ಯೆಮೆನ್​ ಕೇಸ್​​; ಭಾರತೀಯ ನರ್ಸ್​ ಉಳಿಸಲಿರೋ ಒಂದೇ ಮಾರ್ಗ ಬ್ಲಡ್​ ಮನಿ; ಏನಿದು ಕಾನೂನು?

author-image
Ganesh Nachikethu
Updated On
ಭಾರತದ ನರ್ಸ್​​ಗೆ ಯೆಮೆನ್​​ನಲ್ಲಿ ಗಲ್ಲು ಶಿಕ್ಷೆ.. ಮರಣ ದಂಡನೆಗೆ ಕಾರಣವಾದ ಕತೆಯೇ ಹೃದಯ ವಿದ್ರಾವಕ
Advertisment
  • ಯೆಮೆನ್​ ನಾಗರಿಕನ ಕೊಂದ ಕೇಸಲ್ಲಿ ಮರಣದಂಡನೆ ಶಿಕ್ಷೆ
  • ಕೇರಳ ಮೂಲದ ಭಾರತೀಯ ನರ್ಸ್​​ ನಿಮಿಷಾಗೆ ಸಂಕಷ್ಟ!
  • ಭಾರತೀಯ ನರ್ಸ್​ ಉಳಿಸಲು ಇರೋ ಏಕೈಕ ಮಾರ್ಗ ಇದು

ದೆಹಲಿ: ಯೆಮೆನ್​ ನಾಗರಿಕನ ಕೊಂದ ಕೇಸಲ್ಲಿ ಕೇರಳದ ಪಲಕ್ಕಾಡ್​ ಮೂಲದ ಭಾರತೀಯ ನರ್ಸ್​​ ನಿಮಿಷಾ ಪ್ರಿಯಾ ಅವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರನ್ನು ಉಳಿಸಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭಾರತ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್​​​ ಸೂಚನೆ

ಪ್ರಿಯಾ ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕೋರಿ ದೆಹಲಿ ಹೈಕೋರ್ಟ್​​ ಮೊರೆ ಹೋಗಲಾಗಿತ್ತು. ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಶನಲ್ ಆ್ಯಕ್ಷನ್ ಕೌನ್ಸಿಲ್ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಈ ಕುರಿತು ಗಮನಹರಿಸಿ ಎಂದು ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದಾರೆ.

ರಕ್ಷಿಸಲು ಇರುವುದೊಂದೇ ಮಾರ್ಗ

ಹತ್ಯೆಗೀಡಾದ ಯೆಮೆನ್​ ವ್ಯಕ್ತಿಯ ಕುಟುಂಬದೊಂದಿಗೆ ಸಂಧಾನ ನಡೆಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಬ್ಲಡ್​ ಮನಿ ಪಾವತಿ ಮಾಡುವ ಮೂಲಕ ಪ್ರಿಯಾ ಅವರನ್ನು ರಕ್ಷಿಸಬಹುದು ಎಂದು ಕೂಡ ತಿಳಿಸಿದೆ.

ಬ್ಲಡ್​ ಮನಿ ಎಂದರೇನು?

ಯೆಮೆನ್​ ಅಧ್ಯಕ್ಷ ರಶದ್​ ಅಲ್​ ಅಲಿಮಿ ಮರಣ ದಂಡನೆ ಘೋಷಿಸಿದ್ದರು. ಪ್ರಿಯಾರನ್ನು ನೇಣುಗಂಬಕ್ಕೆ ಇನ್ನೂ ಏರಿಸದ ಕಾರಣ ಜೀವ ಉಳಿಸಲು ಅವಕಾಶ ಇದೆ. ಆದರೆ, ಮೃತ ವ್ಯಕ್ತಿ ಕುಟುಂಬಸ್ಥರು ಬ್ಲಡ್​ ಮನಿಗೆ ಒಪ್ಪಿಗೆ ನೀಡಬೇಕು. ಸಾವಿಗೆ ಹಣದ ರೂಪದಲ್ಲಿ ಕುಟುಂಬಕ್ಕೆ ನೀಡುವ ಪರಿಹಾರವೇ ಬ್ಲಡ್​ ಮನಿ. ಇವರು ಒಪ್ಪಿಗೆ ನೀಡಿದಲ್ಲಿ ಮರಣದಂಡನೆ ತಪ್ಪಲಿದೆ. ಯೆಮೆನ್​ನಲ್ಲಿ ಶರಿಯಾ ಕಾನೂನು ಇದೆ. ಕಾನೂನಿನಲ್ಲಿ ಬ್ಲಡ್​​ ಮನಿಗೆ ಅವಕಾಶವಿದೆ. ಯೆಮೆನ್ ಕಾನೂನುಗಳಿಗೆ ಅನುಸಾರವಾಗಿ ಪ್ರಿಯಾಳ ಜೀವವನ್ನು ಉಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

ಇದನ್ನೂ ಓದಿ:ನ್ಯೂ ಇಯರ್​​ಗೆ ಸೇರಿದ್ದ ಜನರ ಮೇಲೆ ಟ್ರಕ್ ಹತ್ತಿಸಿದ ಚಾಲಕ; ಜೀವ ಬಿಟ್ಟ 10 ಮಂದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment