/newsfirstlive-kannada/media/post_attachments/wp-content/uploads/2024/01/Money-11.jpg)
ದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್​​ನಲ್ಲಿ ಮಧ್ಯಮವರ್ಗದವರಿಗೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೇರಿಸಿ ಬಂಪರ್​ ಗಿಫ್ಟ್​ ನೀಡಿತ್ತು. ಈ ಬೆನ್ನಲ್ಲೇ ಜನಸಾಮಾನ್ಯರಿಗೆ ಉಪಯೋಗ ಆಗೋ ಜನಸ್ನೇಹಿ ಯೋಜನೆ ಘೋಷಣೆ ಮಾಡಲು ಮುಂದಾಗಿದೆ.
ಅಸಂಘಟಿತ ವಲಯ ಸೇರಿ ಎಲ್ಲಾ ನಾಗರಿಕರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.
ಏನಿದು ಸ್ಕೀಮ್​​?
ಸಾರ್ವತ್ರಿಕ ಪಿಂಚಣಿ ಯೋಜನೆ ಸಂಬಳ ಪಡೆಯುವ ಎಲ್ಲಾ ಉದ್ಯೋಗಿಗಳಿಗೂ ಸಿಗಲಿದೆ. ಹಾಗೆಯೇ ಸ್ವಯಂ ಉದ್ಯೋಗಿಗಳಿಗೂ ಮುಕ್ತವಾಗಿರುತ್ತದೆ. ಈ ಹೊಸ ಯೋಜನೆ ಪ್ರಾವಿಡೆಂಟ್​​​ ಫಂಡ್​​ ಆರ್ಗನೈಜೇಷನ್​​ ಅಸ್ತಿತ್ವದಲ್ಲಿರೋ ಎಲ್ಲಾ ಯೋಜನೆಗಳಿಗಿಂತಲೂ ಭಿನ್ನವಾಗಿರಲಿದೆ. ಸಾರ್ವತ್ರಿಕ ಪಿಂಚಣಿ ಯೋಜನೆಯಲ್ಲಿ ಉಳಿತಾಯ ಅಥವಾ ಕೊಡುಗೆ ವ್ಯಕ್ತಿಯ ಆಧಾರದ ಮೇಲೆ ಇರುತ್ತವೆ. ಸರ್ಕಾರದಿಂದ ಯಾವುದೇ ಕೊಡುಗೆ ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಸಾರ್ವತ್ರಿಕ ಪಿಂಚಣಿ ಯೋಜನೆ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರ ಬಲವರ್ಧನೆ. ಜತೆಗೆ ಅಸ್ತಿತ್ವದಲ್ಲಿರೋ ಕೆಲವು ಯೋಜನೆಗಳನ್ನು ಸೇರಿಸುವ ಮೂಲಕ ದೇಶದಲ್ಲಿ ಉಳಿತಾಯ ಹೆಚ್ಚಿಸುವುದು. ಇದು ನಾಗರಿಕರಿಗೆ ಸುರಕ್ಷಿತ ಯೋಜನೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us