newsfirstkannada.com

×

ಯಾರೂ ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡ ಶ್ರೀರಸ್ತು ಶುಭಮಸ್ತು; ಆ ಸುದ್ದಿ ಕೇಳಿ ಬೆಚ್ಚಿಬಿದ್ದ ವೀಕ್ಷಕರು

Share :

Published September 14, 2024 at 7:16am

Update September 14, 2024 at 8:30am

    ಹೊಸ ರೂಪದಲ್ಲಿ ಮನರಂಜನೆ ನೀಡಲು ಸಜ್ಜಾಗಿದೆ ಶ್ರೀರಸ್ತು ಶುಭಮಸ್ತು

    ಕಿರುತೆರೆ ವೀಕ್ಷಕರಲ್ಲಿ ರೋಮಾಂಚನ ಸೃಷ್ಟಿಸಿತ್ತು ನಟಿ ಸುಧಾರಾಣಿ ನಟನೆ

    ವೈದ್ಯರು ಹೇಳಿದ ಗುಡ್​ನ್ಯೂಸ್​ ಕೇಳಿ ಬೆಚ್ಚಿಬಿದ್ದ ತುಳಸಿ, ಮುಂದೆ ಏನ್ಮಾಡ್ತಾರೆ?

ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು ಸರಿದು ತಂದೆಯನ್ನು ಒಪ್ಪಿಕೊಂಡಿದ್ದಾನೆ ಮಗ ಅವಿನಾಶ್​. ಇದೇ ಸಂತಸದಲ್ಲಿದ್ದಾರೆ ಮಾಧವ ಹಾಗೂ ತುಳಸಿ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಸೀರಿಯಲ್​ ಯಾರು ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡಿದೆ.

ಇದನ್ನೂ ಓದಿ: ನಾನಿನ್ನೂ ಆರೋಪಿ ಅಪರಾಧಿ ಅಲ್ಲ.. ಬಳ್ಳಾರಿ ಜೈಲಲ್ಲಿ ದರ್ಶನ್ ಮತ್ತೊಂದು ಕಿರಿಕ್‌; ಏನಂದ್ರು?

ತುಳಸಿ-ಮಾಧವನ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಅದೇ ರೀತಿ ಅವಿನಾಶ್​​ ತಂದೆ ಕುರಿತು ಆಡಿದ ಮಾತುಗಳು, ಮಗನ ಪ್ರೀತಿ ಕಂಡು ಕಣ್ಣೀರಿಟ್ಟ ಮಾಧವನ ಮಮತೆ ವೀಕ್ಷಕರನ್ನ ಭಾವುಕರನ್ನಾಗಿಸಿತ್ತು. ಈ ಹಿಂದೆ ಕೂಡ ಸಾಕಷ್ಟು ದೃಶ್ಯಗಳು, ಸಂಭಾಷಣೆ ಜನರ ಮನಸ್ಸು ಗೆದ್ದಿವೆ. ಅದರಲ್ಲೂ ತುಳಸಿ ಭರತನಾಟ್ಯ ಮಾಡಿದ ದೃಶ್ಯ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಆದರೆ ಶ್ರೀರಸ್ತು ಶುಭಮಸ್ತು ಸೀರಿಯಲ್​ ಶಾಕಿಂಗ್​ ನ್ಯೂಸ್​ವೊಂದು ಹೊತ್ತು ತಂದಿದೆ. ಹೌದು, ಇಷ್ಟು ದಿನ ತಂದೆ ಹಾಗೂ ಮಗನ ಬಾಂಧವ್ಯದ ಬಗ್ಗೆ ತೋರಿಸಲಾಗಿತ್ತು. ಆದರೆ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ತುಳಸಿ ತಾಯಿಯಾಗುತ್ತಿದ್ದಾರೆ. ಮನೆಯಲ್ಲಿ ಎಲ್ಲರ ಮುಂದೆ ಮಾತನಾಡುತ್ತಿದ್ದ ತುಳಸಿ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆ ಕೂಡಲೇ ಮಗ ಸಮರ್ಥ ಯಾರಿಗೂ ಹೇಳದಂತೆ ತನ್ನ ತಾಯಿಯನ್ನು ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ತುಳಸಿಗೆ ವೈದ್ಯರು ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಆದರೆ ಇದೇ ವಿಚಾರ ಕೇಳಿ ತುಳಸಿ ಬೆಚ್ಚಿ ಬಿದ್ದಿದ್ದಾಳೆ. ಸದ್ಯ ಮುಂದಿನ ಸಂಚಿಕೆಯಲ್ಲಿ ಮಾಧವನ ಕುಟುಂಬ ಹಾಗೂ ತುಳಸಿ ಕುಟುಂಬ ಈ ವಿಚಾರವನ್ನು ಸ್ವಾಗತಿಸುತ್ತಾರಾ ಎಂದು ಕಾದು ನೋಡಬೇಕಿದೆ. ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಚಂದನವನದ ಚಲುವೆ ಸುಧಾರಾಣಿ ಅವರ ಪರ್ಫಾಮನ್ಸ್​ ಅದ್ಭುತವಾಗಿ ಮೂಡಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾರೂ ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡ ಶ್ರೀರಸ್ತು ಶುಭಮಸ್ತು; ಆ ಸುದ್ದಿ ಕೇಳಿ ಬೆಚ್ಚಿಬಿದ್ದ ವೀಕ್ಷಕರು

https://newsfirstlive.com/wp-content/uploads/2024/09/sudha-raani.png

Load More