/newsfirstlive-kannada/media/post_attachments/wp-content/uploads/2024/11/justiceforsandhya.jpg)
ಬೆಂಗಳೂರು: ಕೆಂಗೇರಿ ಬಸ್ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 30 ವರ್ಷದ ಟೆಕ್ಕಿ ಸಂಧ್ಯಾ ಅವರು ಮೃತಪಟ್ಟಿದ್ದರು. ಯಾವ ತಪ್ಪು ಮಾಡದಿರೋ ಸಂಧ್ಯಾ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಸಂಧ್ಯಾಳಿಗೆ ಗುದ್ದಿದ್ದ ಆರೋಪಿಯನ್ನು ರಕ್ಷಿಸಲು ಪೊಲೀಸರು ಮುಂದಾದ್ರಾ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: ಡ್ರಿಂಕ್ & ಡ್ರೈವ್ ಅಪಘಾತ.. ಸಂಧ್ಯಾ ಸಾವಿಗೂ ಮುನ್ನ ನಡೆದಿದ್ದೇನು? ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಆರೋಪಿಗೆ ಮುಖವನ್ನು ಮುಚ್ಚಿಕೊಳ್ಳುವಂತೆ ಪೊಲೀಸರೇ ಸಲಹೆ ನೀಡಿದ್ದಾರಂತೆ. ಅಲ್ಲದೇ ಮೃತ ಸಂಧ್ಯಾ ಕುಟುಂಬಸ್ಥರಿಗೆ ಒಂದುವರೆ ಕೋಟಿ ರೂಪಾಯಿ ಆಫರ್ ಮಾಡಿರೋ ಆರೋಪ ಕೂಡ ಕೇಳಿ ಬಂದಿದೆ. ಆರೋಪಿ ಧನುಷ್ನನ್ನ ರಕ್ಷಿಸಲು ಪೋಲಿಸರು ವಾಶ್ ರೂಂಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆರೋಪಿಯನ್ನು ಗಂಟೆಗಟ್ಟಲೇ ವಾಶ್ ರೂಂನಲ್ಲೇ ಇರಿಸಿಕೊಂಡಿದ್ದಾರಂತೆ. ಆರೋಪಿಯ ಫೋಟೋ ಹಾಗೂ ವೀಡಿಯೋ ಕ್ಲಿಕ್ಕಿಸದಂತೆ ಪೊಲೀಸರು ರಕ್ಷಣೆ ಮಾಡುತ್ತಿದ್ದಾರಂತೆ. ಪೊಲೀಸರ ಈ ರೀತಿಯ ವರ್ತನೆ ನೋಡಿ ಸಂಧ್ಯಾ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೇ ಎಫ್ಐಆರ್ನಲ್ಲೂ ಆರೋಪಿಯ ಹೆಸರನ್ನು ಉಲ್ಲೇಖ ಮಾಡಿಲ್ಲವಂತೆ.
ಇನ್ನೊಂದೆಡೆ ಜೈಲಿಗೆ ಹೋದರೆ ಕೇವಲ ಆರು ತಿಂಗಳಲ್ಲಿ ಆಚೆ ಬರಬಹುದು ಅಂತ ಹೇಳುತ್ತಿದ್ದಾರಂತೆ. ನಮ್ಮ ಕಾನೂನು ವ್ಯವಸ್ಥೆ ನೋಡಿದ್ರೆ ನಮಗೆ ಬೇಜಾರಾಗುತ್ತೆ. 6.45ಕ್ಕೆ ಘಟನೆ ಆದ್ರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಎಫ್ಐಆರ್ ಮಾಡ್ತಾರೆ. ನಾವು ದೂರು ಕೊಟ್ಟರೆ ನಮ್ಮ ದೂರನ್ನ ತೆಗೆದುಕೊಂಡಿಲ್ಲ. ಪ್ರತ್ಯಕ್ಷದರ್ಶಿ ಅಂಥ ಬೇರೊಬ್ಬ ವ್ಯಕ್ತಿಯನ್ನ ದೂರುದಾರನನ್ನಾಗಿ ಮಾಡಿದ್ದಾರೆ. ಆತನಿಗೆ ಸರಿಯಾಗಿ ಏನೂ ಗೊತ್ತಿಲ್ಲ ಅಂತ ನ್ಯೂಸ್ಫಸ್ಟ್ಗೆ ಸಂಧ್ಯಾ ಸಂಬಂಧಿ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ