Advertisment

ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

author-image
Ganesh
Updated On
ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!
Advertisment
  • ಮಹಿಳೆಯ ಪತ್ನಿಯನ್ನು ಬಂಧಿಸಿದ್ದರೂ ಮಾಹಿತಿ ಸಿಕ್ಕಿರಲಿಲ್ಲ
  • ಒಂದೇ ಕಡೆ ಕೂತು ಕೆಲಸ ಮಾಡ್ತಿದ್ದವರಿಂದಲೇ ನಡೆದಿತ್ತು ಕೃತ್ಯ
  • ಕೋರ್ಟ್​ಗೆ ನೀಡಿದ ಮಾಹಿತಿಯಲ್ಲಿ ಬಯಲಾಯ್ತು ಅಸಲಿ ಸತ್ಯ

ಬೆಂಗಳೂರು: ಮೂವರನ್ನು ಬಂಧಿಸುವ ಮೂಲಕ 11 ವರ್ಷ ಹಿಂದಿನ ರೇಪ್‌ ಅಂಡ್​ ಮರ್ಡರ್ ಪ್ರಕರಣವನ್ನು ಸಿಐಡಿ ಭೇದಿಸಿದೆ. ನರಸಿಂಹ ಮೂರ್ತಿ, ದೀಪಕ್, ಹರಿ ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ.

Advertisment

2013ರ ಫೆಬ್ರುವರಿ 15ನೇ ತಾರೀಖಿನಂದು ವಿಜಯಾ ಎಂಬ ಮಹಿಳೆಯನ್ನು ಎತ್ಕೊಂಡು ಹೋಗಿ ನೀಲಗಿರಿ ತೋಪಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಕೊಲೆ ಮಾಡಿದ್ದರು. ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿ ಆಗಿದ್ದರು. ಪ್ರಕರಣ ಕೈಗೆತ್ತಿಕೊಂಡ ಸಿಐಡಿ ಪೊಲೀಸರು 11 ವರ್ಷದ ಹಿಂದಿನ ಪ್ರಕರಣವನ್ನು ಭೇದಿಸಿ ಕೃತ್ಯವೆಸಗಿದ್ದ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:ಮತ್ತೆ ಬಿರುಗಾಳಿ ಎಬ್ಬಿಸಿದೆ ಕೊಹ್ಲಿ ನಿವೃತ್ತಿ ಸುದ್ದಿ.. ವಿರಾಟ್ ವಿದಾಯಕ್ಕೆ ಇದೆ 2 ಬಲವಾದ ಕಾರಣ..!

ಆರೋಪಿಗಳಾದ ನರಸಿಂಹಮೂರ್ತಿ ಮತ್ತು ಹರಿಪ್ರಸಾದ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್​ನಲ್ಲಿ ಕೊಲೆಯಾದ ಮಹಿಳೆಯ ಗಂಡ ಬಾಲಕೃಷ್ಣ ಪೈ ಕೆಲಸ ಮಾಡುತ್ತಿದ್ದರು. ಚಿಕ್ಕಜಾಲ ಬಳಿಯ ನೀಲಗಿರಿ ತೋಪಿನಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಅನುಮಾನಗೊಂಡ ಚಿಕ್ಕಜಾಲ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದರು. ಕೆಲ ದಿನಗಳ ಬಳಿಕ ಕೊಲೆಯಲ್ಲಿ ಗಂಡನ ಪಾತ್ರ ಇಲ್ಲ ಅನ್ನೋದು ಗೊತ್ತಾಗಿತ್ತು.

Advertisment

ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಕೂಡ ಸಲ್ಲಿಸಿದ್ದರು. ನಂತರ ಪ್ರಕರಣ ಸಂಬಂಧ ಬಾಲಕೃಷ್ಣ ಪೈ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದರು. ಪ್ರಕರಣದ ವಿಸ್ತೃತ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಮಹಿಳೆ ಕೊಲೆ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಪ್ರಕರಣದಲ್ಲಿ ದೀಪಕ್ ಎಂಬಾತನ ಕೈವಾಡ ಇರೋದು ಬೆಳಕಿಗೆ ಬಂದಿತ್ತು. ದೀಪಕ್​ನ ವಿಚಾರಣೆ ನಡೆಸಿದಾಗ ಉಳಿದಿಬ್ಬರ ಬಗ್ಗೆ ಮಾಹಿತಿ ಸಿಕ್ಕಿದೆ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ನರಸಿಂಹ ಮೂರ್ತಿ ಹಾಗೂ ಸಹಚರ ಹರಿಪ್ರಸಾದ್ ಕೈವಾಡ ಇರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್

ಇಬ್ಬರೂ ಆರೋಪಿಗಳು ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. ಕೊಲೆ ಮಾಡಿ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿಯಾಗಿದ್ದರು. ಇದೀಗ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 11 ವರ್ಷಗಳ ಬಳಿಕ ಮಹಿಳೆ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Advertisment

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment