ಡೆಲಿವರಿ ಬಾಯ್​ನಿಂದ ಲೈಂಗಿಕ ದೌರ್ಜನ್ಯ ಕೇಸ್​ಗೆ ಬಿಗ್​ ಟ್ವಿಸ್ಟ್​.. ಪೊಲೀಸರ ಮುಂದೆ ಅಸಲಿ ಸತ್ಯ ಬಿಚ್ಚಿಟ್ಟ ಯುವತಿ​

author-image
Veena Gangani
Updated On
35 ಸಾವಿರ ರೂಪಾಯಿ ಸಾಲ ತೀರಿಸಲು ಶ್ರೀರಾಮುಲುಗೆ ಅಕ್ಕನ ಮಗಳನ್ನು ಮಾರಿದ ಸಹೋದರಿ! 
Advertisment
  • ಫ್ಲ್ಯಾಟ್​ಗೆ ನುಗ್ಗಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ!
  • ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಪುಣೆಯ ಈ ಕೇಸ್
  • ಪೊಲೀಸರ ಮುಂದೆ ಮಹಿಳಾ ಟೆಕ್ಕಿ ಹೇಳಿದ್ದೇನು..?

ಕಳೆದ ಬುಧವಾರ ಪುಣೆಯಲ್ಲಿ ಮಹಿಳಾ ಟೆಕ್ಕಿಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೊಲೀಸ್ ಠಾಣೆೆಯಲ್ಲಿ ದೂರು ದಾಖಲಿಸಿದ್ದರು. ಕೊರಿಯರ್ ಡೆಲಿವರಿ ಏಜೆಂಟ್ ವೇಷದಲ್ಲಿ ಮನೆಗೆ ಬಂದು ನನ್ನ ಮೇಲೆ ದೌರ್ಜನ್ಯ ನಡೆಸಿ, ಸೆಲ್ಫಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅಲ್ಲದೇ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ:ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು​!​

publive-image

ಈ ಸುದ್ದಿ ಮಹಾರಾಷ್ಟ್ರ ಹಾಗೂ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಆದ್ರೆ ಈ ಲೈಂಗಿಕ ದೌರ್ಜನ್ಯ ಕೇಸ್​ಗೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಟೆಕ್ಕಿಯ ಮೇಲೆ ನಿಜಕ್ಕೂ ಲೈಂಗಿಕ ದೌರ್ಜನ್ಯ ನಡೆಯಿತಾ? ಅಥವಾ ಸಮ್ಮತಿ ಇಲ್ಲದ ಸೆಕ್ಸ್ ಅನ್ನು ವಿರೋಧಿಸಲು ಯುವತಿ ಲೈಂಗಿಕ ದೌರ್ಜನ್ಯ ದೂರು ನೀಡಿದ್ದಳಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈಗ ಯುವತಿಯೇ ಪೊಲೀಸರಿಗೆ ಬೇರೆಯದ್ದೇ ಆದ ಹೇಳಿಕೆಯನ್ನು ನೀಡಿದ್ದಾಳೆ.

publive-image

ಅಂದು ತನ್ನ ಜೊತೆ ಲೈಂಗಿಕ ಕೃತ್ಯ ಎಸಗಿದ್ದ ವ್ಯಕ್ತಿ ತನ್ನ ಸ್ನೇಹಿತ ಎಂದು ಹೇಳಿದ್ದಾಳೆ. ಸ್ನೇಹಿತನನ್ನು ತಾನು ಈ ಹಿಂದೆಯೂ ಸಾಕಷ್ಟು ಭಾರಿ ಭೇಟಿಯಾಗಿದ್ದೇನೆ. ಕಳೆದ ಬುಧವಾರ ಕೋಪದಿಂದ ಆತನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದೆ. ಅಂದು ಮನೆಗೆ ಬಂದ ಆತ, ನನ್ನ ಒಪ್ಪಿಗೆ ಇಲ್ಲದೇ, ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಇದರಿಂದಾಗಿ ಇದು ಅಪರಿಚಿತರಿಂದ ನಡೆದ ಕೃತ್ಯವಲ್ಲ, ಕೊರಿಯರ್ ಡೆಲಿವರಿ ಬಾಯ್​ನಿಂದ ನಡೆದ ಕೃತ್ಯವೂ ಅಲ್ಲ ಎಂಬುದು ಧೃಢಪಟ್ಟಿದೆ.

ಇನ್ನೂ, ಯುವತಿಯು ಈ ಮೊದಲು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಅಂದು ನಾನು ನಡೆದ ಘಟನೆಗೆ (ಸೆಕ್ಸ್​ಗೆ) ರೆಡಿ ಇರಲಿಲ್ಲ. ಆದ್ರೆ, ಫ್ರೆಂಡ್ ನನ್ನನ್ನು ಬಲವಂತ ಮಾಡಿದ. ಹೀಗಾಗಿ ಕೋಪದಿಂದ ಆತನ ವಿರುದ್ಧ ದೂರು ನೀಡಿದೆ. ಅದನ್ನು ಲೈಂಗಿಕ ದೌರ್ಜನ್ಯ ಎಂದು ದೂರು ನೀಡಿದೆ ಎಂದು ಯುವತಿ ಹೇಳಿದ್ದಾಳೆ ಎಂದು ಪೊಲೀಸ್ ಕಮೀಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ. ಈ ಮೊದಲು ಪೊಲೀಸರಿಗೆ ನೀಡಿದ ದೂರಿನಲ್ಲಿ, ಕೊರಿಯರ್ ಡೆಲಿವರಿ ಏಜೆಂಟ್ ವೇಷದಲ್ಲಿ ಮನೆಗೆ ಬಂದ ಯುವಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ. ಬಳಿಕ ಸೆಲ್ಫಿ ತೆಗೆದುಕೊಂಡು, ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ ಪರಾರಿಯಾದ ಎಂದು ದೂರು ನೀಡಿದ್ದಳು.

ಆದರೆ, ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯುವತಿಯೇ ಯುವಕನ ಜೊತೆ ಸೆಲ್ಫಿ ಪೋಟೋ ತೆಗೆದುಕೊಂಡಿದ್ದಾಳೆ. ಇದರಲ್ಲಿ ಯುವಕನ ಪೋಟೋ ಸ್ಪಷ್ಟವಾಗಿ ಕಾಣುತ್ತಿದೆ. ಇದನ್ನು ಯುವತಿಯೇ ಎಡಿಟ್ ಮಾಡಿದ್ದಾಳೆ. ಇನ್ನೂ ಯುವಕ, ಯುವತಿಯ ಪೋಷಕರು ಇಲ್ಲದ ವೇಳೆ ಆಕೆಯ ಮನೆಗೆ ಸಾಕಷ್ಟು ಭೇಟಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment