/newsfirstlive-kannada/media/post_attachments/wp-content/uploads/2025/02/SHINE-SHARSH-SHETTY4.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7ರ ವಿನ್ನರ್​​ ಶೈನ್​ ಶೆಟ್ಟಿ ಟೆಂಪಲ್​ ರನ್​ನಲ್ಲಿ ಬ್ಯುಸಿಯಾಗಿದ್ದಾರೆ. ನಟ ನಿರೂಪಕ ಶೈನ್ ಶೆಟ್ಟಿ ಅವರು ಎಲ್ಲರಿಗೂ ಚಿರಪರಿಚಿತ.
ಇದನ್ನೂ ಓದಿ: ನಿಮಗೇನಾದ್ರೂ ನಟಿಸೋ ಆಸೆ ಇದ್ಯಾ? ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಂದ ವಿಶೇಷ ಆಹ್ವಾನ!
/newsfirstlive-kannada/media/post_attachments/wp-content/uploads/2025/02/SHINE-SHARSH-SHETTY1.jpg)
ನಿರೂಪಕನಾಗಿ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ನಟನಾಗಿ ಪಾದಾರ್ಪಣೆ ಮಾಡಿ ಸಖತ್​ ಮಿಂಚಿದ್ದರು. ಇದಾದ ಬಳಿಕ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಮೂಲಕ ಮತ್ತಷ್ಟು ಫೇಮಸ್​ ಆಗಿದ್ದ ನಟ ರಾಮನ ಜನ್ಮಭೂಮಿ ಅಯೋಧ್ಯೆಗೆ ಹೋಗಿದ್ದಾರೆ.
/newsfirstlive-kannada/media/post_attachments/wp-content/uploads/2025/02/SHINE-SHARSH-SHETTY.jpg)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಉದ್ಘಾಟನೆಗೊಂಡ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ನಟ ಭೇಟಿ ಕೊಟ್ಟು ರಾಮಲಲ್ಲಾನ ದರ್ಶನ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/SHINE-SHARSH-SHETTY2.jpg)
ಇನ್ನೂ ನಟ ಅಯೋಧ್ಯೆಗೆ ಭೇಟಿ ಕೊಟ್ಟಿದ್ದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋಗಳ ಜೊತೆಗೆ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ| ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ಅಂತ ಬರೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/SHINE-SHARSH-SHETTY5.jpg)
ಇದಾದ ಬಳಿಕ ನಟ ಶೈನ್​ ಶೆಟ್ಟಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ಫೋಟೋವನ್ನು ಕೂಡ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/SHINE-SHARSH-SHETTY3.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us