Advertisment

ಬಿಗ್​ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ವೈದ್ಯರ ತಂಡ ದೌಡು.. ಗಂಗವ್ವ ಸ್ಥಿತಿ ಹೇಗಿದೆ?

author-image
Veena Gangani
Updated On
ಬಿಗ್​ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ವೈದ್ಯರ ತಂಡ ದೌಡು.. ಗಂಗವ್ವ ಸ್ಥಿತಿ ಹೇಗಿದೆ?
Advertisment
  • ಬಿಗ್​ಬಾಸ್​ ಮನೆಯಲ್ಲಿ ಯಾರು ಉಹಿಸಿಲಾರದ ಘಟನೆ ನಡೆದಿದೆ
  • ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡ ಗಂಗವ್ವಗೇ ಏನಾಯ್ತು?
  • ಸೋಶಿಯಲ್‌ ಮೀಡಿಯಾದಲ್ಲಿ ಗಂಗವ್ವನ ವಿಚಾರದ ಬಗ್ಗೆ ಭಾರೀ ಚರ್ಚೆ

ಈಗಂತೂ ಎಲ್ಲಾ ಭಾಷೆಯಲ್ಲಿ ಬಿಗ್​ಬಾಸ್​ದ್ದೇ ಹವಾ ಶುರುವಾಗಿದೆ. ಆದರೆ ತೆಲುಗು ಬಿಗ್​ಬಾಸ್ ಸೀಸನ್ 8ರಲ್ಲಿ ಯಾರು ಉಹಿಸಿಲಾರದ ಘಟನೆ ನಡೆದಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್​ಬಾಸ್​ಗೆ ಪ್ರವೇಶ ಪಡೆದಿದ್ದ ಗಂಗವ್ವ ಅವರಿಗೆ ಹೃದಯಾಘಾತವಾಗಿದೆ ಎಂಬ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Advertisment

ಇದನ್ನೂ ಓದಿ: ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಮತ್ತೊಂದು ಸಂಭ್ರಮ; ಗಣೇಶನ ಹಬ್ಬಕ್ಕೆ ಸ್ಟಾರ್‌ಗಳ ಸರ್‌ಪ್ರೈಸ್‌!

ಎರಡು ವಾರಗಳ ಹಿಂದೆ ಗಂಗವ್ವ ಅವರು ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಅವರ ಜೊತೆ ಅವಿನಾಶ್, ರೋಹಿಣಿ, ಹರಿತೇಜ, ಟೇಸ್ಟಿ ತೇಜ, ನಯನಿ ಪಾವನಿ, ಮೆಹಬೂಬ್, ಗೌತಮ್ ಐದು ವಾರಗಳ ನಂತರ ಬಿಗ್​ಬಾಸ್ ಮನೆಗೆ ಬಂದಿದ್ದರು. ಗಂಗವ್ವ ಅವರು ಬಿಗ್​ಬಾಸ್​ ಸೀಸನ್‌ 4ರಲ್ಲೂ ಸ್ಪರ್ಧಿಯಾಗಿದ್ದರು. ಈ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಗಂಗವ್ವ.

ಆದರೆ ಆಗಾಗ ಗಂಗವ್ವ ಬಿಗ್​ಬಾಸ್‌ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸಮಯಕ್ಕೆ ಸರಿಯಾಗಿ ನಿದ್ದೆ ಆಗುತ್ತಿರಲಿಲ್ಲ. ನಿದ್ದೆ ಬರುವ ಸಮಯದಲ್ಲಿ ಟಾಸ್ಕ್‌ಗಳನ್ನು ಮಾಡಿಸುತ್ತಿದ್ದರು. ಹಳ್ಳಿಯ ವಾತಾವರಣದಲ್ಲಿ ಬೆಳೆದ ಗಂಗವ್ವಗೆ ಬಿಗ್​ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಛಲ ಬಿಡಿದ ಗಂಗವ್ವ ಎಷ್ಟೇ ಕಷ್ಟ ಬಂದರೂ ನಾನು ಆಟ ಆಡುತ್ತೇನೆ ಬಿಗ್ ಬಾಸ್ ಟೈಟಲ್ ಗೆಲ್ಲುತ್ತೇನೆ. ನೀವು ನನಗೆ ಸಪೋರ್ಟ್ ಮಾಡಿ ಅಂತ ಗಂಗವ್ವ ಹೇಳುತ್ತಿದ್ದರು. ಆದರೆ ಏಳು ವಾರಗಳ ನಂತರ ಗಂಗವ್ವ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದ ಕಾರಣ ವೈದ್ಯರ ಸಲಹೆಯ ಮೇರೆಗೆ ಬಿಗ್​ಬಾಸ್​ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು.

Advertisment

ಆದರೆ ಈ ಸೀಸನ್ 8ರಲ್ಲಿ ಗಂಗಮ್ಮ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಆದರೆ ಗಂಗವ್ವ ಅವರಿಗೆ ಮಧ್ಯರಾತ್ರಿ ಹಾರ್ಟ್ ಅಟ್ಯಾಕ್ ಆಗಿದೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಗಂಗವ್ವ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದರಿಂದ ಉಳಿದ ಸ್ಪರ್ಧಿಗಳು ತುಂಬಾ ಟೆನ್ಶನ್ ಆಗಿದ್ದರಂತೆ. ಗಂಗವ್ವರಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡ ಬಿಗ್ ಬಾಸ್ ಮನೆಗೆ ಬಂದಿದ್ದರಂತೆ. ಈ ಸುದ್ದಿ ಗಂಗೆಮ್ಮರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಇದೆಲ್ಲಾ ಬರೀ ನಾಟಕ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment