BBK11:ನರಕದ ಮನೆ ಪೀಸ್ ಪೀಸ್ ಮಾಡಿದ ಬಿಗ್​ಬಾಸ್​; ಅಸಲಿಗೆ ಆಗಿದ್ದು ಏನು ಗೊತ್ತಾ?

author-image
Gopal Kulkarni
Updated On
BBK11: ಬಿಗ್​ಬಾಸ್​ ನರಕದಲ್ಲಿರೋ ಪಾರ್ಟ್ಸ್​ಗಳನ್ನ ಕಿತ್ತು ಬಿಸಾಕಿದ್ದಕ್ಕೆ ನಡುಗಿದ ಮನೆಮಂದಿ.. ಮುಂದೇನು?
Advertisment
  • ಬಿಗ್​ಬಾಸ್ ಮನೆಯಲ್ಲಿ ನರಕದ ಮನೆ ಒಡೆದು ಹಾಕಿದ್ದು ಏಕೆ?
  • ಮಹಿಳಾ ಆಯೋಗದಿಂದ ದೂರು ದಾಖಲಾಗಿದ್ದಕ್ಕೆ ಹೀಗೆ ಆಯ್ತಾ?
  • ಎಸ್​ಪಿ ಸೂಚನೆಯೇ ಆಟದ ನಿಯಮದಲ್ಲಿ ಬದಲಾವಣೆ ತಂದಿತಾ?

ಬಿಗಬಾಸ್​ ಬಿಗಬಾಸ್, ಈಗಂತೂ ಬಿಗ್​​ಬಾಸ್​ನದ್ದೆ ಸುದ್ದಿ ಸದ್ದು. ಕಳೆದ ಬಾರಿಯ ಬಿಗ್​ಬಾಸ್​​ ಕಂಟೆಂಟ್​​ಗಿಂತ ಕಾಂಟ್ರವರ್ಸಿಯಿಂದಲೇ ಹಲ್ ಚಲ್ ಎಬ್ಬಿಸಿಬಿಟ್ಟಿತ್ತು. ಒಂದೊದಾ ಮೇಲೆ ಒಂದರಂತೆ ವಿವಾಗಳು ಬಿಗ್​ಬಾಸ್ ಬೆನ್ನು ಬಿದ್ದಿದ್ವು.

ಈ ಬಾರಿ ಬಿಗ್​ಬಾಸ್​ನಲ್ಲಿ ಯಾವ ಕಾಂಟ್ರವರ್ಸಿ ಆಗುತ್ತೋ ಅಂತ ಜನ ಕಾಯ್ತಿದ್ರು. ಜನರ ಹರಕೆ ಈಡೇರಿದ್ಯೋ ಏನೋ ಗೊತ್ತಿಲ್ಲ. ಅದೊಂದು ವಿವಾದ ಬಿಗ್​ಬಾಸ್​ಗೆ ಉರುಳಾಗಿತ್ತು. ಈ ಕಾಂಟ್ರವರಸಿಗೆ ಮೂಲ ಈ ಬಾರಿಯ ನರಕ ಮತ್ತು ಸ್ವರ್ಗ ಅನ್ನೋ ಕಾನ್ಸೆಫ್ಟ್..,
11 ನೇ ಸೀಸನ್​ ಬಿಗ್​ಬಾಸ್​​ ಸ್ವಲ್ಪ ಡಿಫರೆಂಟ್ ಆಗಿರಲಿ ಅಂತ ಈ ಬಾರಿ ಸ್ವರ್ಗ ನರಕ ಅನ್ನೋ ಕಾನ್ಸೆಪ್ಟ್ ಮೂಲಕ ಶುರು ಮಾಡಲಾಗಿತ್ತು, ಒಂದಿಷ್ಟು ಸ್ಪರ್ಧಿಗಳನ್ನ ಜನರೇ ಆಯ್ಕೆ ಮಾಡಿ ಸ್ವರ್ಗ ಮತ್ತು ನರಕಕ್ಕೆ ಕಳಿಸಿದ್ರು. ಸ್ವರ್ಗದಲ್ಲಿದ್ದವರಿಗೆ ಒಳ್ಳೆ ತಿಂಡಿ ಊಟ ಕಾಫಿ ಎಲ್ಲ ಸಿಗ್ತಿತ್ತು. ಆದ್ರೆ ನರಕ ನಿವಾಸಿಗಳಿಗೆ ಕೆಲ ಸೌಲಬ್ಯಗಳನ್ನ ನಿಷೇಧ ಹೇರಲಾಗಿತ್ತು. ಆದ್ರೀಗ ಶುಕ್ರವಾರ ರಿಲೀಸ್ ಆದ ಪ್ರೋಮೊದಲ್ಲಿ ನರಕದ ಮನೆಯನ್ನೇ ಪೀಸ್ ಪೀಸ್ ಮಾಡಲಾಗಿದೆ.

publive-image

ನರಕದ ಮನೆಯನ್ನೇ ಒಡೆದಾಕಿದ ಬಿಗ್​​ಬಾಸ್
ಆರಂಭದಲ್ಲಿ ಮನೆಯಲ್ಲಿ ಜೋರಾಗಿ ಸೈರನ್ ಆಗುತ್ತೆ. ಸೈರನ್ ಆದ ಕೆಲ ಸೆಕೆಂಡ್​ಗಳಲ್ಲೆ ಮುಸುಕುಧಾರಿಗಳ ಗುಂಪು ನರಕದ ಮನೆಯೊಳಗೆ ಎಂಟ್ರಿ ಕೊಟ್ಟಿದೆ. ನೋಡ ನೋಡ್ತಿದ್ದಂತೆ ನರಕದಲ್ಲಿದ್ದ ಚೇರ್ ಟೇಬಲ್ ಎಲ್ಲ ಪೀಸ್ ಪೀಸ್ ಮಾಡಿದೆ. ಹಾಸಿಗೆಗಳನ್ನ ಸಹ ಕೊಂಡೊಯ್ದಿದೆ. ನರಕದ ಮನೆಗೆ ಹಾಕಿ ಗ್ರಿಲ್​ ಕೂಡ ಕಟ್​ ಮಾಡಿ ಕ್ರೇನ್​​ ಮೂಲಕ ಎತ್ತಲಾಗಿದೆ. ಹೀಗಾಗಿ ಇದೊಂದು ವಿಡಿಯೋ ಈಗ ಹತ್ತು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ನರಕದಲ್ಲಿರೋ ಪಾರ್ಟ್ಸ್​ಗಳನ್ನ ಕಿತ್ತು ಬಿಸಾಕಿದ್ದಕ್ಕೆ ನಡುಗಿದ ಮನೆಮಂದಿ.. ಮುಂದೇನು?

publive-image

ಬಿಗ್​ಬಾಸ್​ ಈ ರೀತಿ ಮಾಡೋದಕ್ಕೆ ಒಂದು ಬಲವಾದ ಕಾರಣವೂ ಇದೆ. ಏಕಾಏಕಿ ನರಕದ ಮನೆಯ ಧ್ವಂಸಗೊಳಿಸೋದಕ್ಕೆ ಕಾರಣ ಏನಂದ್ರೆ ಮಹಿಳಾ ಆಯೋಗ. ಹೌದು ನಿಮಗಿದು ಶಾಕಿಂಗ್ ಅನಿಸಿದ್ರೂ ಸತ್ಯವೇ. ಮಹಿಳಾ ಆಯೋಗಕ್ಕೂ ಬಿಗ್​ಬಾಸ್​​ಗೂ ಏನ್ ಸಂಬಂಧ ಅಂತ ನಿಮಗೆ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ ಏನಂದ್ರೆ, ಈ ಬಾರಿ ಬಿಗ್​ಬಾಸ್​ ನರಕ ಸ್ವರ್ಗ ಅನ್ನೋ ಕಾನ್ಸೆಫ್ಟ್ ಮೂಲಕ ಶುರು ಮಾಡಲಾಗಿತ್ತು, ಈ ನರಕದಲ್ಲಿ ಮಹಿಳಾ ಸ್ಪರ್ಧಿಗಳು ಕೂಡ ಇದ್ರು. ಇದೇ ವಿಚಾರ ಬಿಗ್​ಬಾಸ್​ಗೆ ಮುಳುವಾಗಿತ್ತು.  ನರಕದಲ್ಲಿರುವ ಮಹಿಳೆಯರ ಖಾಸಗಿತನಕ್ಕೆ ದಕ್ಕೆ ಆಗ್ತಿದ್ದ ಅಂತ ಮಹಿಳಾ ಆಯೋಗಕ್ಕೆ ದೂರು ಒಂದು ದಾಖಲಾಗಿತ್ತು. ಈ ದೂರಿನ ಅನ್ವಯ ಮಹಿಳಾ ಆಯೋಗ ಬಿಗ್​ಬಾಸ್ ಮನೆಗೆ ನೋಟಿಸ್ ಕೂಡ ಕೊಟ್ಟಿತ್ತು. ಆಟದ ಶೈಲಿಯ ಬದಲಾವಣೆಗೆ ಐದು ದಿನದ ಡೆಡ್​​ಲೈನ್​ ಕೂಡ ಕೊಟ್ಟಿತ್ತು.

ಇದನ್ನೂ ಓದಿ:VIDEO: ಅಪ್ಪುನ ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟಿದ್ದೇಕೆ ಕಿರುತೆರೆ ನಟಿ ನಮ್ರತಾ ಗೌಡ?

ಬಿಗ್‌ ಬಾಸ್‌ನಲ್ಲಿ ಕೆಲವರಿಗೆ ಕೇವಲ ಗಂಜಿ ಮಾತ್ರ ನೀಡಲಾಗ್ತಿದೆ. ಪೌಷ್ಠಿಕ ಆಹಾರ ನಿಡದೇ ಇರುವುದು ಅಪರಾಧ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ ಅಂತಾ ದೂರು ದಾಖಲಾಗಿತ್ತು. ಹೀಗಾಗಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ರಾಮನಗರದ ಎಸ್​​ ಪಿಗೆ ಪತ್ರ ಬರೆದು ಪರಿಶೀಲನೆಗೆ ತಿಳಿಸಿದ್ರು. ಅದ್ರಂತೆ ರಾಮನಗರದ ಎಸ್​ಪಿ ಪರಿಶೀಲನೆ ಮಾಡಿ ಐದು ದಿನ ಡೆಡ್​ಲೈನ್ ಕೊಟ್ಟಿದ್ರು. ಈ ಬಗ್ಗೆ ನ್ಯೂಸ್ ಫಸ್ಟ್ ಕನ್ನಡ ಸುದ್ದಿ ಕೂಡ ಪ್ರಸಾರ ಮಾಡಿತ್ತು. ವಿಚಿತ್ರ ಏನಂದ್ರೆ ಸುದ್ದಿ ಪ್ರಸಾರವಾದ ಐದು ದಿನಕ್ಕೆ ಇಡೀ ನರಕದ ಮನೆ ಧ್ವಂಸವಾಗಿದೆ.
ಈಗ ರಿಲೀಸ್ ಆಗಿರೋ ಪ್ರೋಮೋ ನೋಡಿದ್ರೆ ಮಹಿಳಾ ಆಯೋಗದ ನೋಟಿಸ್ ಬಿಸಿ ಬಿಗ್​ಬಾಸ್​ಗೆ ತಟ್ಟಿರುವ ಹಾಗೆ ಕಾಣ್ತಿದೆ. ಇದೀಗ ಮಹಿಳಾ‌‌ ಆಯೋಗ ಎಂಟ್ರಿ ಬೆನ್ನಲ್ಲೇ 'ನರಕ' ಡೆಮಾಲಿಷ್ ಮಾಡಲಾಗಿದ್ದು, ನರಕದ ಮನೆಯಲ್ಲಿದ್ದ ವಸ್ತುಗಳನ್ನ ಸಹ ಪೀಸ್ ಪೀಸ್ ಮಾಡಲಾಗಿದೆ.

ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಗೆ ಬಿಗ್ ಟ್ವಿಸ್ಟ್‌.. ಧ್ವಂಸವಾಯ್ತು ನರಕ! ದಿಢೀರ್ ಬದಲಾವಣೆಗೆ ಕಾರಣ ಯಾರು?

ಅಕ್ಟೋಬರ್ 5 ರಂದು ಆಯೊಗದಿಂದ ರಾಮನಗರದ ಎಸ್​ಪಿಗೆ ಸೂಚನೆ ನೀಡಲಾಗಿತ್ತು. ಆಟದ ಶೈಲಿ ಬದಲಾಗೋದರ ಕುರಿತು ಅಕ್ಟೋಬರ್ 7ರ ಬೆಳಗ್ಗೆ 9ಗಂಟೆಗೆ ನ್ಯೂಸ್ ಫಸ್ಟ್ ಸುದ್ದಿ ಪ್ರಸಾರ ಮಾಡಲಾಗಿತ್ತು. ಅದ್ರಂತೆ ಈಗ ನರಕ ಮತ್ತು ಸ್ವರ್ಗದ ಕಾನ್ಸೆಪ್ಟ್ ಶುಕ್ರವಾರಕ್ಕೆ ದಿ ಎಂಡ ಕಾಣುವ ಲಕ್ಷಣ ದಟ್ಟವಾಗಿರೋದಂತು ಸುಳಲ್ಲ.

ಕಳೆದೆರಡು ಬಾರಿಯಿಂದ ಬಿಗ್​​ಬಾಸ್​ ಕಾರ್ಯಕ್ರಮ ಸಾಕಷ್ಟು ಕಾನೂನು ಕಂಟಕಗಳಿಗೆ ತುತ್ತಾಗಿತ್ತು... ಕಳೆದ ಬಾರಿ ಸಂತೋಷ್​ ಹುಲಿ ಉಗುರು ಪ್ರಕರಣ, ತನಿಷಾ ಜಾತಿ ನಿಂದನೆ ಪ್ರಕರಣಗಳಿಂದ ಸದ್ದು ಮಾಡಿತ್ತು..ಈ ಬಾರಿಯ ಬಿಗ್​ಬಾಸ್​ ಶೋ ಕೂಡ ಹೊಸ ಕಾಂಟ್ರವರ್ಸಿಯಿಂದ ಸದ್ದು ಮಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment