newsfirstkannada.com

ಶಿಕ್ಷಕಿ ವಜಾ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಶಾಸಕ ವೇದವ್ಯಾಸ್​ ಕಾಮತ್, ಭರತ್​ ಶೆಟ್ಟಿ ವಿರುದ್ಧವೇ ಎಫ್​ಐಆರ್!

Share :

Published February 16, 2024 at 8:26pm

  ಶಾಲಾ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ಆರೋಪ

  ಶಾಸಕ ವೇದವ್ಯಾಸ್ ಕಾಮತ್​, ಭರತ್ ಶೆಟ್ಟಿಯಿಂದ ಆಕ್ರೋಶ

  ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ

ಮಂಗಳೂರಿನ ಸೆಂಟ್​ ಜೆರೋಸಾ ಸ್ಕೂಲ್‌ನಲ್ಲಿ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ಆಗಿದೆ ಎನ್ನುವ ಪ್ರಕರಣ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿಗಳು, ಶಾಸಕರು, ಹಿಂದೂ ಮುಖಂಡರೆಲ್ಲಾ ಸೇರಿ ಶಾಲೆ ಮುಂದೆ ಭಾರಿ ಪ್ರತಿಭಟನೆ ಮಾಡಿದ ನಂತರ ಶಿಕ್ಷಕಿಯನ್ನ ಅಮಾನತುಗೊಳಿಸಲಾಗಿತ್ತು. ಆದ್ರೀಗ ಈ ಕೇಸ್ ಶಾಸಕರಿಗೆ ಉಲ್ಟಾ ಹೊಡೆದಿದೆ. ಮಂಗಳೂರಿನ ಇಬ್ಬರು ಶಾಸಕರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ರಾಜಕೀಯ ಬೆರತಿದೆ.

ಮಂಗಳೂರಿನ ಸೆಂಟ್​ ಜೆರೋಸಾ ಶಾಲೆಯ ಶಿಕ್ಷಕಿಯಿಂದ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದನ್ನ ಖಂಡಿಸಿ ವಿದ್ಯಾರ್ಥಿಗಳು, ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಮುಖಂಡರು ಸಾಥ್ ಕೊಟ್ಟಿದ್ದು ಬೇರೆಯದ್ದೇ ರೂಪ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಶಾಸಕ ವೇದವ್ಯಾಸ ಕಾಮತ್ ಹಾಗೂ ಶಾಸಕ ಭರತ್ ಶೆಟ್ಟಿ ಅವರು ಖುದ್ದು ಪ್ರತಿಭಟನೆಯಲ್ಲಿ ಭಾಗವಹಿಸಿ ಶಿಕ್ಷಕಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಶಾಲೆಯ ಮಕ್ಕಳು, ಪೋಷಕರ ಜೊತೆ ಸೇರಿ ಜೈ ಶ್ರೀರಾಮ್ ಘೋಷಣೆ ಕೂಗಿಸಿ ಶಾಲೆಯ ವಿರುದ್ಧ ಧಿಕ್ಕಾರ ಹಾಕಿದರು. ಶಿಕ್ಷಕಿ ವಿರುದ್ಧ ಕ್ರಮ ಆಗದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಅಂತ ಎಚ್ಚರಿಕೆ ಕೊಟ್ಟರು. ಕೊನೆಗೆ ಪ್ರತಿಭಟನೆಕಾರರ ಆಕ್ರೋಶಕ್ಕೆ ಮಣಿದ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ಪ್ರಭಾ ಅವರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿತ್ತು.

ಶಿಕ್ಷಕಿ ಪ್ರಭಾ ಅವರನ್ನ ಸಸ್ಪೆಂಡ್​ ಮಾಡಿದರೂ ಪ್ರತಿಭಟನೆ ನಿಲ್ಲಲಿಲ್ಲ. ಹಿಂದು ದೇವರನ್ನು ನಿಂದಿಸಿದ ಶಿಕ್ಷಕಿ ಪ್ರಭಾ ಜೊತೆಗೆ ಸ್ಟೀಫನ್, ಮೊಲಿ ಎಂಬ ಇನ್ನಿಬ್ಬರನ್ನೂ ಅಮಾನತು ಮಾಡಬೇಕು ಎಂದು ಪೋಷಕರು ಆಗ್ರಹ ಮಾಡಿದ್ದರು. ಕೊನೆಗೆ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಧರಣಿ ಕುಳಿತ ಪೋಷಕರನ್ನು ಮತ್ತು ಶಾಸಕರನ್ನು ಮನವೊಲಿಸಿದ್ದರು. ಹಿಂದೂ ದೇವರ ಅವಹೇಳನ ಮಾಡಿದ ಶಿಕ್ಷಕಿ ಕುರಿತು ತನಿಖೆ ಮಾಡುವುದಾಗಿ ಭರವಸೆ ಕೊಟ್ಟ ನಂತರ ಶಾಲೆಯ ವಿರುದ್ಧ ಎದ್ದಿದ್ದ ಕಾವು ತಣ್ಣಗಾಗಿತ್ತು. ಆದರೀಗ ರಾಜಕೀಯವಾಗಿ ಈ ಘಟನೆ ಚರ್ಚೆಗೆ ಕಾರಣವಾಗಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ.

ಶಾಸಕ ವೇದವ್ಯಾಸ್​ ಕಾಮತ್, ಭರತ್​ ಶೆಟ್ಟಿ ವಿರುದ್ಧ ಎಫ್​ಐಆರ್ ದಾಖಲು​!

ಶಿಕ್ಷಕಿ ಸಸ್ಪೆಂಡ್​ ಆದರು.. ಪ್ರತಿಭಟನೆಗೆ ಕೂತಿದ್ದ ವಿದ್ಯಾರ್ಥಿಗಳನ್ನ, ಪೋಷಕರನ್ನ ಹಾಗೂ ಶಾಸಕರನ್ನ ಡಿಸಿ ಸಮಾಧಾನಗೊಳಿಸಿದ್ದರು. ಆದರೀಗ ವಿದ್ಯಾರ್ಥಿಗಳು, ಪೋಷಕರು ಜೊತೆ ಪ್ರತಿಭಟನೆ ಮಾಡಿದ್ದ ಶಾಸಕ ವೇದವ್ಯಾಸ್ ಕಾಮತ್, ಶಾಸಕ ಭರತ್ ಶೆಟ್ಟಿ ಸೇರಿ ಆರು ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಂಟ್​ ಜೆರೋಸಾ ಶಾಲೆಯ ಅನಿಲ್ ಜೆರಾಲ್ಡ್ ಲೋಬೋ ಅನ್ನೋರು ಕಂಪ್ಲೆಂಟ್​ ಫೈಲ್ ಮಾಡಿದ್ದು, ಶಾಲೆಯ ಶಿಕ್ಷಕಿ ಯಾವುದೇ ತಪ್ಪು ಮಾಡಿಲ್ಲ. ಶಾಸಕರು ಹಾಗೂ ಕೆಲವು ಹಿಂದೂ ಮುಖಂಡರು ಹಿಂದೂ-ಕ್ರೈಸ್ತರ ಗಲಭೆಯಾಗುವಂತೆ ಪ್ರಚೋದನೆ ನೀಡಿದ್ದಾರೆ. ಶಾಲೆಯ ಎದುರುಗಡೆ ಜೈ ಶ್ರೀರಾಮ್ ಘೋಷಣೆ ಕೂಗಿಸಿ ಗಲಾಟೆ ಸೃಷ್ಟಿಸಿದ್ದಾರೆ ಅಂತ ಆರೋಪಿಸಿ ದೂರು ದಾಖಲಿಸಿದ್ದಾರೆ. ಇದೇ ವಿಚಾರವಾಗಿ ಶಾಲೆಯ ಆಡಳಿ ಮಂಡಳಿ ಪತ್ರಿಕಾ ಹೇಳಿಕೆಯೊಂದು ಬಿಡುಗಡೆ ಮಾಡಿದ್ದು, ಶಾಸಕರ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಶಾಲೆಯ ಆಡಳಿತ ಮಂಡಳಿ ಹೇಳಿದ್ದೇನು?

ಶಿಕ್ಷಕಿ ಸಿಸ್ಟರ್ ಪ್ರಭಾ ಹಿಂದು ದೇವರ ಅವಹೇಳನ ಮಾಡಿಲ್ಲ. ಶಾಸಕ ವೇದವ್ಯಾಸ ಕಾಮತ್ ಒತ್ತಡಕ್ಕೆ ಮಣಿದು ಶಿಕ್ಷಕಿ ವಜಾ ಮಾಡಿದ್ದೇವೆ. ಸಿಸ್ಟರ್ ಪ್ರಭಾ ಅವರು ರವೀಂದ್ರನಾಥ ಠಾಗೋರ್ ಬರೆದ ‘ವರ್ಕ್ ಈಸ್ ವರ್ಷಿಪ್’ ಎಂಬ ಇಂಗ್ಲಿಷ್ ಕವನದ ಪಾಠ ಮಾಡಿದ್ದಾರೆ. ಮಸೀದಿ, ದೇಗುಲ, ಚರ್ಚ್ ಕೇವಲ ಕಟ್ಟಡಗಳು ಮಾತ್ರ, ದೇವರು ಮಾನವನ ಒಳಗಿದ್ದಾನೆ, ದುಡಿಮೆಯೇ ದೇವರು, ಮನುಷ್ಯನಲ್ಲೇ ದೇವರಿದ್ದಾನೆಂದು ವಿವರಣೆ ನೀಡಿದ್ದರು. ಆದರೆ ಆಡಿಯೋ ಮೆಸೇಜ್​ನಲ್ಲಿ ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಲಾಗಿದೆ. ಆಡಿಯೋ ಸಂದೇಶ ಕಳುಹಿಸಿರುವ ಮಹಿಳೆ ಬಗ್ಗೆ ತನಿಖೆಯಾಗಬೇಕು. ಶಾಸಕ ವೇದವ್ಯಾಸ್ ಶಾಲೆಯ ಹೊರಗೆ ನಿಂತು ಮಕ್ಕಳಿಂದ ಘೋಷಣೆ ಕೂಗಿಸಿದ್ದಾರೆ. ಮಕ್ಕಳು ತಮ್ಮದೇ ಶಾಲೆಯ ವಿರುದ್ಧ ಘೋಷಣೆ ಹಾಕುವಂತೆ ಮಾಡಿದ್ದಾರೆ. ಶಾಸಕರು, ಶಿಕ್ಷಕಿಯನ್ನ ವಜಾ ಮಾಡಲೇಬೇಕು, ಇಲ್ಲದಿದ್ದರೆ ಧರಣಿ ಕೂರುತ್ತೇನೆಂದು ಬೆದರಿಸಿದರು. ಉದ್ರಿಕ್ತರು ಸೇರಿ ಘೋಷಣೆ ಹಾಕಿ, ಒತ್ತಡ ಹೇರಿದ್ದರಿಂದ ಶಿಕ್ಷಕಿಯನ್ನು ವಜಾ ಮಾಡಬೇಕಾಯಿತು ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುಂಚೆ ಜೆರೋಸಾ ಶಿಕ್ಷಣ ಸಂಸ್ಥೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತ್ತು. ಘಟನೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಕಲೆ ಹಾಕಿದೆ. ಬಳಿಕ ಮಾತನಾಡಿದ ಮಾಜಿ ಸಚಿವ ರಮಾನಾಥ್ ರೈ, ‘ಜೆರೋಸಾ ವಿದ್ಯಾಸಂಸ್ಥೆ ಘಟನೆ ಬಗೆಗಿನ ಆರೋಪ ದೊಡ್ಡ ಪ್ರಚಾರ ಆಗಿದೆ. ಪರಿಶುದ್ಧವಾದ ಮಕ್ಕಳ ನಿಷ್ಕಲ್ಮಷ ಮನಸ್ಸನ್ನ ಪ್ರಚೋದನೆಗೆ ಬಳಸಬಾರದು. ಮಕ್ಕಳನ್ನ ರಾಜಕೀಯಕ್ಕೆ ಬಳಸಬಾರದು. ಈ ಬಗ್ಗೆ ತನಿಖೆಯಾಗಲಿ’ ಎಂದಿದ್ದಾರೆ. ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ಶಾಸಕರ ವಿರುದ್ಧ ದೂರು ದಾಖಲಿಸಲಾಗಿದ್ದು, ವೇದವ್ಯಾಸ ಕಾಮತ್ ಅವರ ಶಾಸಕತ್ವ ರದ್ದು ಆಗುವ ವರೆಗೂ ಹೋರಾಟ ಮಾಡುತ್ತೇವೆ. ಹಕ್ಕು ಬಾದ್ಯತಾ ಸಮಿತಿ ಕೂಡ ತನಿಖೆ ಮಾಡಬೇಕು ಎಂದಿದ್ದಾರೆ.

ಈ ಕಡೆ ದೂರು ದಾಖಲಾದ ನಂತರ ವೇದವ್ಯಾಸ್ ಕಾಮತ್ ಸಹ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕು ಇದೆ. ಜೈ ಶ್ರೀರಾಮ್ ಯಾವುದೋ ರಾಜಕೀಯ ಘೋಷಣೆಯಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಡಿಡಿಪಿಐ ಯವರನ್ನು ವರ್ಗಾವಣೆ ಮಾಡಿದೆ. ನನ್ನ ಮೇಲೆ ಪ್ರಕರಣ ದಾಖಲಾಗಿದೆ, ಇದು ಕಾಂಗ್ರೆಸ್​ನವರ ಕೈವಾಡದಿಂದ ನಡೆಯುತ್ತದೆ’ ಎಂದು ತಿರುಗೇಟು ಕೊಟ್ಟಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಸಹ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಈ ಹೋರಾಟ ಆರಂಭಿಸಿದ್ದು ಮಕ್ಕಳ ಪೋಷಕರು, ಬಿಜೆಪಿ ಮುಖಂಡರಲ್ಲ. ಪೋಷಕರು ಹೋರಾಟಕ್ಕೆ ಜನಪ್ರತಿನಿಧಿಗಳು ಜೊತೆಯಾಗಿದ್ದಾರೆ, ಅದು ಅವರ ಜವಾಬ್ದಾರಿ. ನಾನು ಇದ್ದಿದ್ರೆ ನಾನು ಹೋರಾಟಕ್ಕೆ ಹೋಗುತ್ತಿದ್ದೆ. ಇದರಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ’ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಶಾಸಕರು ಹಾಗೂ ಹಿಂದೂ ಮುಖಂಡರ ವಿರುದ್ಧ ದೂರು ದಾಖಲಾಗ್ತಿದ್ದಂತೆ ಕೇಸ್​ ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ ಮಾಡೋಕೆ ಮುಂದಾಗಿದೆ. ಸೋಮವಾರ ನಗರದ ಎಲ್ಲಾ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ಮಾಡೋಕೆ ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಕ್ಷಕಿ ವಜಾ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಶಾಸಕ ವೇದವ್ಯಾಸ್​ ಕಾಮತ್, ಭರತ್​ ಶೆಟ್ಟಿ ವಿರುದ್ಧವೇ ಎಫ್​ಐಆರ್!

https://newsfirstlive.com/wp-content/uploads/2024/02/mng-sister.jpg

Load More