/newsfirstlive-kannada/media/post_attachments/wp-content/uploads/2025/04/TMK-RAJANNA-CASE.jpg)
ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ಎ1 ಆರೋಪಿ ಸೋಮ ಸಹ ಪೊಲೀಸರ ಮುಂದೆ ಶರಣಾಗಿ ಕೇಸ್ಗೆ ಹೊಸ ಟ್ವಿಸ್ಟ್ ನೀಡಿದ್ದಾನೆ. ಇತ್ತ ಹನಿಟ್ರ್ಯಾಪ್ ಹಲ್ಚಲ್ ಬಗ್ಗೆ ಹೈಕಮಾಂಡ್ಗೆ ದೂರು ನೀಡಿರೋ ರಾಜಣ್ಣ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹಲ್ಚಲ್ ಸೃಷ್ಟಿಸಿದ್ದ ಎಂಎಲ್ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.. ಅವರ ಬಿಟ್ಟು ಇವರ ಬಿಟ್ಟು ಇವಱರು ಅಂತ ಸುಪಾರಿ ಕೇಸ್ನಲ್ಲಿ ಒಬ್ಬೊಬ್ಬರೇ ಲಾಕ್ ಆಗ್ತಿದ್ದಾರೆ. ಸದ್ಯ ಸುಪಾರಿ ಕೇಸ್ನ ಮಾಸ್ಟರ್ ಮೈಂಡ್ ಹಾಗೂ ಎ1 ಆರೋಪಿಯಾಗಿರೋ ಸೋಮ ಸಹ ಸರಂಡರ್ ಆಗಿದ್ದಾನೆ.
ಎಲ್ಲಾ ಆರೋಪಿಗಳು ಅಂದರ್!
ಪರಿಷತ್ ಸದಸ್ಯ ಆರ್. ರಾಜೇಂದ್ರ ಕೊಲೆ ಸಂಚು ಪ್ರಕರಣದ ತನಿಖಾ ತಂಡ ಬದಲಾಗಿದ್ದು ಕಾರ್ಯಾಚರಣೆ ಮಿಂಚಿನ ವೇಗ ಪಡೆದು ಕೊಂಡಿದೆ.. ಇದರ ನಡುವೆ ತಲೆ ಮರೆಸಿಕೊಂಡಿದ್ದ ಎ1 ಆರೋಪಿ ಸೋಮ ಅಲಿಯಾಸ್ ಜೈಪುರ ಸೋಮ ಸಹ ತುಮಕೂರಿನ ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಆರೋಪಿಗಳಾದ ಸೋಮ ಮತ್ತು ಅಮಿತ್ ಶರಣಾಗಿದ್ದು ಅವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.. ಈ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳ ಬಂಧನವಾದಂತಾಗಿದೆ.
ರಾಜೇಂದ್ರ ಹತ್ಯೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಇನ್ನು ಸೋಮ 5 ಲಕ್ಷ ರೂ. ಅಡ್ವಾನ್ಸ್ ಪಡೆದಿರುವ ಮಾಹಿತಿ ತಿಳಿದುಬಂದಿತ್ತು.. ಹೀಗಾಗಿ ಸುಪಾರಿ ಕೊಟ್ಟಿದ್ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆಡಿಯೋದಲ್ಲಿ ಮಾತನಾಡಿರುವ ಪುಷ್ಪ ಹಾಗೂ A4 ಆರೋಪಿ ಗುಂಡನಾ ಪ್ರೇಯಸಿ ಯಶೋಧಳನ್ನ ವಶಕ್ಕೆ ಪಡೆಯಲಾಗಿದೆ. ಈ ಇಬ್ಬರಿಂದ ಸಾಕಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಧ್ಯರಾತ್ರಿ ಪೈಶಾಚಿಕ ಕೃತ್ಯ.. ಅಣ್ಣನ ಜೊತೆಗೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಅತ್ಯಾಚಾರ!
ಇಂದು ಆರೋಪಿ ಸೋಮ ಹಾಗೂ ಅಮಿತ್ನನ್ನ ಮೆಡಿಕಲ್ ಟೆಸ್ಟ್ಗೆ ಕರೆದೊಯ್ಯಲ್ಲಿರುವ ಪೊಲೀಸರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಿದ್ದಾರೆ.. ಬಳಿಕ ತುಮಕೂರು ಜಿಲ್ಲಾ ಕೋರ್ಟ್ಗೆ ಆರೋಪಿಗಳನ್ನ ಹಾಜರು ಪಡಿಸಲಿರುವ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಹೈಕಮಾಂಡ್ಗೆ ರಾಜಣ್ಣ ದೂರು!
ಇತ್ತ ಪುತ್ರ ರಾಜೇಂದ್ರ ಸುಪಾರಿ ಕೇಸ್ ಬಗ್ಗೆ ತನಿಖೆ ಚುರುಕುಗೊಂಡಿದ್ರೆ ಅತ್ತ ಸಚಿವ ರಾಜಣ್ಣ ಹನಿಟ್ರ್ಯಾಪ್ ಯತ್ನದ ಆರೋಪದ ಬಗ್ಗೆ ಹೈಕಮಾಂಡ್ಗೆ ದೂರು ನೀಡಿದ್ದಾರೆ. ಸಿಎಂ ಮತ್ತು ಡಿಸಿಎಂ ಜೊತೆ ದೆಹಲಿ ಯಾತ್ರೆ ಕೈಗೊಂಡಿರೋ ರಾಜಣ್ಣ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಿಸಿದರ ಮಾಹಿತಿ ನೀಡಿದ್ರು. ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಹೈಕಮಾಂಡ್ ರಾಜಣ್ಣ ವಿರುದ್ಧ ಗರಂ ಆಗಿದ್ದು, ಸದನದಲ್ಲಿ ಹನಿಟ್ರ್ಯಾಪ್ ಪ್ರಸ್ತಾಪದ ಅನಿವಾರ್ಯತೆ ಬಗ್ಗೆ ರಾಜಣ್ಣ ಹೈಕಮಾಂಡ್ಗೆ ಮನವರಿಕೆ ಮಾಡಿದ್ದಾರೆ.
ಒಟ್ನಲ್ಲಿ ಇತ್ತ ಎಂಎಲ್ಸಿ ರಾಜೇಂದ್ರ ಕೊಲೆ ಸುಪಾರಿ ಪ್ರಕರಣದ ಎಲ್ಲ ಆರೋಪಿಗಳೂ ಪೊಲೀಸರ ಕೈಗೆ ಲಾಕ್ ಆಗಿ ತನಿಕೆ ಚುರುಕುಗೊಂಡಿದೆ. ಅತ್ತ ರಾಜಣ್ಣ ಹನಿಟ್ರ್ಯಾಪ್ ಯತ್ನದ ಬಗ್ಗೆಯೂ ಹೈಕಮಾಂಡ್ ಮೊರೆ ಹೋಗಿದ್ದು ಸೂಕ್ತ ತನಿಖೆಗೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್, ಉತ್ತರ ಪ್ರದೇಶವೂ ಅಲ್ಲ! ಭಾರತದ ನದಿಗಳ ತವರು ಮನೆ ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ