ಯಜಮಾನ ಸೀರಿಯಲ್​ ವೀಕ್ಷಕರಿಗೆ ಬಿಗ್ ಶಾಕ್​​; ತಾತನ ಮುಂದೆ ರಟ್ಟಾಯ್ತಾ ಝಾನ್ಸಿ, ರಾಘವೇಂದ್ರ ಮದುವೆ ಗುಟ್ಟು!

author-image
Veena Gangani
Updated On
ಯಜಮಾನ ಸೀರಿಯಲ್​ ವೀಕ್ಷಕರಿಗೆ ಬಿಗ್ ಶಾಕ್​​; ತಾತನ ಮುಂದೆ ರಟ್ಟಾಯ್ತಾ ಝಾನ್ಸಿ, ರಾಘವೇಂದ್ರ ಮದುವೆ ಗುಟ್ಟು!
Advertisment
  • ರಾಘವೇಂದ್ರನಿಗೆ ನಯಾ ಪೈಸೆ ಸಾಥ್​ ಕೊಡ್ತಿಲ್ಲ ಝಾನ್ಸಿ
  • ಯಜಮಾನ ಸೀರಿಯಲ್​ ವೀಕ್ಷಕರಿಗೆ ಶಾಕ್​ ಮೇಲೆ ಶಾಕ್
  • ರಾಘವೇಂದ್ರ ಮದುವೆ ಗುಟ್ಟು ಇಷ್ಟು ಬೇಗ ಬಯಾಲಾಯ್ತಾ?

ಯಜಮಾನ ಧಾರಾವಾಹಿಯಲ್ಲಿ ಸಖತ್​ ಟ್ವಿಸ್ಟ್​ ಒಂದು ವೀಕ್ಷಕರಿಗೆ ಶಾಕ್​ ನೀಡಿತ್ತು. ಇದೇನಿದು ರಾಘು ಗುಟ್ಟು ಇಷ್ಟು ಬೇಗ ಬಯಾಲಾಯ್ತಾ? ಝಾನ್ಸಿ ಮುಖವಾಡ ಕಳಚಿಬಿತ್ತಾ? ಎಂಬ ಕನ್ಫ್ಯೂಷನ್​ ಕ್ರಿಯೇಟ್ ​ ಆಗಿತ್ತು. ಒಂದಿಷ್ಟು ಜನ ಇದು ಪಕ್ಕಾ ಕನಸೇ ಅಂತಲೂ ಇದ್ರೂ.. ಮತ್ತೊಂದು ಕಡೆ ವೀಕ್ಷಕರು ರಾಘು ಎಲ್ಲಾ ಸತ್ಯ ಹೇಳಿ ಬಿಡು, ಝಾನ್ಸಿನೇ ಇದಕ್ಕೆಲ್ಲಾ ಕಾರಣ ಅಂತ ಹೇಳು ಮರಾಯ ಅಂತ ರಾಘು ಪರ ಬ್ಯಾಟ್​ ಬೀಸಿದ್ದರು.

ಇದನ್ನೂ ಓದಿ: ಸೂಪರ್​ ಸ್ಟಾರ್ ರಜನಿಕಾಂತ್ ಬಣ್ಣಗಳ ಹಬ್ಬವನ್ನು ಆಚರಿಸೋದಿಲ್ಲ ಏಕೆ? ಇಲ್ಲಿದೆ ಆ ಸೀಕ್ರೆಟ್!

publive-image

ಅಂತೂ ಇಂತೂ ಇದು ರಾಘು ಭಯದಲ್ಲಿ ಕಾಣ್ತಿರೋ ಕನಸು ಅಂತ ನಿನ್ನೆ ಪ್ರೂವ್​ ಆಯ್ತು. ಹೌದು, ಯಜಮಾನ ನಿನ್ನೆಯ ಸಂಚಿಕೆಯಲ್ಲಿ ರಾಘವೇಂದ್ರ ಝಾನ್ಸಿ ಕಾಂಟ್ರಾಕ್ಟ್​ ಮದುವೆ ಗುಟ್ಟು ಬಯಲಾಯ್ತು ಅಂದಕೊಂಡಿದ ವೀಕ್ಷಕರಿಗೆ ಇದೊಂದು ಕನಸು ಅಂತ ಗೊತ್ತಾಗಿದೆ. ಈಗ ಇರೋ ಪ್ರಶ್ನೆ ರಾಘು ಹೇಗೆ ಈ ಗುಟ್ಟನ್ನ ಕಾಪಾಡಿಕೊಳ್ತಾನೆ ಅಂತ.

publive-image

ಝಾನ್ಸಿ ಅಂತೂ ನಯಾ ಪೈಸೆ ರಾಘುಗೆ ಸಾಥ್​ ಕೊಡ್ತಿಲ್ಲ. ದುಡ್ಡು ಬಿಸಾಕಿದ್ದೀನಿ ನೀನ್​ ಉಂಟು ನಿನ್ನ ಸಮಸ್ಯೆ ಉಂಟು ಅಂತ ಕೈ ಎತ್ತಿದ್ದಾಳೆ. ಪಾಪ ರಾಘು ಭಯದಲ್ಲೇ ಮದುವೆ ಮನೆಯಲ್ಲಿ ಓಡಾಡ್ತಿದ್ದಾನೆ. ಗೆಳಯನ ಸಹಕಾರದಿಂದ ಎರಡೂ ಫ್ಯಾಮಿಲಿನ ಮ್ಯಾನೇಜ್​ ಮಾಡ್ತಿದ್ದಾನೆ. ಯಜಮಾನ ಇಂಟ್ರಸ್ಟಿಂಗ್​ ಸಂಚಿಕೆಗಳು ಮೂಡಿಬರ್ತಿವೆ. ಈ ನಡುವೆ ಸಮಯ ಬದಲಾಗಿದೆ. ಇಷ್ಟು ದಿನ 10 ಗಂಟೆಗೆ ಪ್ರಸಾರವಾಗ್ತಿದ್ದ ಧಾರಾವಾಹಿ ಇನ್ಮುಂದೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಹಾಗೇ ರಾಮಾಚಾರಿ 10 ಗಂಟೆಗೆ, ವಧು 10.30ಕ್ಕೆ ಪ್ರಸಾರವಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment