/newsfirstlive-kannada/media/post_attachments/wp-content/uploads/2025/02/seetha-rama.jpg)
ಸೀತಾರಾಮ ಸಿಹಿ ಪಾತ್ರನ ವೀಕ್ಷಕರು ಮನೆ ಮಗುವಂತೆ ಹಂಚಿಕೊಂಡಿದ್ದರು. ಇದ್ದರೆ ಸಿಹಿ ತರ ಮಗಳು ಇರಬೇಕು ಅನ್ನೋವಷ್ಟು ಮುದ್ದು ಬರುತ್ತಿತ್ತು. ಆದರೆ ಸೀತಾರಾಮನ ಬಾಳಿಂದ ಸಿಹಿ ಪುಟ್ಟ ದೂರವಾಗಿದ್ದಳು. ಇದೇ ವಿಚಾರ ಕೇಳಿದ ವೀಕ್ಷಕರು ಕೂಡ ಬೇಸರ ಹೊರ ಹಾಕಿದ್ದರು.
ಇದನ್ನೂ ಓದಿ: ತಮಿಳು ನಟ ವಿಶಾಲ್ಗೆ ಕಾಡಿದ ಅನಾರೋಗ್ಯ.. ತುಳುನಾಡಿನ ದೈವದ ಮೊರೆ ಹೋದ ಸ್ಟಾರ್
ಆದ್ರೆ ಇದೀಗ ಸೀತಾರಾಮ ಸೀರಿಯಲ್ ವೀಕ್ಷಕರಿಗೆ ಗುಡ್ನ್ಯೂಸ್ ಸಿಕ್ಕಿದೆ. ಸೀತಾರಾಮ ಧಾರಾವಾಹಿಯ ಮುಖ್ಯ ಆಕರ್ಷಣೆ ಸಿಹಿ ಪುಟಾಣಿ. ಸಿಹಿಗೋಸ್ಕರನೇ ಧಾರಾವಾಹಿ ನೋಡೋ ವೀಕ್ಷಕರೇ ಇದ್ದಾರೆ. ಸಿಹಿ ಇಲ್ಲ ಅಂದ್ರೇ ಸ್ಟೋರಿ ಸಪ್ಪೆ ಆಗುತ್ತೆ. ಸಿಹಿಗೆ ಗೋಳಾಡಿಸಿದ್ರೇ ಬಹುತೇಕ ಜನಕ್ಕೆ ಇಷ್ಟ ಆಗಲ್ಲ. ಸಿಹಿಯನ್ನು ಸಿಹಿಯಾಗೇ ತೋರಿಸಿ ಅನ್ನೋದು ವೀಕ್ಷಕರ ಡಿಮ್ಯಾಂಡ್ ಆಗಿತ್ತು.
ಈ ಹಿಂದೆ ಭಾರ್ಗವಿ ಸಂಚಿಗೆ ಸಿಹಿ ಬಲಿಯಾಗಿದ್ದಳು. ಆದ್ರೆ ಇದೀಗ ಸುಬ್ಬಿ ಸಿಹಿಯಾಗಿ ಸೀತಾ ರಾಮನ ಮನೆಗೆ ಮರಳಿದ್ದಾಳೆ. ಹೀಗಾಗಿ ಮತ್ತೆ ಸೀತಾರಾಮ ಸೀರಿಯಲ್‌ನಲ್ಲಿ ಒಂದಷ್ಟು ರೋಚಕ ಸನ್ನಿವೇಶಗಳು ವೀಕ್ಷಕರನ್ನು ನಿಬ್ಬೆರಗು ಆಗುವಂತೆ ಮಾಡಿದೆ. ಸಿಹಿ ಇಲ್ಲ ಅನ್ನೋ ನೋವಲ್ಲಿ ಸೀತಾ ಮಾನಸಿಕವಾಗಿ ಕುಗ್ಗಿದ್ದಳು. ಗೊಂಬೆಯನ್ನೇ ಸಿಹಿ ಅಂತ ಅಂದುಕೊಂಡು ಜೀವನ ಮಾಡುತ್ತಿದ್ದಳು. ಕಳೆದ ಸಂಚಿಕೆಯಲ್ಲಿ ಭಾರ್ಗವಿಯ ಒರಟು ಮಾತುಗಳು ಸೀತಾಳ ಕೋಪವನ್ನು ಕೆರಳಿಸುವಂತೆ ಮಾಡುತ್ತೆ. ಇದೇ ವೇಳೆ ಸಿಹಿ ಆವತ್ತೇ ಆಕ್ಸಿಡೆಂಟ್ನಲ್ಲಿ ಸತ್ತಿದ್ದರೆ ಚೆನ್ನಾಗಿತ್ತು ಎಂದು ಭಾರ್ಗವಿ ಹೇಳಿದ್ದಾಳೆ.
ಆಗ ಕೋಪಕೊಂಡ ಸೀತಾ ಟೇಬಲ್ ಮೇಲಿದ್ದ ಚಾಕುವನ್ನು ಹಿಡಿದು ಭಾರ್ಗವಿಯ ಕೊರಳಿಗೆ ಗಾಯ ಮಾಡುತ್ತಾಳೆ. ಇದೇ ಒಳ್ಳೆಯ ಸಮಯ ಎಂದು ತಿಳಿದು ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಅಂತ ಪ್ಲಾನ್ ಮಾಡಿದ್ದಾರೆ. ಬಳಿಕ ಸಿಬ್ಬಂದಿಗಳು ಸೀತಾಳನ್ನು ಕರೆದುಕೊಂಡು ಹೋಗುತ್ತಿದ್ದಾಗ ರಾಮನ ಎಂಟ್ರಿಯಾಗಿದೆ. ಜತೆಯಲ್ಲಿ ಸಿಹಿಯ ರೂಪದಲ್ಲಿನ ಸುಬ್ಬಿಯನ್ನೂ ಆತ ಕರೆತಂದಿದ್ದಾನೆ. ಇದೇ ವೇಳೆ ತಕ್ಷಣ ಕಾರ್‌ನಿಂದ ಇಳಿದು ಸೀತಮ್ಮ ಎಂದು ಜೋರಾಗಿ ಕೂಗಿದ್ದಾಳೆ ಸಿಹಿ ವೇಷದಲ್ಲಿರುವ ಸುಬ್ಬಿ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ.
ಅದರಲ್ಲೂ ಭಾರ್ಗವಿ ಸಿಹಿಯನ್ನ ನೋಡುತ್ತಿದ್ದಂತೆ ಶಾಕ್‌ಗೆ ಒಳಗಾಗಿದ್ದಾಳೆ. ಅದೇಗೆ ಈ ಸಿಹಿ ಬದುಕಿ ಬರಲು ಸಾಧ್ಯ ಎಂದೇ ಯೋಚನೆ ಮಾಡುತ್ತಲೇ ಇದ್ದಾಳೆ. ಇನ್ನಾದರೂ ಮುಂದಿನ ಸಂಚಿಕೆಯಲ್ಲಿ ಭಾರ್ಗವಿಯ ಮುಖವಾಡ ಬಯಲಾಗುತ್ತಾ ಅಂತ ಕಾದು ನೋಡಬೇಕಿದೆ. ಸದ್ಯ ಸುಬ್ಬಿಯ ರೂಪದಲ್ಲಾದ್ರೂ ಸಿಹಿ ಬಂದಳು ಅಂತ ವೀಕ್ಷಕರು ಕೂಡ ಖುಷಿಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ