ಯದಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಯಾಕಂದ್ರೆ ಮುಮ್ತಾಜ್ ಅಲಿ ಬ್ಯುಸಿನೆಸ್​ನಲ್ಲಿ ಲಾಸ್ ಆಗಿರಲಿಲ್ಲ. ಮನೆಯಲ್ಲೂ ಅಂತಾ ಸಮಸ್ಯೆಗಳು ಏನಿರಲಿಲ್ಲ. ಹೀಗಿರುವಾಗ ಮುಮ್ತಾಜ್ ಫಲ್ಗುಣಿ ನದಿಗೆ ಹಾರಿದ್ದೇಕೆ? ಅನ್ನೋದು ಈಗ ಎಲ್ಲರಿಗೂ ಕಾಡ್ತಿರುವ ಪ್ರಶ್ನೆ. ಇದೆಲ್ಲದರ ಮಧ್ಯೆ ಮುಮ್ತಾಜ್ ಅಲಿ ಆತ್ಮಹತ್ಯೆ ಹಿಂದೆ ಅದೊಂದು ಹೆಣ್ಣಿನ ನೆರಳು ಇರೋದು ಈ ಕೇಸ್​ಗೆ ಟ್ವಿಸ್ಟ್ ನೀಡಿದೆ.

publive-image

ಮುಮ್ತಾಜ್ ಅಲಿ ಆತ್ಮಹತ್ಯೆ ಹಿಂದೆ ಆ ಮಹಿಳೆ ನೆರಳು ಇದ್ಯಾ?

ಮುಮ್ತಾಜ್ ಅಲಿ ನಾಪತ್ತೆ ಸದ್ದು ಜೋರಾಗ್ತಿದ್ದಂತೆ ಖುದ್ದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸಹೋದರ ಸಾವಿಗೆ ಬ್ಲಾಕ್ ಮೇಲ್ ಕಾರಣ ಅಂತ ಹೇಳಿದ್ರು. ಮುಮ್ತಾಜ್ ಅಲಿ ಮಂಗಳೂರಲ್ಲೀ ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಂತ ವ್ಯಕ್ತಿ. ಬ್ಲ್ಯಾಕ್ ಮೇಲ್ ಕಾರಣಕ್ಕೆ ಮುಮ್ತಾಜ್​ ಸಾವಿನ ನಿರ್ಧಾರ ಮಾಡಿದ್ದಾರೆ ಅನ್ನೋ ಸ್ಫೋಟಕ ವಿಚಾರ ಹೇಳಿದ್ರು. ಇದಕ್ಕೆ ಪುಷ್ಟಿ ನೀಡುವಂತೆ ಮುಮ್ತಾಜ್ ಅಲಿ ಸೂಸೈಡ್ ಹಿಂದೆ ಅದೊಬ್ಬ ಹೆಣ್ಣಿನ ಕರಿಚಾಯೆ ಇರೋ ಅನುಮಾನ ವ್ಯಕ್ತವಾಗಿದೆ. ಮುಮ್ತಾಜ್ ಅಲಿ ಶವ ಪತ್ತೆಯಾಗ್ತಿದ್ದಂತೆ ಆರು ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಆರೋಪಿಗಳ ಲಿಸ್ಟ್​ನಲ್ಲಿ ರೆಹಮತ್ ಅನ್ನೋ ಮಹಿಳೆ ಹೆಸರು ಕೂಡ ಇದೆ. ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಎಫ್ಐಆರ್ ಹಾಕಲಾಗಿದ್ದು, ರೆಹಮತ್ ಹಾಗೂ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:BBK11: ಧನ್​ರಾಜ್​ ಮಾತ್ರವಲ್ಲ, ಈ ಸ್ಪರ್ಧಿ ಇನ್ನೂ ಆಟ ಪ್ರಾರಂಭಿಸಿಲ್ವಂತೆ! ನಟಿಯ ಬಾಯಾರೆ ಕೇಳಿ ಈ ಮಾತು

ಈ ಮಹಿಳೆಯನ್ನ ಬಳಸಿಕೊಂಡು ಷಡ್ಯಂತ್ರ ಮಾಡಿ ಮುಮ್ತಾಜ್​ ಜೀವ ಬಲಿ ಪಡೆದಿರೋದಾಗಿ ಮೊಯಿದ್ದೀನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆರು ಜನ ಸೇರಿಯೇ ಮುಮ್ತಾಜ್ ಅಲಿಗೆ ಕಿರುಕುಳ ಕೊಟ್ಟಿರೋದಾಗಿ ಮೊಯಿದ್ದೀನ್ ಆರೋಪಿಸಿದ್ದಾರೆ. ಈ ಆರು ಜನ ಸೇರಿ ಲಕ್ಷ ಲಕ್ಷ ಹಣ ಪೀಕಿರೋದಾಗಿ ಮೊಯಿದ್ದೀನ್ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಮುಮ್ತಾಜ್ ಅಲಿಗೆ ರೆಹಮತ್ ಬ್ಲಾಕ್ ಮಾಡಿದ್ದರ ಹಿಂದೆ ಒಂದು ಕಾರಣವಿದೆ. ಅದೊಂದು ಕಾರಣಕ್ಕೆ ಮುಮ್ತಾಜ್ ಬಳಿ ರೆಹಮತ್ ಲಕ್ಷ ಲಕ್ಷ ಹಣ ಕೂಡ ಪೀಕಿದ್ದಾಳಂತೆ. ಹಾಗಾದ್ರೆ ಯಾರು ಈ ರೆಹಮತ್​? ಮುಮ್ತಾಜ್ ಈಕೆ ಬೆದರಿಕೆಗೆ ಅಂಜಿದ್ದೇಕೆ? ಅಂತ ನೋಡಿದ್ರೆ ಅಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುತ್ತಿವೆ.ಈಗ ಮುಮ್ತಾಜ್ ಅಲಿಯದ್ದು ಆತ್ಮಹತ್ಯೆ ಅಂತಲೇ ದೂರು ದಾಖಲಾಗಿಸಲಾಗಿದೆ. ಇದರಲ್ಲಿ ಈ ರೆಹಮತ್​ ಅನ್ನೋ ಮಹಿಳೆಯನ್ನ ಬಳಸಿಕೊಂಡು ಮುಮ್ತಾಜ್​ ಅಲಿಗೆ ಟಾರ್ಚರ್ ನೀಡಿರೋದಾಗಿ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

publive-image

ಮುಮ್ತಾಜ್ ಅಲಿ ಮಂಗಳೂರಿನಲ್ಲಿ ಒಳ್ಳೆ ಹೆಸರಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾಜಿ ಶಾಸಕನ ಸಹೋದರ ಬೇರೆ. ಹೀಗಾಗಿ ಹೇಗಾದ್ರೂ ಮಾಡಿ ಮುಮ್ತಾಜ್ ಅಲಿ ಇಮೇಜ್ ಹಾಳು ಮಾಡಬೇಕು ಅನ್ನೋ ಕಾರಣಕ್ಕೆ ಈ ರೆಹಮತ್ ಅನ್ನೋ ಮಹಿಳೆ ಮೂಲಕ ಮುಮ್ತಾಜ್​ಗೆ ಖೆಡ್ಡ ತೋಡಿದ್ದಾರೆ ಅನ್ನೋ ಮಾಹಿತಿ ತಿಳಿದು ಬಂದಿದೆ. ರೆಹಮತ್ ಜೊತೆಗೂಡಿ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ಈ ಆರು ಜನ ಮುಮ್ತಾಜ್​ ಅಲಿಯ ಹೆಸರನ್ನ ಹಾಳು ಮಾಡ್ಬೇಕು ಅಂತ ಇಲ್ಲ ಸಲ್ಲದ ಸುಳ್ಳು ಪ್ರಚಾರಗಳನ್ನ ಮಾಡಿದ್ರಂತೆ. ರೆಹಮತ್ ಜೊತೆ ಮುಮ್ತಾಜ್ ಅಲಿಗೆ ಸಂಬಂಧವಿದೆ ಅನ್ನೋ ಕಟ್ಟು ಕತೆಗಳನ್ನ ಕಟ್ಟಿದ್ರಂತೆ. ಈ ವಿಚಾರವನ್ನೂ ಇಟ್ಕೊಂಡು ಮುಮ್ತಾಜ್ ಅಲಿಗೆ ಬ್ಲಾಕ್ ಮೇಲ್ ಕೂಡ ಮಾಡಿದ್ದು, ಇದೇ ಕಾರಣಕ್ಕೆ ಮುಮ್ತಾಜ್​ ಅಲಿ ಪಲ್ಗುಣಿ ನದಿಗೆ ಹಾರಿ ಸೂಸೈಡ್ ಮಾಡಿಕೊಂಡಿರಬಹುದು ಅಂತ ಮಾಹಿತಿ ತಿಳಿದು ಬಂದಿದೆ.

ಮುಮ್ತಾಜ್ ಅಲಿ ಸಾವಿನ ಹಿಂದಿರುವ ಆರು ಕೈಗಳು ಕೇವಲ ಗೌರವಕ್ಕೆ ದಕ್ಕೆ ತರೋದು ಮಾತ್ರವಲ್ಲ ಮುಮ್ತಾಜ್​ನಿಂದ ಲಕ್ಷ ಲಕ್ಷ ಹಣ ಕೂಡ ಪೀಕಿದ್ದಾರೆ. 2024ರ ಜುಲೈನಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನ ಈ ಗ್ಯಾಂಗ್ ವಸೂಲಿ ಮಾಡಿದೆಯಂತೆ. ಜಸ್ಟ್ ಮೂರು ತಿಂಗಳಲ್ಲಿ ಅರ್ಧ ಕೋಟಿಯನ್ನ ಮುಮ್ತಾಜ್ ಅಲಿಯಿಂದ ರೆಹಮತ್ ಗ್ಯಾಂಗ್​ ಪಡೆದಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಐವತ್ತು ಲಕ್ಷದಲ್ಲಿ 25 ಲಕ್ಷ ಹಣವನ್ನ ರೆಹಮತ್​ ಅನ್ನೋ ಮಹಿಳೆ ಚೆಕ್ ಮೂಲಕ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಗ್ಯಾಂಗ್​ ಮೇಲೆ ಅನುಮಾನ ಹುಟ್ಟಿಕೊಂಡಿದ್ದು, ಈ ಪೈಕಿ ಪೊಲೀಸರು ಮೂವರನ್ನ ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸ್ತಿದ್ದಾರೆ. ಈ ಕೇಸ್​ನಲ್ಲಿ ರೆಹಮತ್ ಅನ್ನೋ ಮಹಿಳೆ ಹೆಸರು ಮುಂಚೂಣಿಯಲ್ಲಿದ್ರೂ. ಇದ್ರ ಹಿಂದೆ ಕಾಣದ ಕೈಗಳ ಕೈವಾಡವಿರೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಅದ್ರಲ್ಲೂ ನಟೋರಿಯಸ್ ಸತ್ತಾರ್​ ಹೆಸರು ಕೂಡ ಇಲ್ಲಿ ತಳಕು ಹಾಕಿಕೊಂಡಿದ್ದು, ಈ ಸತ್ತಾರ್​ ಎಲ್ಲದಕ್ಕೂ ಮೂಲಕ ಕಾರಣ ಅನ್ನೋ ಅನುಮಾನವಿದೆ.

ಮುಮ್ತಾಜ್​ ಅಲಿಗೆ ಸತ್ತಾರ್ ರಾಜಕೀಯ ವಿರೋಧಿ. ರಾಜಕೀಯ ದ್ವೇಷಕ್ಕೆ ಮಹಿಳೆಯನ್ನ ಮುಂದಿಟ್ಟಕೊಂಡು ಮುಮ್ತಾಜ್​​ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ. ಕೇವಲ ಮುಮ್ತಾಜ್​ಗೆ ಮಾತ್ರವಲ್ಲ ಅಲಿ ಕುಟುಂಬಕ್ಕೂ ಜೀವ ಬೆದರಿಕೆ ಹಾಕಿರುವ ಅಂಶ ಈಗ ಬಯಲಾಗಿದೆ. ಮುಮ್ತಾಜ್ ಅಲಿ ಆತ್ಮಹತ್ಯೆ ನಿರ್ಧಾರ ಕೈಗೊಳ್ಳೋದಕ್ಕೆ ಕಾರಣವಾಗಿದ್ದೇ ಈ ಸತ್ತಾರ್ ಅನ್ನೋ ಮಾತು ಕೇಳಿ ಬರ್ತಿದೆ. ರಾಜಕೀಯ ವಿರೋಧಿಯಾಗಿರುವ ಸತ್ತಾರ್​ ಮುಮ್ತಾಜ್ ಅಲಿಯನ್ನ ಮುಗಿಸುವ ಹುನ್ನಾರ್ ಮಾಡಿ ಈಗ ಸೂಸೈಡ್​ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾನೆ ಅನ್ನೋ ಸ್ಫೋಟಕ ಮಾಹಿತಿ ಈಗ ರಿವೀಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment