/newsfirstlive-kannada/media/post_attachments/wp-content/uploads/2024/11/justiceforsandhya.jpg)
ಬೆಂಗಳೂರು: ಸಂಧ್ಯಾ ಆ್ಯಕ್ಸಿಡೆಂಟ್ ಕೇಸ್ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ವಿರುದ್ಧ ಜನ ಸಿಡಿದೇಳುವಂತೆ ಮಾಡುತ್ತಿದೆ. ಪತ್ನಿಯ ಸಾವಿನ ಸಾಕ್ಷಿ ಹುಡುಕುತ್ತಿರೋ ಸಂಧ್ಯಾ ಪತಿ ಒಂದು ಕಡೆಯಾದ್ರೆ, ತಾಯಿಯೊಬ್ಬಳು ಮನೆಗೆ ಆಧಾರವಾಗಿದ್ದ ಮಗನನ್ನ ಉಳಿಸಿಕೊಳ್ಳೋದಕ್ಕೆ ಗೋಳಾಡುತ್ತಿದ್ದಾಳೆ. ಸಂಧ್ಯಾ ಬಳಿಕ ಧನುಷ್ ಕಾರಣಕ್ಕೆ ಬಲಿಯಾದ ಮತ್ತೊಬ್ಬ ವ್ಯಕ್ತಿ ಸ್ಫೋಟಕ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ.
ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!
ಮಳೆ ಸುರಿಸಿ ಹಗುರಾದ ಮುಗಿಲಂತೆ ಇರಬೇಕು ಅಂತಿದ್ರು ಸಂಧ್ಯಾ. ಆದರೆ, ವಿಧಿಯಾಟ ಬೇರೆನೇ ಆಗಿತ್ತು. ಆ್ಯನಿವರ್ಸರಿಗಾಗಿ ಕಾಯ್ತಿದ್ದ ಜನುಮದ ಜೋಡಿ ಒಂಟಿಯಾಗಿದೆ. ಪತ್ನಿಯನ್ನ ಕಳೆದುಕೊಂಡ ನೋವಿನಲ್ಲಿರೋ ಶಿವಕುಮಾರ್ ಅಕ್ಷರಶಃ ವಿಲವಿಲ ಅಂತಾ ಒದ್ದಾಡ್ತಿದ್ದಾರೆ. ಪೊಲೀಸರಿಂದ ನ್ಯಾಯ ಸಿಗುತ್ತೆ ಅನ್ನೋ ಗ್ಯಾರಂಟಿಯನ್ನ ಮರೆತು ಹೋರಾಟಕ್ಕಿಳಿದಿದ್ದಾರೆ. ನ್ಯಾಯ ಸಿಗುತ್ತೆ ಅಂತಾ ನಾವು ಹೋರಾಟ ಮಾಡ್ತಿದ್ದೀವಿ. ಹೀಗಂತ, ಹೇಳುತ್ತಲೇ ಸಂಧ್ಯಾ ಪತಿ ಬಿಕ್ಕಳಿಸುತ್ತಿದ್ದಾರೆ. ಆ್ಯನಿವರ್ಸರಿಯ ಖುಷಿಗಾಗಿ ಕಾಯ್ತಿದ್ದ ಸಂಧ್ಯಾಳ ಜೀವ ಹೋಗಿದೆ. ದುಡ್ಡಿನ ದೌಲತ್ತಿನಲ್ಲಿ ಕಾರು ಹರಿಸಿ ಕೊಂದವನ ಜೊತೆ ಪೊಲೀಸರು ಕೈ ಜೋಡಿಸಿರುವ ಆರೋಪ ಬಂದಿದೆ. ಇದರ ಮಧ್ಯೆಯೇ ಅದೊಂದು ಸಾಕ್ಷಿಗಾಗಿ ಸಂಧ್ಯಾ ಪತಿ ಶಿವಕುಮಾರ್ ಅಕ್ಷರಶಃ ಸೆಣೆಸಾಡುತ್ತಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಪದೇ ಪದೇ ಯಾಮಾರಿಸ್ತಿರೋದು ಖಚಿತ ಆದಂತೆ ಕಾಣ್ತಿದೆ.
ಟೆಕ್ಕಿ ಸಂಧ್ಯಾ ಆ್ಯಕ್ಸಿಡೆಂಟ್ ಕೇಸ್ನಲ್ಲಿ ಆಕೆಯ ಪತಿ ನ್ಯಾಯಕ್ಕಾಗಿ ಹೋರಾಡ್ತಿದ್ದಾರೆ. ದುಡ್ಡಿನ ಧಿಮಾಕಿನಲ್ಲಿ ಧನುಷ್ ಮಾಡಿದ್ದು ತಪ್ಪು. ಆದರೆ ಪೊಲೀಸರು ಮಾಡ್ತಿರೋದು ಅದಕ್ಕಿಂತ ಹೀನ ಕೆಲಸವಾ ಅನ್ನೋ ಅನುಮಾನ ಮೂಡಿದೆ. ಮಾಡದ ತಪ್ಪಿಗೆ ಸಂಧ್ಯಾ ಕಣ್ಮುಚ್ಚಿದ್ದಾರೆ. ಬದುಕುಳಿಯಲು ಹಾತೊರೆದಿದ್ದಾರೆ. ಸಂದಿಗ್ಧತೆಯಲ್ಲೂ ಅಪ್ಪನಿಗೆ ಫೋನ್ ಮಾಡಿ ಮಾತಾಡಿದ್ದಾರೆ. ಆ್ಯಕ್ಸಿಡೆಂಟ್ ಆದ್ಮೇಲೂ 7-8 ನಿಮಿಷ ವಿಲವಿಲ ಒದ್ದಾಡುತ್ತಲೇ ಸಂಧ್ಯಾ ಹೇಳಿಕೊಂಡಿದ್ದೇನು ಗೊತ್ತಾ? ಶೋಕಿ ಮಾಡ್ಕೊಂಡು, ಎಣ್ಣೆ ಹೊಡ್ಕೊಂಡು ಸ್ಪೀಡಾಗಿ ಬಂದ ಧನುಷ್ ಸಂಧ್ಯಾ ಮೇಲೆ ಕಾರು ಹರಿಸಿದ್ದ. ಕಾರ್ ಗುದ್ದಿದ ವೇಗಕ್ಕೆ ಸಂಧ್ಯಾ ದೇಹ 10 ಅಡಿ ಮೇಲಕ್ಕೆ ಹಾರಿ ಕೆಳಗೆ ಬಿದ್ದಿತ್ತು. ಅಲ್ಲೇ ಇದ್ದ ಆಟೋದವರು ಎತ್ತಿ ಕೂರಿಸಿದ್ದಾರೆ. ಮೊಬೈಲ್ ಫೋನ್ ಲಾಕ್ ಓಪನ್ ಮಾಡಿ 7-8 ನಿಮಿಷ ಹಲವರಿಗೆ ಸಹಾಯ ಕೋರಿದ್ದ ಸಂಧ್ಯಾ ಕೆಲವೇ ಕ್ಷಣಗಳಲ್ಲೇ ಉಸಿರು ಚೆಲ್ಲಿದ್ರು. ಇದೆಲ್ಲವನ್ನೂ ನೋಡಿದ್ದ ಅಲ್ಲಿನ ಟ್ರಾಫಿಕ್ ಪೊಲೀಸರು ಸಹ ಮಾನವೀಯತೆ ಮರೆತುಬಿಟ್ರು. ಆರೋಪಿಯ ಪರವಾಗಿ ನಿಂತು ಮೃತ ಕುಟುಂಬಕ್ಕೆ ಆವಾಜ್ ಹಾಕಿದ ದೃಶ್ಯವೂ ಕೂಡ ಇದೀಗ ವೈರಲ್ ಆಗ್ತಿದೆ.
ಸಂಧ್ಯಾ ಸಾವಿಗೆ ಸಣ್ಣದೊಂದು ಕನಿಕರವನ್ನೂ ಪೊಲೀಸರು ತೋರಿಸಲೇ ಇಲ್ಲ ಅನ್ನೋದು ಆರೋಪ. ಅಷ್ಟೇ ಅಲ್ಲ, ಆರೋಪಿ ಧನುಷ್ ವಿಚಾರದಲ್ಲಿ ಸೇಫ್ ಗಾರ್ಡ್ಗಳ ರೀತಿಯಲ್ಲೇ ಪೊಲೀಸರು ವರ್ತಿಸಿದ್ದಾರೆ. ನಾಲ್ಕು ಸಂದರ್ಭಗಳಲ್ಲಿ ಪೊಲೀಸರು ಮಾಡಿದ ಎಡವಟ್ಟಿಗೆ ಇವತ್ತು ಸಂಧ್ಯಾ ಪತಿ ಶಿವಕುಮಾರ್ ಹೋರಾಟವನ್ನೇ ಮಾಡಬೇಕಾಗಿ ಬಂದಿದೆ. ಈ ಆ್ಯಕ್ಸಿಡೆಂಟ್ ಕೇಸ್ನಲ್ಲಿ ಸಾಕ್ಷಿಯೇ ಸಿಗದಂತೆ ಪೊಲೀಸರು ಗೇಮ್ ಮಾಡಿದ್ದಾರಾ? ಹಾಗಾಗಿಯೇ ಶಿವಕುಮಾರ್ ಸಾಕ್ಷಿಯ ಹುಡುಕಾಟಕ್ಕಾಗಿ ಹೋರಾಡುತ್ತಿದ್ದಾರಾ? ಇದೆಲ್ಲಕ್ಕೂ ಕಾರಣ ಪೊಲೀಸರು ನಾಲ್ಕು ಸಂದರ್ಭಗಳಲ್ಲಿ ಮಾಡಿದ ಎಡವಟ್ಟುಗಳು.
ಧನುಷ್ಗೆ ಮುಖ ಮುಚ್ಚಿಕೊಳ್ಳಲು ಹೇಳಿದ್ರು!
ಹೌದು, ಆ್ಯಕ್ಸಿಡೆಂಟ್ ಆದ ಸ್ಥಳದಲ್ಲಿ ದುಡ್ಡಿನ ದೌಲತ್ತಿನಲ್ಲಿ ಸಂಧ್ಯಾ ಕೊಂದ ಆರೋಪಿ ಧನುಷ್ಮತ್ತಿನಲ್ಲಿ ತೇಲಾಡುತ್ತಿದ್ದ. ಖುದ್ದು ಪೊಲೀಸರೇ ಮುಖ ಮುಚ್ಚಿಕೊಳ್ಳೋದಕ್ಕೆ ಹೇಳಿಕೊಡುತ್ತಿದ್ದರು. ಧನುಷ್ ಸಂಧ್ಯಾ ಪಾಲಿಗೆ ಯಮನಾದ ಅನ್ನೋ ಸಾಕ್ಷಿಯೇ ಇಲ್ಲದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ರು. ಇಂಥದ್ದೊಂದು ಗಂಭೀರ ಆರೋಪವನ್ನು ಸಂಧ್ಯಾ ಕುಟುಂಬಸ್ಥರೇ ಹೇಳುತ್ತಿದ್ದಾರೆ. ಇದೇ ರೀತಿಯಲ್ಲೇ ಪೊಲೀಸರು ಸಂಧ್ಯಾ ಕೊಂದಿದ್ದು ಧನುಷ್ ಅಲ್ಲ ಅನ್ನೋ ರೀತಿಯಲ್ಲಿ ಸಾಕ್ಷಿ ಸಿಗದಂತೆ ನೋಡಿಕೊಳ್ತಿದ್ರು. ಇದಕ್ಕಿಂತಲೂ ಘೋರ ಅನಿಸೋದು ಮೃತ ಸಂಧ್ಯಾ ಕುಟುಂಬದಿಂದ ದೂರನ್ನೇ ಪಡೆದುಕೊಂಡಿಲ್ಲವಂತೆ.
ಮೃತ ಸಂಧ್ಯಾ ಕುಟುಂಬದಿಂದ ದೂರು ಪಡೆದಿಲ್ಲ!
ಮೃತ ಸಂಧ್ಯಾ ಕುಟುಂಬ ದೂರು ಕೊಡ್ತೀನಿ ಅಂದ್ರು ಕೇಳಿಲ್ಲ. ಬದಲಾಗಿ ಯಾರೋ ಪ್ರತ್ಯಕ್ಷದರ್ಶಿಯನ್ನು ಕರೆದುಕೊಂಡು ಬಂದು ದೂರು ಪಡೆದುಕೊಂಡಿದ್ದಾರಂತೆ. ತಮಗೆ ಬೇಕಾದ ರೀತಿಯಲ್ಲಿ ಎಫ್ಐಆರ್ ಹಾಕಿದ್ದಾರೆ. ಹಾಗಾಗಿಯೇ ಎಫ್ಐಆರ್ನಲ್ಲಿ ಧನುಷ್ ಹೆಸರು ಬಾರದಂತೆ ನೋಡಿಕೊಂಡಿದ್ದಾರೆ ಅಂತಲೂ ಆರೋಪಿಸಲಾಗ್ತಿದೆ. ಸಂಧ್ಯಾ ಆ್ಯಕ್ಸಿಡೆಂಟ್ ಪ್ರಕರಣದಿಂದ ಧನುಷ್ನನ್ನ ಬಚಾವ್ ಮಾಡೋಕೆ ಎಷ್ಟು ಸಾಧ್ಯವೋ? ಅಷ್ಟು ಕೆಲಸವನ್ನು ಪೊಲೀಸರು ಮಾಡುತ್ತಲೇ ಬಂದಿದ್ದಾರೆ ಎನ್ನುವ ಮಾತು ಕೇಳಿಬರ್ತಿದೆ. ಇದೀಗ ಪ್ರತ್ಯಕ್ಷದರ್ಶಿಯ ದೂರಿನ ಲೆಕ್ಕದಲ್ಲೇ ತನಿಖೆ ನಡೆದರೇ ಯಾವಾಗ ಬೇಕಾದ್ರೂ ಪ್ರಕರಣ ದಿಕ್ಕು ತಪ್ಪಬಹುದು. ಇಲ್ಲೂ ಸಹ ಸಾಕ್ಷಿ ಸಿಗದಂತೆ ಪೊಲೀಸರು ಧನುಷ್ ಪರ ಕೆಲಸ ಮಾಡಿದಂತೆ ಕಾಣುತ್ತಿದೆ.
CCTV ಫೂಟೇಜ್ ಬ್ಲರ್ ಇದೆ ಅಂತ ಕೊಡುತ್ತಿಲ್ಲ!
ಕೆಂಗೇರಿ ಬಸ್ ನಿಲ್ದಾಣದ ಮುಂದಿನ ಜಾಗದಲ್ಲಿ ಆ್ಯಕ್ಸಿಡೆಂಡ್ ಆಗಿದೆ. ಇಂಥಾ ಜನಸಂದಣಿಯ ಜಾಗದಲ್ಲಿ ಸಿಸಿಟಿವಿ ಕ್ಯಾಮರಾಗಳಿಲ್ಲವೇ? ಇದ್ದಾಗ್ಯೂ, ಆ ಕ್ಯಾಮರಾದಲ್ಲಿನ ದೃಶ್ಯಗಳು ಕ್ವಾಲಿಟಿ ಇಂದ ಕೂಡಿಲ್ಲವೇ? ಪೊಲೀಸರು ಇಲ್ಲೂ ಸಹ ಅಸಲಿ ಸಾಕ್ಷಿಯೇ ಸಿಗದಂತೆ ನೋಡಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯ ಬ್ಲರ್ ಇದೆ ಅಂತ ಮೃತ ಸಂಧ್ಯಾ ಕುಟುಂಬಕ್ಕೆ ಫೋಟೇಜ್ ಅನ್ನೇ ನೀಡಿಲ್ಲ. ಇದೇ ಸಿಸಿಟಿವಿ ದೃಶ್ಯಕ್ಕಾಗಿಯೇ ಇದೀಗ ಸಂಧ್ಯಾ ಪತಿ ಶಿವಕುಮಾರ್ ಹೋರಾಡುತ್ತಿದ್ದಾರೆ. ಹೇಗಾದ್ರೂ ಮಾಡಿ ಆ ಸಿಸಿಟಿವಿ ದೃಶ್ಯಗಳನ್ನು ಒದಗಿಸಿ ಅಂತ ಪೊಲೀಸರಿಗೆ ವಿಧವಿಧವಾಗಿ ಬೇಡಿಕೊಳ್ಳುತ್ತಿದ್ದಾರೆ. ಆದಾಗ್ಯೂ ಪೊಲೀಸರು ಧನುಷ್ ಉಳಿಸೋಕೆ ಏನೋ? ಬ್ಲರ್ ಇದೆ ಬೇಡ ಬಿಡಿ ಅನ್ನೋ ಸಬೂಬನ್ನೇ ಹೇಳುತ್ತಿದ್ದಾರೆ. ಆ್ಯಕ್ಸಿಡೆಂಟ್ ಪ್ರಕರಣದಲ್ಲಿ ಡಿಎಲ್ ಮುಖ್ಯವಾಗುತ್ತದೆ. ಇಲ್ಲಿ, ಆರೋಪಿಯದ್ದು ಎನ್ನಲಾಗುತ್ತಿರೋ ಪೊಲೀಸರ ವಶದಲ್ಲಿರೋ ಡಿಎಲ್ ಸಹ ಅನುಮಾನ ಮೂಡಿಸುತ್ತಿದೆ. ಯಾಕಂದ್ರೆ, ಧನುಷ್ ಬಳಿ ಇದ್ದ ಡ್ರೈವಿಂಗ್ ಲೈಸೆನ್ಸ್ ಪೊಲೀಸರ ಬಳಿ ಇದೆ. ಡ್ರೈವಿಂಗ್ ಲೈಸೆನ್ಸ್ನಲ್ಲಿನ ಫೋಟೋ ಸರಿ ಇಲ್ಲ ಅಂತ ಸಂಧ್ಯಾ ಕುಟುಂಬಸ್ಥರು ಪ್ರಶ್ನಿಸಿದಾಗ್ಲೂ ಪೊಲೀಸರು ಉಡಾಫೆಯ ಮಾತು ಹೇಳೋ ಮೂಲಕ ಆವಾಜ್ ಹಾಕಿದ್ದಾರಂತೆ.
ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣ; ಹುಡುಗ ಯಾರು?
ದೂರು ನೀಡಿದ ಪ್ರತ್ಯಕ್ಷದರ್ಶಿಗೆ ಆರೋಪಿ ಹೆಸರು ಗೊತ್ತಿಲ್ಲ. ಹಾಗಾಗಿಯೇ ಎಫ್ಐಆರ್ನಲ್ಲಿ ಧನುಷ್ ಹೆಸರಿಲ್ಲ ಅಂತ ಪೊಲೀಸರು ಹೇಳಿದ್ದಾರೆ. ಈ ಮೂಲಕ ಆ್ಯಕ್ಸಿಡೆಂಟ್ ಪ್ರಕರಣದಲ್ಲಿ ಧನುಷ್ ಆರೋಪಿ ಅಂತ ಹೇಳೋದಕ್ಕೂ ಸಾಕ್ಷಿ ಇಲ್ಲದಂತೆ ಮಾಡ್ತಿದ್ದಾರಾ ಅನಿಸುತ್ತದೆ. ಹಾಗಾಗಿಯೇ ಸಂಧ್ಯಾ ಪತಿ ಶಿವಕುಮಾರ್ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಧ್ಯಾ ಸಾವಿನ ಸಾಕ್ಷಿ ಹುಡುಕಬೇಕಾದ ಕೆಲಸವನ್ನು ಪೊಲೀಸರು ಮಾಡಬೇಕಿತ್ತು. ಆದರೇ, ಪೊಲೀಸರ ಕೆಲಸವನ್ನು ಸಂಧ್ಯಾ ಪತಿ ಶಿವಕುಮಾರ್ ಮಾಡುತ್ತಿದ್ದಾರೆ. ಸಂಧ್ಯಾ ಅನ್ನೋ ಜೇನದನಿ ಮೌನಕ್ಕೆ ಶರಣು ಆದಾಗಿನಿಂದ ಇಲ್ಲಿ ತನಕ ಪೊಲೀಸರು ಯಾಮಾರಿಸುತ್ತಲೇ ಬಂದಿದ್ರು. ಧನುಷ್ ಹೆಸರು ಬಾರದಂತೆ, ಫೋಟೋ ಸಾಕ್ಷಿಯೂ ಇಲ್ಲದಂತೆ ನೋಡಿಕೊಳ್ತಿದ್ರು ಅನಿಸುತ್ತದೆ. ಆದರೆ, ಪೊಲೀಸರೆ ಇದೀಗ ಬಿಗ್ ಶಾಕ್ ಎದುರಾಗೋ ಸಾಧ್ಯತೆ ಇದೆ. ಯಾಕಂದ್ರೆ ಆ ಸೀಕ್ರೆಟ್ ಕ್ಯಾಮರಾ ದೃಶ್ಯಕ್ಕಾಗಿ ಸಂದ್ಯಾ ಪತಿ ಕಾನೂನಿನ ಮೊರೆ ಹೋಗಿದ್ದಾರೆ. ಆರಂಭದಿಂದಲೇ ಪೊಲೀಸರು ಸಂಧ್ಯಾ ಆ್ಯಕ್ಸಿಡೆಂಟ್ ಪ್ರಕರಣವನ್ನು ಹಳ್ಳ ಹಿಡಿಸೋ ಪ್ರಯತ್ನ ಮಾಡಿದ್ರು. ಮೊದಲಿಗೆ ಧನುಷ್ಗೆ ಮುಖ ಮುಚ್ಚಿಕೊಳ್ಳಲು ಹೇಳಿದ್ದ ಪೊಲೀಸರು ಎಫ್ಐಆರ್ನಲ್ಲೂ ಹೆಸರು ಹಾಕದಂತೆ ನೋಡಿಕೊಂಡಿದ್ದಾರೆ. ಸದ್ಯ, ಧನುಷ್ ಕೊಲೆ ಮಾಡಿಲ್ಲ ಅನ್ನೋ ಮಟ್ಟಿಗೆ ಇಡೀ ಪ್ರಕರಣವನ್ನು ತಿರುಗಿಸೋ ಪ್ರಯತ್ನ ನಡೀತಿದೆ. ಹಾಗಾಗಿಯೇ ಆರೋಪಿ ವಿರುದ್ಧ ಸಿಸಿಟಿವಿ ದೃಶ್ಯಗಳೇ ಪತ್ತೆ ಆಗುತ್ತಿಲ್ಲ. ಹಾಗಾಗಿಯೇ ಆ ಸೀಕ್ರೆಟ್ ಕ್ಯಾಮರಾ ಸಾಕ್ಷಿಗಾಗಿ ಶಿವಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ