/newsfirstlive-kannada/media/post_attachments/wp-content/uploads/2025/06/hindi-bigg-boss.jpg)
ಬಹುನಿರೀಕ್ಷಿತ ಹಿಂದಿ ಬಿಗ್‌ಬಾಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್‌ಬಾಸ್ ಕಾರ್ಯಕ್ರಮ ಶುರುವಾಗೋ ಮುನ್ನವೇ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ಆದ್ರೆ ಈ ಬಾರಿಯ ಬಿಗ್‌ಬಾಸ್ ಬೇರೆಯೇ ಕಾನ್ಸೆಪ್ಟ್ ಹೊತ್ತು ಬರ್ತಿದೆ. ಬಿಗ್‌ಬಾಸ್ ಸೀಸನ್ 19 ಆರಂಭವಾಗಲು ಇನ್ನು ಹಲವು ದಿನ ಬಾಕಿ ಇರುವ ಹೊತ್ತಲ್ಲೇ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂದು ಕೆಲವೊಂದು ಹೆಸರುಗಳು ಚಾಲ್ತಿಯಲ್ಲಿವೆ.
ಇದನ್ನೂ ಓದಿ: BBK12: ಕಿಚ್ಚ ಸುದೀಪ್ ಫ್ಯಾನ್ಸ್ಗೆ ಗುಡ್ನ್ಯೂಸ್.. ಬಿಗ್‌ಬಾಸ್ 12ಕ್ಕೆ ಕಂಬ್ಯಾಕ್ ಆಗೋ ಸುಳಿವು ಕೊಟ್ರಾ?
ಹೌದು, ಈ ಬಾರಿಯೂ ಎಂದಿನಂತೆ ಸಲ್ಮಾನ್ ಖಾನ್ ಬಿಗ್‌ಬಾಸ್ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆಯನ್ನು ಮಾಡಲು 300 ಕೋಟಿ ಸಂಭಾವನೆಯನ್ನು ಪಡೆಯಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗುತ್ತಿವೆ. ಅಂದಹಾಗೇ ಇಲ್ಲಿಯವರೆಗೆ ಬಿಗ್‌ಬಾಸ್ ಮೂರು ತಿಂಗಳು ನಡೆಯುತ್ತಿತ್ತು. 15 ರಿಂದ 20 ಸ್ಪರ್ಧಿಗಳಿಗೆ ವೇದಿಕೆಯನ್ನು ಕಲ್ಪಿಸಲಾಗುತ್ತಿತ್ತು.. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಕಾರ್ಯಕ್ರಮ ಶುರುವಾಗುತ್ತಿತ್ತು. ಆದರೆ ಈಗ ಈ ಕಾರ್ಯಕ್ರಮದಲ್ಲಿ ಭಾರೀ ಬದಲಾವಣೆಯಾಗಲಿದೆ. ವರದಿಯ ಪ್ರಕಾರ ಈ ಬಾರಿ ಬರೋಬ್ಬರಿ ಐದೂವರೆ ತಿಂಗಳುಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆಯಂತೆ. 2025 ಜುಲೈ 30ರಿಂದ ಕಾರ್ಯಕ್ರಮ ಶುರುವಾಗಲಿದ್ದು, ಜನವರಿ 2026ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ. ಈ ಮೂಲಕ ಬಿಗ್‌ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ನಡೆಯುವ ಸೀಸನ್ ಆಗಿದೆ.
ಹೀಗಾಗಿ ಬಿಗ್‌ಬಾಸ್ ತಂಡ ತೆರೆ ಮೆರೆಹಿಂದೆ ಸ್ಪರ್ಧಿಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರಂತೆ. ಅಲ್ಲದೇ ಇದರಲ್ಲಿ ಈ ಬಾರಿ ಯೂಟ್ಯೂಬರ್ ಆಗಿ ಹೆಸರು ಮಾಡಿರುವ ಗೌರವ್ ತನೇಜಾ ಬಿಗ್ ಬಾಸ್ ಮನೆಯ ಸ್ಫರ್ಧಿಯಾಗಿ ಆಯ್ಕೆಯಾಗಿದ್ದಾರಂತೆ. ಅಲ್ಲದೇ ಶಿಲ್ಪಾ ಶೆಟ್ಟಿಯ ಪತಿ ಮತ್ತು ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪವನ್ನೊತ್ತು ಜೈಲಿಗೆ ಹೋಗಿ ಬಂದ ರಾಜ್ ಕುಂದ್ರಾ ಕೂಡ ಈ ಬಾರಿಯ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರಂತೆ. ಮಮತಾ ಕುಲಕರ್ಣಿ, ಕೃಷ್ಣಾ ಶ್ರಾಫ್, ದಿ ರೆಬೆಲ್ ಕಿಡ್ ಎಂದೂ ಕರೆಯಲ್ಪಡುವ ಅಪೂರ್ವ ಮುಖಿಜಾ, ಮಿಕ್ಕಿ ಮೇಕ್ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್ ಕೂಡ ಬಿಗ್ ಬಾಸ್ ಮನೆಗೆ ಈ ಸಲ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಬಿಗ್ಬಾಸ್ಗೆ ಪ್ರವೇಶಿಸಲಿರುವ ಈ ಸಂಭಾವ್ಯ ಪಟ್ಟಿಯಲ್ಲಿರೋ ಹೆಸರನ್ನು ಕೇಳಿ ಹಿಂದಿ ಪ್ರೇಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ವೀಕ್ಷಕರು ಹಾಗೂ ನೆಟ್ಟಿಗರು ಶುರು ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ