/newsfirstlive-kannada/media/post_attachments/wp-content/uploads/2025/01/masaba-blouse3.jpg)
ಸೀರೆ ಅನ್ನೋದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಸೀರೆಗೂ ಹಾಗೂ ಭಾರತ ದೇಶದ ನಾರಿಯರಿಗೂ ಸಹಸ್ರಾರು ವರ್ಷಗಳ ನಂಟು ಇದೆ. ಸೀರೆ ಖರೀದಿಯಿಲ್ಲದೇ ಯಾವು ಹಬ್ಬವನ್ನಾಗಲಿ, ಧಾರ್ಮಿಕ ಕಾರ್ಯಕ್ರಮಗಳಾಗಲಿ, ಮದುವೆ ಮುಂಜಿವೆಗಳಾಗಲಿ ಪರಿಪೂರ್ಣಗೊಳ್ಳುವುದೇ ಇಲ್ಲ. ಭಾರತದಲ್ಲಿ ನಮಗೆ ಅಸಂಖ್ಯಾತ ರೀತಿಯ, ವಿನ್ಯಾಸದ ಹಾಗೂ ದುಬಾರಿ ಸೀರೆಗಳು ಕಾಣಲು ಸಿಗುತ್ತವೆ.
ಇದನ್ನೂ ಓದಿ:ಮೊದಲ ಬಾರಿ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ ರಶ್ಮಿಕಾ ಮಂದಣ್ಣ; ಏನಿದರ ವಿಶೇಷ? PHOTOS
ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರು ಈ ಬ್ಲೌಸ್ ಡಿಸೈನ್ಗೆ ಮಾರು ಹೋಗಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲೂ ಈ ಡಿಸೈನ್ ಎದ್ದು ಕಾಣುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರು, ಯುವತಿಯರು ಶೇರ್ ಮಾಡಿಕೊಂಡಿರೋ ಫೋಟೋದಲ್ಲಿ ಚೆಂದವಾಗಿ ಸೀರೆಯನ್ನು ತೊಟ್ಟುಕೊಂಡು ಇದೇ ಸ್ಟೈಲ್ನಲ್ಲಿ ಬ್ಲೌಸ್ ಸ್ಟಿಚ್ ಮಾಡಿಸಿಕೊಂಡಿದ್ದಾರೆ.
ಅಷ್ಟೇ ಯಾಕೆ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಕೂಡ ಇದೇ ಸ್ಟೈಲ್ನಲ್ಲಿ ಬ್ಲೌಸ್ ಸ್ಟಿಚ್ ಮಾಡಿಸಿಕೊಂಡಿದ್ದನ್ನು ಕಾಣಬಹುದು. ಇನ್ನೂ ರಾಮಾಚಾರಿ ಸೀರಿಯಲ್ ಖ್ಯಾತ ನಟಿ ಮೌನ ಗುಡ್ಡೆಮನೆ ಕೂಡ ಈ ಬ್ಲೌಸ್ ಅನ್ನು ಹಾಕಿಕೊಂಡಿದ್ದರು. ಈ ಫೋಟೋವನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಇವರ ಸಾಕಷ್ಟು ಅಭಿಮಾನಿಗಳು ಈ ಸ್ಟೈಲ್ಗೆ ಫಿದಾ ಆಗಿದ್ದಾರೆ.
ಸಖತ್ ಟ್ರೆಂಡಿಂಗ್‌ನಲ್ಲಿರೋ ಬ್ಲೌಸ್ ಡಿಸೈನ್ ಹೆಸರು ಮಸಬ ಸ್ಟೈಲ್ ಅಂತ. ಮಾರುಕಟ್ಟೆಗೆ ಸಾಕಷ್ಟು ಸ್ಟೈಲ್ನಲ್ಲಿ ಗ್ರಾಂಡ್ ಲುಕ್ ನೀಡುವ ಡಿಸೈನರ್ ಹ್ಯಾಂಡ್ ವರ್ಕ್ ಬ್ಲೌಸ್ಗಳು ಬರುತ್ತಲೇ ಇರುತ್ತವೆ. ಆದ್ರೆ ಈಗ ಸಖತ್ ಫೇಮಸ್ ಆಗಿರೋ ಈ ಮಸಬ ಬ್ಲೌಸ್ ಡಿಸೈನ್ಗೆ ನಾರಿ ಮಣಿಯರು ಮನಸೋತಿದ್ದಾರೆ. ಅಲ್ಲದೇ ಬಾಲಿವುಡ್ ಸೇರಿದಂತೆ ಸೌತ್ ಸಿನಿಮಾ ನಟಿಯರು ಹೆಚ್ಚಾಗಿ ಮಸಬ ಬ್ಲೌಸ್ ಡಿಸೈನ್ ಅನ್ನು ಧರಿಸಿಕೊಂಡು ಸಖತ್ ಶೈನ್ ಆಗುತ್ತಿದ್ದಾರೆ. ಈ ಮಸಬ ಬ್ಲೌಸ್ ಡಿಸೈನ್ಬೆಲೆಯೂ 1.500 ರೂ ಆಗಿದೆ. ತುಂಬಾ ಗ್ರ್ಯಾಂಡ್ ಆಗಿರೋ ಬ್ಲೌಸ್ ಡಿಸೈನ್ ಮಾಡಲು 2. 500 ಬೆಲೆಯುಳ್ಳದ್ದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ