/newsfirstlive-kannada/media/post_attachments/wp-content/uploads/2024/12/Aishwarya.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 93ನೇ ದಿನಕ್ಕೆ ಆಚೆ ಬಂದಿದ್ದಾರೆ ಐಶ್ವರ್ಯಾ ಸಿಂಧೋಗಿ. ಐಶ್ವರ್ಯಾ ಸಿಂಧೋಗಿ ದೊಡ್ಮನೆಯಿಂದ ಆಚೆ ಬರೋ ಮುನ್ನ ಬಿಗ್ಬಾಸ್ ವಿಶೇಷ ಗೌರವದಿಂದ ಅವರನ್ನು ಆಚೆ ಕಳುಹಿಸಿದ್ದರು.
ಇದನ್ನೂ ಓದಿ:BBK11: ಬಿಗ್ಬಾಸ್ ಮನೆಯಲ್ಲಿ ದುರಹಂಕಾರದ ದರ್ಬಾರ್; ಉಗ್ರಂ ಮಂಜುಗೆ ಭವ್ಯಾ ಗೌಡ ಸಖತ್ ಟಾಂಗ್
ಬಿಗ್ಬಾಸ್ನಿಂದ ಆಚೆ ಬಂದ ಐಶ್ವರ್ಯಾ ಸಿಂಧೋಗಿ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಹೌದು, ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಭಾಗಿಯಾದ ಐಶ್ವರ್ಯಾ ಸಿಂಧೋಗಿ ಬಿಗ್ಬಾಸ್ ಮನೆಯ ಅನುಭವ ಬಿಚ್ಚಿಟ್ಟಿದ್ದಾರೆ. ಜೊತೆಗೆ ನಮ್ರತಾ ಗೌಡ ಜೊತೆಗೆ ಗೆಳೆತನ ಬ್ರೇಕ್ ಆಗಿದ್ದು ಹೇಗೆ ಅಂತ ಹೇಳಿಕೊಂಡಿದ್ದಾರೆ.
ಇನ್ನೂ, ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಐಶ್ವರ್ಯಾ ಸಿಂಧೋಗಿ, ನಾನು, ನಮ್ರತಾ ಮಾತಾಡದೇ ಒಂದು ವರ್ಷ ಆಗಿದೆ. ಒಂದು ಟ್ರಿಪ್ಗೆ ಹೋಗಿ ಬರೋವಾಗ ನಮ್ಮಿಬ್ಬರ ಮಧ್ಯೆ ಸಿಲ್ಲಿ ವಿಚಾರಕ್ಕೆ ಮನಸ್ತಾಪ ಮೂಡಿತ್ತು. ಮತ್ತೆ ವಾಪಸ್ ಬಂದ ಮಾತಾಡೋದೆ ನಿಲ್ಲಿಸಿಬಿಟ್ವಿ. ಆದ್ರೆ ಏರ್ ಪೋರ್ಟ್ನಿಂದಲೇ ನಾವು ಬೇರೆ ಬೇರೆ ವಾಹನದಲ್ಲಿ ಹೋದ್ವಿ. ನಮ್ರತಾ ಗೃಹ ಪ್ರವೇಶಕ್ಕೂ ನನ್ನ ಕರೆದಿಲ್ಲ. ಬೇರೆ ಅವರಿಂದಲೂ ವಿಶ್ ಮಾಡಿದ್ದೇ. ತುಂಬಾ ಕಷ್ಟ ಪಟ್ಟು ಹೊಸ ಮನೆ ತೆಗೆದುಕೊಂಡಿದ್ದಾರೆ. ಒಳ್ಳೆದಾಗಲಿ ನಮ್ರತಾಗೆ. ಆದರೆ ಗೃಹ ಪ್ರವೇಶಕ್ಕೂ ನನ್ನ ಕರೆದಿಲ್ಲ ಅನ್ನೋದು ನನಗೆ ತುಂಬಾ ಕೋಪ ಇತ್ತು. ಬಿಗ್ಬಾಸ್ ಮನೆಗೆ ನಮ್ರತಾ ಗೌಡ ಬಂದಿದ್ದು ತುಂಬಾ ಖುಷಿ ಆಯ್ತು ಅಂತ ಹೇಳಿಕೊಂಡಿದ್ದಾರೆ.
ಕಿರುತೆರೆಯ ಮೋಸ್ಟ್ ಫ್ಯಾಷನೆಬಲ್ ಆ್ಯಂಡ್ ಬೋಲ್ಡ್ ನಟಿಯರ ಲಿಸ್ಟ್ನಲ್ಲಿ ನಾಗಿಣಿ ಖ್ಯಾತಿಯ ನಟಿ ನಮ್ರತಾ ಗೌಡ ಹಾಗೂ ಐಶ್ವರ್ಯಾ ಶಿಂಧೋಗಿ ಇದ್ದಾರೆ. ನಾಗಿಣಿ ಧಾರಾವಾಹಿಯ ಮೂಲಕ ಇಬ್ಬರು ಒಬ್ಬರಿಗೊಬ್ಬರು ಪರಿಚಯವಾದರು. ಅದ್ಭುತ ನಟನೆಯ ಮೂಲಕ ವೀಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡವರು. ಧಾರಾವಾಹಿ ಮುಕ್ತಾಯದ ನಂತರದಲ್ಲೂ ಇಬ್ಬರ ತಮ್ಮ ಗೆಳತನವನ್ನ ಹಾಗೇ ಕಾಪಾಡಿಕೊಂಡು ಬಂದಿದ್ದರು. ಆದೆ ಟ್ರಿಪ್ಗೆ ಹೋಗಿದ್ದಾರೆ ಈ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತಂತೆ. ಹೀಗಾಗಿ ಬಿಗ್ಬಾಸ್ ಮನೆಗೆ ನಮ್ರತಾ ಗೌಡ ಬಂದಾಗ ಮಾತಾಡಿದ್ದು ಬಿಟ್ಟರೆ ಮತ್ತೆ ಈ ಇಬ್ಬರು ಒಂದಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ