/newsfirstlive-kannada/media/post_attachments/wp-content/uploads/2024/09/advocate-jagadish1.jpg)
ಕನ್ನಡದ ಬಿಗ್​ಬಾಸ್ ಸೀಸನ್​ 11ಕ್ಕೆ ಅಚ್ಚರಿಯ ರೀತಿಯಲ್ಲಿ ​ಸಖತ್​ ಸುದ್ದಿಯಲ್ಲಿದ್ದ ಲಾಯರ್​ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಐದಾರು ವರ್ಷಗಳಿಂದಲೂ ಲಾಯರ್​ ಜಗದೀಶ್​​ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್​ ವಿಚಾರವಾಗಿಯೂ ಸುದ್ದಿ ಮಾಡಿದ್ದರು.
/newsfirstlive-kannada/media/post_attachments/wp-content/uploads/2024/09/Gautami-Jadhav-1.jpg)
ಸ್ಯಾಂಡಲ್​ವುಡ್​ ನಟ ದರ್ಶನ್​ ಕೇಸ್​ನಲ್ಲಿಯೂ ಯಾರದ್ದೋ ಕೈವಾಡ ಇದೆ. ನಾವು ದರ್ಶನ್​​ ಕೇಸ್​ ಮರು ತನಿಖೆಗೆ ಆಗ್ರಹಿಸುತ್ತೇನೆ ಎಂದು ಫ್ರೀಡಮ್​ ಪಾರ್ಕ್​ನಲ್ಲಿ ಪ್ರೊಟೆಸ್ಟ್​ ಮಾಡಿದ್ದರು. ಲಾಯರ್​ ಜಗದೀಶ್​​ ಈತ ಸದಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ರಮೇಶ್​ ಜಾರಕಿಹೊಳಿ ಕೇಸಲ್ಲಿ ಅತೀ ಹೆಚ್ಚು ಮುನ್ನೆಲೆಗೆ ಬಂದಿದ್ದು ಇವರೇ.
/newsfirstlive-kannada/media/post_attachments/wp-content/uploads/2024/09/advocate-jagadish.jpg)
ಈತ ಲೋಕಸಭಾ ಚುನಾವಣೆಯಲ್ಲಿ ಕಂಟೆಸ್ಟ್​ ಮಾಡಿದ್ರು. ಎಎಪಿ ಸೇರಿದ್ದ ಇವರು ಅಲ್ಲೂ ಹೆಚ್ಚು ಕಾಲ ಇರಲಿಲ್ಲ. ಕೋರ್ಟ್​ನಲ್ಲೇ ವಕೀಲರೊಂದಿಗೆ ಜಗಳ ಮಾಡಿ ಸುದ್ದಿಯಾಗಿದ್ದರು. ಇತ್ತೀಚೆಗಷ್ಟೇ ನಾನು ಬಿಗ್​ಬಾಸ್​ಗೆ ಹೋಗಲು ರೆಡಿ ಎಂದಿದ್ದರು. ಈಗ ಕೊನೆಗೂ ತನ್ನ ಮಾತಿನಂತೆಯೇ ಬಿಗ್​ಬಾಸ್​ ಮನೆ ಸೇರಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ಬಳಿಕ ಯಾವ ರೀತಿ ಟಾಸ್ಕ್​ಗಳನ್ನು ಆಡುತ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us