ಸತ್ತಳು ಅಂತ ಅಂತ್ಯ ಸಂಸ್ಕಾರ ಮಾಡಿದ್ರು.. 18 ತಿಂಗಳ ಆ 1 ಟ್ಯಾಟೂ ಕೊಟ್ಟಿದೆ ಬಿಗ್​ ಟ್ವಿಸ್ಟ್! ಏನದು?

author-image
admin
Updated On
ಸತ್ತಳು ಅಂತ ಅಂತ್ಯ ಸಂಸ್ಕಾರ ಮಾಡಿದ್ರು.. 18 ತಿಂಗಳ ಆ 1 ಟ್ಯಾಟೂ ಕೊಟ್ಟಿದೆ ಬಿಗ್​ ಟ್ವಿಸ್ಟ್! ಏನದು?
Advertisment
  • ಅವಳ ಕೊಲೆ ಕೇಸ್​​ನಲ್ಲಿ ನಾಲ್ವರು ಜೈಲು ಶಿಕ್ಷೆ ಅನುಭವಿಸುತ್ತಿದ್ದರು
  • ಆ ಅಪರಿಚಿತ ಶವ ಮಗಳದ್ದು ಎಂದು ಅಂತ್ಯ ಸಂಸ್ಕಾರ ಮಾಡಿದ್ದರು
  • ಎದ್ದು ಬಂದವಳ ಕೈ ಮೇಲಿನ ಟ್ಯಾಟೂ ಈಗ ಬಿಗ್​ ಟ್ವಿಸ್ಟ್​ ನೀಡಿದೆ

ಮಗಳು ಮಿಸ್​ ಆಗಿದ್ದಾಳೆ ಅಂತ ಪೋಷಕರು ಪೊಲೀಸರಿಗೆ ದೂರು ನೀಡಿದ್ರು. ಕೆಲವೇ ದಿನಗಳಲ್ಲಿ ಸಿಕ್ಕ ಅಪರಿಚಿತ ಶವ ಮಗಳದ್ದು ಅಂತ ತಪ್ಪಾಗಿ ಗುರ್ತಿಸಿದ್ರು. ಆ ಶವ ಮಗಳದ್ದು ಅಂತಾ ಸಂಸ್ಕಾರ ಮಾಡಿ ಸಮಾಧಿಯನ್ನೂ ಕಟ್ಟಿದ್ದರು. ಆ ಶವ ಬರ್ಬರ ಕೊಲೆಯ ಕಥೆ ಹೇಳಿತ್ತು. ಹಾಗಾಗಿಯೇ ನಾಲ್ವರು ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಆದರೇ, 18 ತಿಂಗಳ ಬಳಿಕ ಈ ಕೇಸ್​​ ಬಹುದೊಡ್ಡ ತಿರುವು ಪಡೆದುಕೊಂಡಿದೆ.

ನಮ್ಮ ಮಗಳು ಅಂತ ಸಂಸ್ಕಾರ ಮಾಡಿ ಮುಗಿಸಿದ್ರು!
ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ 2023 ಸೆಪ್ಟೆಂಬರ್​​ನಲ್ಲಿ ರಮೇಶ್​​ ನಾನೂರಾಮ್ ಬಚ್ಚಡ ತಮ್ಮ 35 ವರ್ಷದ ಪುತ್ರಿ ಲಲಿತಾ ಬಾಯಿ ಕಣ್ಮರೆ ಆಗಿದ್ದಳು. ಅವಳನ್ನು ಹುಡುಕಿಕೊಡಿ ಅಂತ ಪೊಲೀಸ್​ ಗಾಂಧಿ ಸಾಗರ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಕೆಲವೇ ದಿನಗಳಲ್ಲಿ ಪೊಲೀಸ್​ ಠಾಣೆಯಿಂದ ರಮೇಶ್​​ ಬಚ್ಚಡ ಅವರಿಗೆ ಒಂದು ಫೋನ್ ಬಂದಿತ್ತು. ಶವಾಗಾರದಲ್ಲಿ ಒಂದು ಅಪರಿಚಿತ ಶವ ಸಿಕ್ಕಿದೆ. ಅದು ನಿಮ್ಮ ಮಗಳದ್ದಾ? ಅಂತ ಖಚಿತಪಡಿಸಿ ಅಂತ ಹೇಳಿದ್ದರು.

ಇದನ್ನೂ ಓದಿ: ಶತ್ರು ಸಂಹಾರ ಪೂಜೆಯಲ್ಲಿ ನಟ ದರ್ಶನ್‌? ಏನಿದರ ಉದ್ದೇಶ? ಡೆವಿಲ್‌ಗೆ ಲಾಭವೇನು? ಅಸಲಿ ಗುಟ್ಟು ಇಲ್ಲಿದೆ! 

ಅಪರಿಚಿತ ಮೃತ ದೇಹವನ್ನು ನೋಡಿದ್ದ ಪೋಷಕರು ಇದು ತಮ್ಮ ಮಗಳದ್ದೇ ಶವ ಅಂತ ತಪ್ಪಾಗಿ ಪತ್ತೆ ಹಚ್ಚಿದ್ದರು. ಹಾಗಾಗಿಯೇ ಮೃತ ದೇಹವನ್ನು ಕುಟುಂಬಕ್ಕೆ ಒಪ್ಪಿಸಿದ್ದರು ಪೊಲೀಸರು. ಹಾಗಾಗಿಯೇ ಸತ್ತಿರೋದು ನಮ್ಮ ಮಗಳು ಲಲಿತಾ ಅಂತ ಸಂಸ್ಕಾರ ಮಾಡಿ ಮುಗಿಸಿದ್ರು. ಅಪರಿಚಿತ ಶವವಾಗಿ ಸಿಕ್ಕಿದ್ದ ಕೇಸ್​​ ಒಂದು ಬರ್ಬರ ಕೊಲೆ ಕೇಸ್​ ಆಗಿತ್ತು. ಈ ಪ್ರಕರಣದಲ್ಲಿ ಇಮ್ರಾನ್, ಶಾರೂಖ್, ಸೋನು ಹಾಗೂ ಇಜಾಜ್ ಅಪರಾಧಿಗಳು ಅಂತ ಕೋರ್ಟ್​ ನಿರ್ಧರಿಸಿ ಜೈಲುಗೆ ಕಳುಹಿಸಿತ್ತು. ಆದರೇ, 18 ತಿಂಗಳ ಬಳಿಕ ಈ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ.

publive-image

ಆ ಟ್ಯಾಟೂ ಸಾಕ್ಷಿ ತೋರಿಸಿ ಬದುಕಿದ್ದೀನಿ ಅಂತಿದ್ದಾಳೆ!
ಮಗಳು ಸತ್ತಿದ್ದಾಳೆ ಅಂದ್ಕೊಂಡಿದ್ದ ಪೋಷಕರಿಗೆ ಈಗ ಶಾಕ್ ಆಗಿದೆ. 18 ತಿಂಗಳ ಬಳಿಕ ಲಲಿತಾ ಪೋಕಷರ ಎದುರು ನಿಂತು ನಾನು ಸತ್ತಿಲ್ಲ. ಬದುಕಿದ್ದೀನಿ ಅಂತಿದ್ದಾಳೆ. ಯಾರೋ ವ್ಯಕ್ತಿ ನನಗೆ ₹5 ಲಕ್ಷಕ್ಕೆ ಮಾರಾಟ ಮಾಡಿದ್ದ. ಹಾಗಾಗಿಯೇ ಇಷ್ಟು ದಿನಗಳ ಕಾಲ ಅಲ್ಲಿ ಬಂಧಿಯಾಗಿದ್ದೆ. ಇದೀಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೀನಿ ಅಂತ ಹೇಳುತ್ತಿದ್ದಾಳೆ ಲಲತಾ ಬಾಯಿ.

ಸತ್ತವಳು ಮಗಳೋ? ಬದುಕಿರೋ ಇವಳು ಮಗಳೋ? ಅನ್ನೋ ಸಂಶಯದಲ್ಲೇ ಇದ್ದ ಪೋಷಕರಿಗೆ ಲಲಿತಾ ಕೊಟ್ಟ ಸಾಕ್ಷಿ ಬೆಚ್ಚಿ ಬೀಳಿಸುವಂತಿದೆ. ತನ್ನ ಮೈಮೇಲೆ ಹಾಕಿಸಿಕೊಂಡಿದ್ದ ಟ್ಯಾಟೂ ತೋರಿಸಿದ್ದಾಳೆ. ಹೌದು, ಅದು ಲಲಿತಾ ಚಿಕ್ಕವಳಿದ್ದಾಗ ಹಾಕಿಸಿದ್ದ ಟ್ಯಾಟೂ ಅಂತ ಪೋಷಕರು ಗುರುತಿಸಿದ್ದಾರೆ. ಪೋಷಕರಿಗೆ ಮಕ್ಕಳು ಬದುಕಿದ್ದಾಳೆ ಅನ್ನೋ ಆಶಾ ಭಾವನೆ ಮೂಡಿದೆ. ಆದರೇ, ಪೊಲೀಸರು 18 ತಿಂಗಳ ಬಳಿಕ ಬಂದಿರೋ ಈಕೆ ಲಲಿತಾ ಬಾಯಿನೋ? ಅಲ್ಲವೋ ಅನ್ನೋದನ್ನ ಖಚಿತಪಡಿಸೋದಕ್ಕೆ ಡಿಎನ್​ಎ ಪರೀಕ್ಷೆಗೆ ಮುಂದಾಗಿದ್ದಾರೆ. ಜೈಲು ಸೇರಿರೋ ನಾಲ್ವರು ಅಪರಾಧಿಗಳು ಅದ್ಯಾವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಅನ್ನೋ ಅಸಲಿ ಪ್ರಶ್ನೆಯೂ ಉದ್ಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment