/newsfirstlive-kannada/media/post_attachments/wp-content/uploads/2024/10/kiccha9.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಹೊಸ ಅಧ್ಯಾಯ ಬಿಗ್​ಬಾಸ್​ ಸೀಸನ್​ 11ರಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಕಾಣುತ್ತಿವೆ. ಸೀಸನ್​ 1ರಿಂದ 10ರವೆರೆಗೂ ಕಿಚ್ಚ ಸುದೀಪ್​ ಅವರ ಸಾರಥ್ಯದಲ್ಲಿ ಬಿಗ್​ಬಾಸ್​ ಮೂಡಿ ಬರುತ್ತಿತ್ತು. ಆದ್ರೆ ಈ ವಾರ ಬಿಗ್​ಬಾಸ್​ ಶೋನಲ್ಲಿ ನಿರೂಪಕರು ಬದಲಾಗಿದ್ದಾರೆ.
ಇದನ್ನೂ ಓದಿ:BBK11: ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಲಾಯರ್ ಜಗದೀಶ್ ಮನವಿ; ಕಾರಣವೇನು?
/newsfirstlive-kannada/media/post_attachments/wp-content/uploads/2024/10/kiccha15.jpg)
ಹೌದು, ಇದೇ ಮೊಟ್ಟ ಮೊದಲ ಬಾರಿಗೆ ಬಿಗ್​ಬಾಸ್​ ಸೀಸನ್​ 11ರಲ್ಲಿ ಇಬ್ಬರು ಶೋ ನಿರೂಪಣೆ ಮಾಡಲಿದ್ದಾರೆ. ಪ್ರತಿ ವಿಕೇಂಡ್​ನಲ್ಲೂ ಬಿಗ್​ಬಾಸ್​ ಶೋ ನಡೆಸಿಕೊಡಲು ಕಿಚ್ಚ ಸುದೀಪ್​ ಅವರು ಬರುತ್ತಿದ್ದರು. ಆದರೆ ಮೂಲಗಳು ಪ್ರಕಾರ ಶನಿವಾರ ಎಪಿಸೋಡ್​ ಅನ್ನು ನಿರ್ದೇಶಕ ಯೋಗರಾಜ್ ಭಟ್, ಹಾಗೂ ಭಾನುವಾರ ಎಪಿಸೋಡ್​ ಅನ್ನು ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರಂತೆ.
/newsfirstlive-kannada/media/post_attachments/wp-content/uploads/2024/10/bbk1123.jpg)
ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ಅವರ ತಾಯಿ ನಿಧನರಾಗಿದ್ದರು. ಸದ್ಯ ಕಿಚ್ಚ ಸುದೀಪ್​ ಅವರು ಅನುಪಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಈ ಇಬ್ಬರು ಸೆಲೆಬ್ರೆಟಿಗಳಿಂದ ವೀಕೆಂಡ್ ಶೋವನ್ನು ನಡೆಸಿಕೊಡಲಾಗುತ್ತಿದೆ. ಶನಿವಾರ ನಿರ್ದೇಶಕ ಯೋಗರಾಜ್ ಭಟ್ ಮತ್ತು ಭಾನುವಾರ ಸೃಜನ್ ಶೋ ನಿರೂಪಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us