/newsfirstlive-kannada/media/post_attachments/wp-content/uploads/2024/10/HANUMANTHA.jpg)
ಬಿಗ್​​ಬಾಸ್​​ ಮನೆಯಲ್ಲಿ ಸ್ಪರ್ಧಿ ಹನುಮಂತನ ಕ್ಯಾಪ್ಟನ್ಸಿ ದರ್ಬಾರ್ ಮಸ್ತ್ ಇದೆ. ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಪ್ರತಿಸ್ಪರ್ಧಿಗಳನ್ನ ಹ್ಯಾಂಡಲ್ ಮಾಡೋದೇ ಬಿಗ್ ಚಾಲೇಜಿಂಗ್ ಆಗಿದೆ. ಬಾಣಗಳಂತೆ ಒಂದೊಂದು ಮಾತುಗಳು, ಟಾಂಟ್​​ಗಳು ಎದೆಗೆ ನಾಟುತ್ತಿವೆ.
ಈ ವಾರ ‘ತನಗೆ ಐತೆ ಹಬ್ಬ’ ಅನ್ನೋದು ಕ್ಯಾಪ್ಟನ್​ಗೆ ಕನ್ಫರ್ಮ್​ ಆಗಿದೆ. ಎಲ್ರೋ ಡೋಂಟ್ ಕೇರ್ ಅಂತಿರುವಾಗ ‘ಹೆಂಗಪ್ಪ ಸಂಬಾಳಿಸೋದು’ ಅನ್ನೋ ಚಿಂತೆಯಲ್ಲಿದ್ದ ಲೀಡರ್​​ಗೆ ಧನು ಕೊಂಚ ಸಾಥ್ ನೀಡವ್ರೆ. ಅಂತೆಯೇ ಇಬ್ಬರು ಸೇರ್ಕೊಂಡು, ಸ್ಪರ್ಧಿಗಳನ್ನು ಕಂಟ್ರೋಲ್ ಮಾಡುವ ಶಕ್ತಿ ಸಿಗಲೆಂದು ದೇವರ ಮೊರೆ ಹೋಗವ್ರೆ!
ಓ ದೇವರೇ..
ಬಿಗ್​ ಬಾಸ್​ ಮನೆಯಲ್ಲಿರುವ ದೇವರ ಮೊರೆ ಹೋಗಿರುವ ಹನುಮಂತ ‘ಓ ದೇವರೇ..!’ ಎಂದು ದೀಪ ಬೆಳಗಿ ಕೈಮುಗಿದಿದ್ದಾರೆ. ಈ ವೇಳೆ ಹನುಮಂತ ಹಾಗೂ ಧನರಾಜ್ ನಡುವೆ ನಡೆದ ಕ್ಯೂಟ್​ ಸಂಭಾಷಣೆಗೆ ಹೀಗಿದೆ..
‘ಎಲ್ಲಾ ಒಳ್ಳೇದಾಗಲಿ’ ಎನ್ನುತ್ತ ಹನುಮಂತನ ಕೈಗೆ ಧನು ಮ್ಯಾಚ್​​ ಬ್ಯಾಕ್ಸ್ ನೀಡ್ತಾರೆ. ಆಗ ಹನುಮಂತ ‘ದೀಪ ಹಚ್ಚಿ ಬೀಡೋಣ’ ಎಂದು ಮಾಮೂಲಿಯಂತೆ ತಲೆ ಮೇಲೆ ಕೈ ಇಟ್ಕೊಳ್ತಾರೆ. ನಂತರ ಕೈಮುಗಿದು ಬೇಡಿಕೊಳ್ಳುವ ಕ್ಯಾಪ್ಟನ್.. ‘ಎಲ್ಲರನ್ನೂ ಒಳ್ಳೆದು ಮಾಡವ್ವ. ಬಿಗ್​ ಬಾಸ್​ ಮನೆಯಲ್ಲಿ ಜಗಳ ಆಗದಂಗೆ..’ ಏನೋ ಹೇಳಲು ಹೋಗ್ತಾರೆ. ಆಗ ಅವರಿಗೆ ಏನು ಹೇಳಬೇಕು ಎಂದು ಗೊತ್ತಾಗಲ್ಲ. ಅದಕ್ಕೆ ‘ಥೂ..’ ಏನದು ಎಂದು ಧನುರನ್ನು ಕೇಳ್ತಾರೆ. ಅದಕ್ಕೆ ‘ಕ್ಯಾಪ್ಟನ್ಸಿ’ ಅಂತಾ ಉತ್ತರ ಕೊಡ್ತಾರೆ. ಮತ್ತೆ ದೇವರಲ್ಲಿ ಬೇಡಿಕೆ ಮುಂದುವರಿಸಿ, ‘ನಾನು ಕ್ಯಾಪ್ಟನ್ ಇರೋ ಮಟ ಯಾವುದೂ ಜಗಳ ಆಗೋಕೆ ಬಿಡಬೇಡ. ಎಲ್ಲರನ್ನೂ ಶಾಂತಿರೀತಿಯಿಂದಾಗಿ ಇರಿಸು’ ಎನ್ನುತ್ತಾರೆ.
ಮತ್ತೆ ಧನು ಮಧ್ಯ ಪ್ರವೇಶ ಮಾಡಿ.. ‘ಏನೇ ಸಮಸ್ಯೆ ಬಂದರೂ ಎದುರಿಸುವ ಶಕ್ತಿ ಕೊಡು’ ಎಂದು ಬೇಡಿಕೊಳ್ಳುವಂತೆ ಹೇಳ್ತಾರೆ. ‘ಹುಂ!’ ಎಂದ ಹನುಮಂತ, ‘ಇಲ್ಲ, ಇಲ್ಲ ಹಂಗೆ ಬೇಡ, ಸಮಸ್ಯೆಯೇ ಬರವಲ್ದಂಗೆ ನಡೆಸಿಕೋ’ ಎನ್ನುತ್ತಾರೆ. ಆಗ ಧನು ಜೋರಾಗಿ ನಗುತ್ತಾರೆ. ಮತ್ತೆ ಕೈಮುಗಿದು ‘ತಾಯಿ ನಿನ್ನ ಆಶೀರ್ವಾದ ಸ್ವಲ್ಪ ಜಾಸ್ತಿ ಇರ್ಲಿ’ ಎನ್ನುತ್ತಾರೆ. ಕಲರ್ಸ್ ಕನ್ನಡ ಶೇರ್ ಮಾಡಿರುವ ಈ ಪ್ರೊಮೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
ಇದನ್ನೂ ಓದಿ:ಗುಡ್‌ನ್ಯೂಸ್ ಕೊಟ್ಟ ಗೊಂಬೆ.. ಬಿಗ್‌ಬಾಸ್ ಬೆಡಗಿ ನೇಹಾ ಗೌಡ ಮನೆಗೆ ಪುಟಾಣಿ ಕಂದ ಆಗಮನ
ಆಹಾ! ಎಂಥಾ ವರ ಬೇಡ್ಕೊಂಡ್ಯಪ್ಪಾ ಹನುಮಂತು?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/UkOK45kqeW— Colors Kannada (@ColorsKannada) October 30, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us