newsfirstkannada.com

‘ಅಮಾವಾಸ್ಯೆ’ ಶಿಕ್ಷಕನ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್​; ಮಗಳ ಪ್ರೇಮದ ಮುಂದೆ ಅಮ್ಮನಿಗೆ ಬೇಡವಾಗಿದ್ದ ‘ಕರಿಮಣಿ ಮಾಲೀಕ’!

Share :

Published February 13, 2024 at 3:23pm

    ಶುಕ್ರವಾರ ಬೆಳಗ್ಗೆ ಕುಣಿಗಲ್​​ನಲ್ಲಿ ನಡೆದಿತ್ತು ಭೀಕರ ಕೊಲೆ

    ಕೈ, ಕಾಲು ತಂಡರಿಸಿ ಕೊಲೆ ಮಾಡಿ ಪರಾರಿ ಆಗಿದ್ದ ಕಿರಾತಕತರು

    ಕೊಲೆಯ ಹಿಂದಿತ್ತು ಒಂದು ಪ್ರೇಮದ ಕ್ರಿಮಿನಲ್ ಕಥೆ

‘ಕರಿಮಣಿ ಮಾಲೀಕ ನೀನಲ್ಲ’ ಎಂಬ ಹಾಡು ಸಖತ್ ಟ್ರೆಂಡ್​​ನಲ್ಲಿದೆ. ಹಾಡಿನ ಸಾಲುಗಳ ನೈಜ ಅರ್ಥವನ್ನು ಕೆಡಿಸಿರುವ ರೀಲ್ಸ್​​ ಪ್ರಿಯರು, ತಮಾಷೆಯ ವೈರಲ್ ವೆಪನ್ ಆಗಿದೆ. ಹಾಡಿಗೂ ಈ ಸ್ಟೋರಿಗೂ ಸಂಬಂಧ ಇಲ್ಲದಿದ್ದರೂ, ‘ಕರಿಮಣಿ ಮಾಲೀಕ ನೀನಲ್ಲ’ ಅನ್ನೋ ಸಾಲು ಹಲ್​​ಚೆಲ್​​ ಎಬ್ಬಿಸಿರುವ ಹೊತ್ತಿನಲ್ಲೇ, ಇಲ್ಲೊಬ್ಬ ಮಹಿಳೆ ತಾಳಿ ಕಟ್ಟಿದ್ದ ಕರಿಮಣಿ ಮಾಲೀಕನನ್ನೇ ಮುಗಿಸಿ ಕಂಬಿ ಹಿಂದೆ ಮುದ್ದೆ ಮುದ್ದೆ ಮುರೀತಿದ್ದಾಳೆ!

ಇದನ್ನು ಓದಿ: ಮಚ್ಚಿನಿಂದ ಕೊಚ್ಚಿ ಅತಿಥಿ ಶಿಕ್ಷಕನ ಕೊಲೆ.. ಜಮೀನಿನಲ್ಲಿ ಮೃತದೇಹ ಬಿಸಾಡಿ ಹೋದ ಪಾಪಿಗಳು

ಅಥಿತಿ ಶಿಕ್ಷಕನ ಕೊಲೆಗೆ ಬಿಗ್ ಟ್ವಿಸ್ಟ್..!

ಫೆಬ್ರವರಿ 9 ರಂದು ತುಮಕೂರಿನ ಕುಣಿಗಲ್ ತಾಲೂಕಿನ ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 47 ವರ್ಷದ ಅತಿಥಿ ಶಿಕ್ಷಕ ಮರಿಯಪ್ಪನ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹೊಡೆದು, ಎರಡು ಕೈಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮರಿಯಪ್ಪನ ಮೃತದೇಹ ಕುಣಿಗಲ್ ತಾಲೂಕಿನ ಕುಳಿನಂಜಯ್ಯನ ಪಾಳ್ಯದಲ್ಲಿ ಪತ್ತೆಯಾಗಿತ್ತು. ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಈ ಮೂಲಕ ಯಾರೋ ಕೊಲೆ ಮಾಡಿದ್ದಾರೆ ಎನ್ನಲಾಗಿರುವ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ಹೊಸ ತಿರುವು ಏನು..?

ಮರಿಯಪ್ಪನ ಮೃತದೇಹ ಪತ್ತೆ ಆಗುತ್ತಿದ್ದಂತೆಯೇ, ಆತನ ಹೆಂಡತಿ ಶೋಭಾ ಹಾಗೂ ಮಗಳು ಹೇಮಲತಾ ಕೊಲೆಯಾಗಿರುವ ಬಗ್ಗೆ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಳು. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ, ಅವರನ್ನು ಬಂಧಿಸಿ ಶಿಕ್ಷೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಳು. ತನಿಖೆ ಶುರುಮಾಡಿದ್ದ ಪೊಲೀಸರಿಗೆ ದೂರು ನೀಡಿದ್ದ ಹೇಮಲತಾ ಮತ್ತು ಶೋಭಾ ಮೇಲೆ ಅನುಮಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ವಿಚಾರಣೆಗೆ ಕರೆದು ತಮ್ಮದೇ ರೀತಿಯಲ್ಲಿ ಬೆಂಡೆತ್ತಿದ್ದಾಗ ಅಸಲಿ ಸತ್ಯವನ್ನು ಪೊಲೀಸರ ಎದುರು ಕಕ್ಕಿದ್ದಾರೆ. ಜೊತೆಗೆ ತಾನು ಯಾಕೆ ಗಂಡನನ್ನು ಕೊಂದೆ ಅನ್ನೋ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.

ಶೋಭಾ ಮತ್ತು ಮರಿಯಪ್ಪನ ಮಗಳು ಹೇಮಲತಾ ಲವ್ವಲ್ಲಿ ಬಿದ್ದಿದ್ದಳು. ಅದೇ ಗ್ರಾಮದ ಶಾಂತಕುಮಾರ್ ಎಂಬ ಯುವಕನ ಹಿಂದೆ ಹೇಮಲತಾ ಸುತ್ತಲು ಶುರುಮಾಡಿದ್ದಳು. ಇದಕ್ಕೆ ಮರಿಯಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಒಂದು ದಿನ ನನ್ನ ಮಗಳನ್ನೇ ಪ್ರೀತಿ ಮಾಡ್ತೀಯಾ ಎಂದು ಸಿಟ್ಟಿಗೆದ್ದು ಥಳಿಸಿದ್ದ. ಇದರಿಂದ ಶಾಂತಕುಮಾರ್​ಗೆ ಮರಿಯಪ್ಪನ ಮೇಲೆ ದ್ವೇಷ ಹೆಚ್ಚಾಗಿತ್ತು. ಪ್ರೀತಿಸಿದ ಹುಡುಗಿಯನ್ನು ಪಡೆಯಲು ಅಡ್ಡಿಯಾದ ಆಕೆಯ ತಂದೆಯನ್ನು ಮುಗಿಸಬೇಕು ಎಂದು ಶಾಂತಕುಮಾರ್ ನಿರ್ಧರಿಸಿದ್ದ. ಅಂತೆಯೇ ತನ್ನ ಸ್ನೇಹಿತರ ಜೊತೆಗೂಡಿ ಮರಿಯಪ್ಪನ ಕೊಲೆಗೆ ಸಂಚು ಮಾಡಿದ್ದ. ಇದಕ್ಕೆ ಹೇಮಲತಾ ಹಾಗೂ ತಾಯಿ ಶೋಭಾ ಕೂಡ ಸಹಾಯ ಮಾಡಿ, ಹೇಗೆ ಸಾಯಿಸಬೇಕು ಎಂಬ ಐಡಿಯಾವನ್ನು ತಿಳಿಸಿದ್ದಾರೆ.

ಮೂವರ ಬಾಲಕರ ಬಳಕೆ

ಅಂತೆಯೇ ಶಾಂತಕುಮಾರ್ ಬೆಂಗಳೂರಲ್ಲಿ ವಾಸವಿದ್ದ ತನ್ನ ಸ್ನೇಹಿತರಾದ ಸಂತು, ಹೇಮಂತ್​​ಗೆ ಕೊಲೆ ಮಾಡಲು ಸುಪಾರಿ ನೀಡಿದ್ದಾನೆ. ಈ ಹೇಮಂತ್ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂರು ಬಾಲಕರನ್ನು ಬಳಸಿಕೊಂಡು ಕೊಲೆ ಮಾಡಲು ಯೋಜನೆ ರೂಪಿಸಿದ್ದಾನೆ. ಇವರ ಸಂಚಿಗೆ ತಾಯಿ ಶೋಭಾ, ಮಗಳು ಹೇಮಲತಾ ಸಾಥ್ ನೀಡಿದ್ದಾರೆ. ಕಳೆದ ಶುಕ್ರವಾರ ಹಾಗೂ ಗುರುವಾರ ಮರಿಯಪ್ಪನ ಚಲನ ವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಮರಿಯಪ್ಪ ಅಮಾವಾಸ್ಯೆ ಪೂಜೆ ಮುಗಿಸಿ ಗ್ರಾಮಕ್ಕೆ ವಾಪಸ್ ಬರುತ್ತಿರುವ ಬಗ್ಗೆ ತಾಯಿ ಮಗಳು ಕಿರಾತಕ ಗ್ಯಾಂಗ್​ಗೆ ಮಾಹಿತಿ ನೀಡಿದೆ. ಮರಿಯಪ್ಪ ಕುಳಿನಂಜಯ್ಯನ ಪಾಳ್ಯದಲ್ಲಿ ಗ್ರಾಮದ ಬಳಿ ಬರುತ್ತಿದ್ದಂತೆಯೇ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಗಾಬರಿಗೊಂಡ ಮರಿಯಪ್ಪ ಬೈಕ್​ನಿಂದ ಕೆಳಗಿಳಿದು ಓಡಿ ಹೋಗಿದ್ದಾರೆ. ಬೆನ್ನತ್ತಿದ ಪಾತಕಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ‌ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನು ಓದಿ: ತಲೆಗೆ ಹೊಡೆದು, ಕೈ ಕತ್ತರಿಸಿ ಮರ್ಡರ್; ಕೊಳ್ಳೆಗಾಲದಲ್ಲಿ ಮಾಟ-ಮಂತ್ರ ಕಲಿತಿದ್ದ ಶಿಕ್ಷಕನ ಭೀಕರ ಹತ್ಯೆ ಆಗಿದ್ದೇಗೆ?

ಮಗಳ ಪ್ರೇಮಕ್ಕಾಗಿ ಕೊಲೆ

ಸದ್ಯ ಪೊಲೀಸರು ಶಾಂತಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರೆಸಿದ್ದಾರೆ. ತನಿಖೆಗೂ ಮೊದಲು ತನಗೇನು ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದ ತಾಯಿ ಮಗಳು, ಇದೀಗ ಪ್ರೀತಿಯ ವಿಚಾರದಲ್ಲಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮಗಳು ತನ್ನ ಪ್ರೇಮಕ್ಕಾಗಿ ಹುಟ್ಟಿಸಿದ ಅಪ್ಪನನ್ನೇ ಸಾಯಿಸಿದ್ರೆ, ಮಗಳ ಪ್ರೀತಿಗಾಗಿ ಅಮ್ಮ ತನ್ನ ಗಂಡನನ್ನೇ ಮುಗಿಸುವ ನಿರ್ಧಾರಕ್ಕೆ ಬಂದಿರೋದು ವಿಪರ್ಯಾಸ. ಗಂಡನ ಮೇಲೆ ಸಣ್ಣ ಮನಸ್ಸು ಮಾಡಿದ್ದರೂ, ಗಂಡ ಮತ್ತು ಮಗಳ ಪ್ರೀತಿ ಎರಡನ್ನೂ ಉಳಿಸಿಕೊಳ್ಳಬಹುದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಮಾವಾಸ್ಯೆ’ ಶಿಕ್ಷಕನ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್​; ಮಗಳ ಪ್ರೇಮದ ಮುಂದೆ ಅಮ್ಮನಿಗೆ ಬೇಡವಾಗಿದ್ದ ‘ಕರಿಮಣಿ ಮಾಲೀಕ’!

https://newsfirstlive.com/wp-content/uploads/2024/02/death-2024-02-13T151848.918.jpg

Load More