/newsfirstlive-kannada/media/post_attachments/wp-content/uploads/2024/12/Aishwarya5.jpg)
ಈ ಇಬ್ಬರು ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ಗೆ ಬರುವ ಮುನ್ನವೇ ಫ್ರೆಂಡ್ಸ್ ಆಗಿದ್ದರು. ಆದರೆ ಬಿಗ್​ಬಾಸ್​ ಮನೆಗೆ ಬಂದ ಎರಡೇ ವಾರಕ್ಕೆ ದಾಯಾದಿಗಳ ರೀತಿಯಲ್ಲಿ ಆಡೋಕೆ ಶುರು ಮಾಡಿದ್ರು. ಆದ್ರೆ ಈಗ ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಈ ಇಬ್ಬರ ಮಧ್ಯೆ ಆಗಿದ್ದೇನು ಎಂಬುವುದು ಬಗ್ಗೆ ಅಸಲಿ ಕಾರಣ ಗೊತ್ತಾಗಿದೆ.
/newsfirstlive-kannada/media/post_attachments/wp-content/uploads/2024/12/Aishwarya6.jpg)
ಹೌದು, ಭಾನುವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಐಶ್ವರ್ಯಾ ಸಿಂಧೋಗಿ ಆಚೆ ಬಂದಿದ್ದರು. ಬಿಗ್​ಬಾಸ್​ ಮನೆಯಲ್ಲಿದ್ದಾಗ ಐಶ್ವರ್ಯಾ ಸಿಂಧೋಗಿ ಹಾಗೂ ಭವ್ಯಾ ಗೌಡ ಚೆನ್ನಾಗಿಯೇ ಇದ್ದಿದ್ದರು. ಆದ್ರೆ ಬಿಗ್​ಬಾಸ್​ ಕೊಟ್ಟ ಆ ಒಂದು ಟಾಸ್ಕ್​ನಿಂದ ಈ ಇಬ್ಬರ ಮಧ್ಯೆ ಮನಸ್ತಾಪ, ಭಿನ್ನಾಭಿಪ್ರಾಯ ಮೂಡಿತ್ತು. ಇದಾದ ಬಳಿಕ ಐಶ್ವರ್ಯಾ ಎಷ್ಟೇ ಮಾತಾಡಲು ಟ್ರೈಯ್​ ಮಾಡಿದ್ರು ಭವ್ಯಾ ಗೌಡ ಕೋಪ ಮಾಡಿಕೊಳ್ಳುತ್ತಿದ್ದರು ಎಂದು ನ್ಯೂಸ್ ಫಸ್ಟ್​ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.
ಈ ಬಗ್ಗೆ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಮಾತಾಡಿದ ಐಶ್ವರ್ಯಾ ಸಿಂಧೋಗಿ, ಬಿಗ್​ಬಾಸ್​ ರೆಸಾರ್ಟ್​ ಟಾಸ್ಕ್​ನಲ್ಲಿ ತುಂಬಾ ಚೆನ್ನಾಗಿ ಆಡಿರುತ್ತೇನೆ. ಆದರೆ ಅದೇ ವಾರ ಎಲಿಮಿನೇಟ್ ಆಗಿದ್ದು ನನಗೆ ನಂಬೋಕೆ ಆಗಿಲ್ಲ. ಬಿಗ್​ಬಾಸ್​ ಮನೆಯಲ್ಲಿ ಯಾವಾಗ ಏನ್​ ಬೇಕಾದ್ರೂ ಆಗಬಹುದು. ಭವ್ಯಾ ಹಾಗೂ ನಾನು ಒಂದೇ ಪ್ರೋಡಕ್ಷನ್​ ಅಲ್ಲಿ ಕೆಲಸ ಮಾಡಿದ್ದೀವಿ. ಭವ್ಯಾ ನನಗೆ ಕ್ಲೋಸ್​ ಇಲ್ಲ ಅಂದ್ರು ಅವರ ಬಗ್ಗೆ ಗೊತ್ತಿತ್ತು. ಒಂದಿಷ್ಟು ಕಾರ್ಯಕ್ರಮಗಳಲ್ಲಿ ಮಿಟ್​ ಆಗಿದ್ವಿ. ಆದ್ರೆ, ಬಿಗ್​ಬಾಸ್​ ಕೊಟ್ಟ ಮಸಿ ಟಾಸ್ಕ್​ನಲ್ಲಿ ನಮ್ಮಿಬ್ಬರ ಮಧ್ಯೆ ಬಿರುಕು ಮೂಡಿದ್ದು ಅಲ್ಲಿ. ನಾನು ಟಾಸ್ಕ್​ನಲ್ಲಿ ಅವರ ಬಗ್ಗೆ ಕೆಲವೊಂದು ವಿಚಾರದ ಬಗ್ಗೆ ಮಾತಾಡಿದ್ದೇ. ಆದ್ರೆ ಅದು ಅವರು ವೈಯಕ್ತಿಕವಾಗಿ ತಗೆದುಕೊಂಡ್ರು. ಇದಾದ ಬಳಿಕ ನನ್ನ ಬಳಿ ಬಂದು ಭವ್ಯಾ ನನಗೆ ನಿಮ್ಮ ಜೊತೆಗೆ ಮಾತಾಡಲು ಆಗ್ತಾ ಇಲ್ಲ ಅಂತೆ ಹೇಳುತ್ತಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us