/newsfirstlive-kannada/media/post_attachments/wp-content/uploads/2024/07/Bumrah_Rohit.jpg)
ಇಂದು ನಡೆಯುತ್ತಿರೋ 2025ರ ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಿವೆ. ಭಾನುವಾರ ಟೀಮ್ ಇಂಡಿಯಾ ಪಾಕ್ ವಿರುದ್ಧ ಸೆಣಸಲಿದೆ. ಇದರ ಮಧ್ಯೆ ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ.
ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ. ಇವರು ಗಾಯದ ಸಮಸ್ಯೆಯಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ನಡೆದಿದ್ರು. ಈಗ ಬುಮ್ರಾ ಚೇತರಿಕೆ ಕಾಣುತ್ತಿದ್ದಾರೆ ಎಂದು ಪತ್ನಿ ಸಂಜನಾ ಗಣೇಶನ್ ಮಾಹಿತಿ ನೀಡಿದ್ದಾರೆ. ಕ್ರೀಡಾ ನಿರೂಪಕಿ ಆಗಿರೋ ಸಂಜನಾ ಗಣೇಶನ್, ಬಾಂಗ್ಲಾದ ಸ್ಟಾರ್ ಕ್ರಿಕೆಟರ್ ಜತೆಗೆ ಮಾತಾಡುವ ವೇಳೆ ಈ ವಿಚಾರ ಬಹಿರಂಗ ಮಾಡಿದ್ದಾರೆ.
ಸಂಜನಾ ಗಣೇಶನ್ ಏನಂದ್ರು?
ಈ ಬಗ್ಗೆ ಮಾತಾಡಿದ ಸಂಜನಾ ಗಣೇಶನ್ ಅವರು, ಜಸ್ಪ್ರಿತ್ ಬುಮ್ರಾ ರಾಷ್ಟ್ರೀಯ ಕ್ರಿಕೆಟ್ ಅಕಡಾಮಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ. ಅವರು ಎನ್‌ಸಿಎನಲ್ಲೇ ಇದ್ದು, ಆದಷ್ಟು ಬೇಗ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದರು.
ಬುಮ್ರಾ ಇತ್ತೀಚಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಜುರಿಗೆ ಒಳಗಾದರು.
ಇದನ್ನೂ ಓದಿ:ಟೀಮ್ ಇಂಡಿಯಾ, ಪಾಕ್ ಮಧ್ಯೆ ರೋಚಕ ಪಂದ್ಯ; ಬಿಗ್ ಶಾಕ್ ಕೊಟ್ಟ ಸ್ಟಾರ್ ಪ್ಲೇಯರ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ