/newsfirstlive-kannada/media/post_attachments/wp-content/uploads/2025/07/ninagagi3.jpg)
ನಿನಗಾಗಿ ಧಾರಾವಾಹಿ ಇತ್ತಿಚೀಗೆ 300 ಸಂಚಿಕೆಗಳನ್ನ ಪೂರೈಸಿತ್ತು. ಇದೀಗ ನಿನಗಾಗಿ ಕಥೆಯಲ್ಲಿ ಮಹಾ ತಿರುವು ಎದುರಾಗಿದೆ. ನಿನಗಾಗಿ ಧಾರಾವಾಹಿ ಒಂದೇ ಸ್ಟೋರಿಗೆ ಜೋತು ಬೀಳದೇ ಕಥೆಯಲ್ಲಿ ಬೇರೆ ಬೇರೆ ಆಯಾಮಗಳನ್ನ ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ.
ಮೊದಲ ಆಯಾಮದಲ್ಲಿ ರಚನಾ ಸೂಪರ್ ಸ್ಟಾರ್ ಆಗಿರೋ ಹಿಂದಿನ ಕಹಾನಿ ಬಿಚ್ಚಿಡಲಾಗಿತ್ತು. ನಂತರದ ಮೈಲುಗಲ್ಲು ರಚನಾ-ಕೃಷ್ಣ ಭೇಟಿ, ಮಗುವನ್ನು ಹೆತ್ತರೆ ಮಾತ್ರ ತಾಯಿಯಲ್ಲ. ಮಮತೆ ನೀಡಿದವಳು ತಾಯಿನೋ ಅನ್ನೋದನ್ನ ಬಿತ್ತರಿಸಿತ್ತು. ನಂತರ ಕಥೆ ಹೊರಳಿದ್ದು ಜೀವ-ರಚನಾ ಪ್ರೀತಿಯ ಪಯಣದತ್ತ.
ಹೀಗೆ ಸಾಗುತ್ತಿದ್ದ ಕಥೆಯಲ್ಲಿ ಮಹಾ ತಿರುವು ತಂದುಕೊಟ್ಟಿದ್ದು ಜೀವ ಹಿನ್ನಲೆ ನೂರಾರು ಕೋಟಿ ಆಸ್ತಿ, ಕುಟುಂಬ ಇದ್ರು ಕೂಡ ಎಲ್ಲಾ ತೊರೆದು ಜೀವ ದೂರ ಹೋಗಿದ್ಯಾಕೆ ಅನ್ನೋದರ ಸುತ್ತ ಸದ್ಯ ಕಥೆ ಸಾಗ್ತಿದೆ. ಜೊತೆಗೆ ರಣ ಹದ್ದುಗಳ ರೀತಿ ಅಪ್ಪನ ಆಸ್ತಿಗೆ ಕಿತ್ತಾಡ್ತಿದ್ದಾರೆ ಸೋ ಕಾಲ್ಡ್ ಫ್ಯಾಮಿಲಿ. ಇದರ ನಡುವೆ ಇಷ್ಟು ದಿನ ಸಿಂಪಲ್, ಮುಗ್ಧೆಯಾಗಿದ್ದ ದೇವಿ ರೆಬೆಲ್ ಅವತಾರ ತಾಳಿದ್ದಾರೆ.
View this post on Instagram
ಅದು ಕೂಡ ದ್ವೇಷ, ಸೇಡು ಅಂತ ನಾನು ಅಪ್ಪನನ್ನು ಕಳೆದುಕೊಂಡು ಹೇಗೆ ನೋವು ಅನುಭವಿಸುತ್ತಿದ್ದೀನೋ, ಹಾಗೇ ಕೃಷ್ಣ ಕೂಡ ನೋವು ಅನುಭವಿಸಬೇಕು ಅಂತ ಕೆಂಡ ಹಾಕಿದ್ದಾಳೆ ದೇವಿ. ನಿನಗಾಗಿ ಸಂಜೀವ್ ನನ್ನ ಭೇಟೆ, ಅವನ ಸಮಾಧಿಯನ್ನು ನಾನೇ ಕಟ್ಬೇಕು, ಯುದ್ಧ ಈಗ ಶುರುವಾಗಿದೆ ವಜ್ರೇಶ್ವರಿ ಅಂತ ಕೂಗಾಡಿದ್ದಾಳೆ ದೇವಿ. ಇನ್ನೂ ದೇವಿಯ ಹೊಸ ಅವತಾರಕ್ಕೆ ವಜ್ರೇಶ್ವರಿ ನಲುಗಿ ಹೋಗಿದ್ದಾಳೆ. ಇನ್ನೂ, ದೇವಿಯ ಹೊಸ ಅವತಾರ ನೋಡಿದ ವೀಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ