/newsfirstlive-kannada/media/post_attachments/wp-content/uploads/2024/11/ckm1.jpg)
ಚಿಕ್ಕಬಳ್ಳಾಪುರ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಯೋಗ ಶಿಕ್ಷಕಿ ಅಪಹರಣ ಕೇಸ್​ಗೆ ಬಿಗ್​ ಟ್ವಿಸ್ಟ್​ಯೊಂದು ಸಿಕ್ಕಿದೆ. ಯೋಗ ಶಿಕ್ಷಕಿ ಅರ್ಚನಾಳನ್ನು ಕಿಡ್ನಾಪ್​​​ ಮಾಡೋಕೆ ಸುಪಾರಿ ಕೊಟ್ಟಿದ್ದು ಬಿಂದು. ಇದೇ ಅರ್ಚನಾರ ಪತಿಯ ಗೆಳೆಯ ಸಂತೋಷ್​ ಪತ್ನಿ. ಅರ್ಚನಾ ವಿಶ್ವನಾಥ್​ ಎಂಬುವವರ ಜೊತೆಗೆ ಮದುವೆ ಆಗಿದ್ದರು.
ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಹೆಚ್​ಎಎಲ್​ನಲ್ಲಿ ಕೆಲಸ ಮಾಡೋ ಗಂಡನೊಂದಿಗೆ ಸಂಸಾರ ಸರಿ ಬಾರದ ಕಾರಣ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಹೀಗೆ ಅರ್ಚನಾ ತನ್ನ ಪತಿ ವಿಶ್ವನಾಥ್​​ರ ಸ್ನೇಹಿತ ಸಂತೋಷ್ ಜೊತೆ ಸಂತೋಷವಾಗಿದ್ರಂತೆ. ದಿನ ಕಳೆದಂತೆ ಇಬ್ಬರ ಮಧ್ಯೆ ಇನ್ನಿಲ್ಲದ ಸಲುಗೆ ಬೆಳೆದಿತ್ತು. ಇದು ಸಂತೋಷ್ ಪತ್ನಿ ಬಿಂದುಶ್ರೀ ಕೆರಳುವಂತೆ ಮಾಡಿತ್ತು.
/newsfirstlive-kannada/media/post_attachments/wp-content/uploads/2024/11/yoga-teacher3.jpg)
ಅಲ್ಲದೇ ಅರ್ಚನಾ ಪತಿಯನ್ನು ಬಿಟ್ಟು ಬಿಂದುಶ್ರೀ ಗಂಡನೊಂದಿಗೆ ಇದ್ದಾಳೆ ಅನ್ನೋ ಆರೋಪವಿದೆ. ಹಾಗಾಗಿಯೇ ತನ್ನ ಸಂಸಾರ ಉಳಿಸಿಕೊಳ್ಳೋದಕ್ಕೆ ಬಿಂದುಶ್ರೀ ಡಿಟೆಕ್ಟೀವ್​ ಅನ್ನೇ ಕಿಡ್ನಾಪ್ ಮಾಡೋಕೆ ಸುಪಾರಿ ಕೊಟ್ಟಿದ್ಳು. ಸತತ 3 ತಿಂಗಳ ಕಾಲ ಅರ್ಚನಾ ನಡೆಸುತ್ತಿದ್ದ ಯೋಗ ಕ್ಲಾಸ್​​ಗೆ ಸತೀಶ್​​ ಹೋಗ್ತಿದ್ದ. ಇದೇ ವೇಳೆಯೇ ವಿಶ್ವಾಸ ಗಳಿಸಿದ್ದ. ತಾನು ಗನ್ ಶೂಟಿಂಗ್ ಕ್ಲಾಸ್ ಮಾಡ್ತೀನಿ ಅಂತ ಹೇಳಿದ್ದ. ಅದನ್ನ ಕಲಿಸುತ್ತೇನೆ ಅಂತ ಹೇಳಿ ಅರ್ಚನಾರನ್ನು ಕಿಡ್ನಾಪ್ ಮಾಡಿದ್ದ. ಹೀಗಾಗಿ ಬಿಂದುಶ್ರೀ ಸತೀಶ್ ರೆಡ್ಡಿಗೆ ಶಿಕ್ಷಕಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದರಂತೆ. ಆದರೆ ಇದೀಗ ಈ ಕೇಸ್​ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/11/cbl.jpg)
ಯೋಗ ಶಿಕ್ಷಕಿ ಅರ್ಚನಾಳಿಗೆ ಬಿಂದು ಗಂಡ ಅಂದ್ರೆ ಸಂತೋಷ್​ ಮಾಂಗಲ್ಯಧಾರಣೆ ಮಾಡಿದ್ದರಂತೆ. ಇದೇ ಸಿಟ್ಟಿನಲ್ಲಿ ಶಿಕ್ಷಕಿಯನ್ನು ಅಪಹರಿಸಿ ಕೊಲೆ ಮಾಡುವಂತೆ ಸತೀಶರೆಡ್ಡಿಗೆ ಬಿಂದು ಸುಪಾರಿ ಕೊಟ್ಟಿದ್ದಳು. ಹೀಗಾಗಿ ಕಿಡ್ನಾಪ್ ಮಾಡಿದ್ದ ಸಂದರ್ಭದಲ್ಲಿ ಶಿಕ್ಷಕಿಯ ಕತ್ತಲ್ಲಿದ್ದ ಮಾಂಗಲ್ಯ ಸರವನ್ನು ಸುಪಾರಿ ಕಿಲ್ಲರ್​ ಕಿತ್ತು ಹಾಕಿದ್ದನಂತೆ. ಸದ್ಯ ಚಿಕ್ಕಬಳ್ಳಾಪುರದ ದಿಬ್ಬೂರ ಹಳ್ಳಿ ಠಾಣಾ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/11/yoga-teacher2.jpg)
ಯೋಗ ಶಿಕ್ಷಕಿ ಸಾವನ್ನೇ ಗೆದ್ದು ಬಂದಿದ್ದು ಹೇಗೆ?
ಕರಾಟೆ ಕಿಂಗ್ ಶಂಕರ್​ ನಾಗ್ ಅಭಿನಯದ ಸಿಬಿಐ ಶಂಕರ್​ ಸಿನಿಮಾದಲ್ಲಿ ದೇವರಾಜ್ ಪ್ರಾಣಯಾಮ ವಿದ್ಯೆಯನ್ನ ಬಳಸಿಕೊಂಡು ಮೂಲಕ ಸತ್ತಂತೆ ನಟಿಸಿ ಪರಾರಿ ಆಗ್ತಾರೆ. ಇದೇ ರೀತಿಯಲ್ಲೇ ಯೋಗ ಟೀಚರ್​ ಅರ್ಚನಾ ಸಾವು ಗೆದ್ದು ಸಮಾಧಿ ಸೀಳಿಕೊಂಡು ಬಂದಿದ್ದಾರೆ. ಸಾವು ಗೆದ್ದು ಬರೋದಕ್ಕೆ ಆಕೆ ಕಲಿತಿದ್ದ ಯೋಗ ಕೂಡ ಮುಖ್ಯ ಕಾರಣ ಎನ್ನುವ ಮಾತುಗಳೂ ಕೇಳಿಬರ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us