ಪೋಲ್ಡೇಬಲ್​ ಐಫೋನ್​ ಬಿಗ್​ ಅಪ್ಡೇಟ್​; ಹೇಗಿದೆ? ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ!

author-image
Ganesh Nachikethu
Updated On
ಪೋಲ್ಡೇಬಲ್​ ಐಫೋನ್​ ಬಿಗ್​ ಅಪ್ಡೇಟ್​; ಹೇಗಿದೆ? ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ!
Advertisment
  • ಐಫೋನ್​ 16 ಸೀರೀಸ್​​ ಎಂಜಾಯ್​ ಮಾಡುತ್ತಿರೋ ಆ್ಯಪಲ್​ ಪ್ರಿಯರು
  • ನೂತನ ಐಫೋನ್​ ಜೊತೆಗೆ ಮಡಚುವ ಫೋನ್​ನತ್ತ ಆ್ಯಪಲ್​ ಚಿತ್ತ ಹರಿಸಿದೆ
  • ಆ್ಯಪಲ್​ ಒಂದಲ್ಲ, ಎರಡು ಮಡಚುವ ಐಫೋನ್​ ಪರಿಚಯಿಸಲಿದೆ ಎಂದ್ರೆ ನಂಬ್ತೀರಾ?

ಸದ್ಯ ಎಲ್ಲರು ಐಫೋನ್​ 16 ಸೀರೀಸ್​ ಖರೀದಿ ಮಾಡಿ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಐಫೋನ್​​ 16 ಸೀರೀಸ್​ ಹೊಸ ಫೀಚರ್ಸ್​ಗೆ ಫಿದಾ ಆಗಿರೋ ಬಳಕೆದಾರರಿಗೆ ಗುಡ್​​ನ್ಯೂಸ್​ ಒಂದಿದೆ. ಆ್ಯಪಲ್​​ ಮಡಚಬಹುದಾದ ಐಫೋನನ್ನು ಪರಿಚಯಿಸಲು ಕೆಲಸ ಮಾಡುತ್ತಿದೆಯಂತೆ. ಅಂದಹಾಗೆಯೇ ಐಫೋನ್​ ಫೋಲ್ಡೇಬಲ್​ ಯಾವಾಗ ಬರಲಿದೆ ಗೊತ್ತಾ? ಎಂದು ತಿಳಿಯಲು ಸ್ಟೋರಿ ಓದಿ.

ಆ್ಯಪಲ್​ ಫೋಲ್ಡೇಬಲ್​ ಐಫೋನ್​ ಮೇಲೆ ಕೆಲಸ ಮಾಡುತ್ತಿದೆ ಎಂಬ ಸುದ್ದಿ ಎಲ್ಲರ ನಿದ್ದೆಗೆಡಿಸಿದೆ. ಅಂದಹಾಗೆಯೇ 2026ರಲ್ಲಿ ಫ್ಲಿಪ್​​ ಐಫೋನ್​ ಮಾಡೆಲ್​ ಪರಿಚಯಿಸುವ ನಿರೀಕ್ಷೆಯಿದೆ. ಅಂದರೆ ಐಫೋನ್​ 18 ಲಾಂಚ್​ ಈವೆಂಟ್​ನಲ್ಲಿ ಫೋಲ್ಡೇಬಲ್​ ಐಫೋನ್​ ಬರಬಹುದು ಎಂದು ಊಹಿಸಲಾಗಿದೆ.

[caption id="attachment_70539" align="alignnone" width="800"]ಐಫೋನ್​ 16 ಐಫೋನ್​ 16[/caption]

ಐಫೋನ್​ 2026ರಲ್ಲಿ ಎರಡು ಫೋಲ್ಡೇಬಲ್​ ಐಫೋನ್​ ಪರಿಚಯಿಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಇದರಲ್ಲಿ ಐಪ್ಯಾಡ್​​ ಮ್ಯಾಕ್​ ಹೈಬ್ರಿಡ್​​ ಸೇರಿದೆ ಎನ್ನಲಾಗುತ್ತಿದೆ. ಹೊಸ ಸಾಧನವು 18.8 ಇಂಚಿನ ಪರದೆಯಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

publive-image

ಸ್ಯಾಮ್​ಸಂಗ್​ ಈಗಾಗಲೇ ಗ್ಯಾಲಕ್ಸಿ ಝೆಡ್​​ ಫ್ಲಿಪ್​ ಪೋಲ್ಡೇಬಲ್​ ಫೋನ್​ ಪರಿಚಯಿಸಿ ಜನಪ್ರಿಯತೆ ಪಡೆದಿದೆ. ಈಗಾಗಲೇ ಆರು ಜನರೇಶನ್​​ ಅನ್ನು ಪರಿಚಯಿಸಿದೆ. ಆ್ಯಪಲ್​ ನಿಧಾನಗತಿಯಲ್ಲಿ ಮಡಚುವ ಐಫೋನ್​ ಮೇಲೆ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. 2026ರ ವೇಳೆಗೆ ಪರಿಚಯಿಸುವ ನಿರೀಕ್ಷೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment