ರಶ್ಮಿಕಾ ಮಂದಣ್ಣ ಆಗೋಕೆ ಹೊರಟ್ರಾ ಚೈತ್ರಾ ಕುಂದಾಪುರ.. ವಿಶೇಷ ದಿನದಂದು ವಿಭಿನ್ನ ಲುಕ್​; ಹೇಳಿದ್ದೇನು?

author-image
Veena Gangani
Updated On
ರಶ್ಮಿಕಾ ಮಂದಣ್ಣ ಆಗೋಕೆ ಹೊರಟ್ರಾ ಚೈತ್ರಾ ಕುಂದಾಪುರ.. ವಿಶೇಷ ದಿನದಂದು ವಿಭಿನ್ನ ಲುಕ್​; ಹೇಳಿದ್ದೇನು?
Advertisment
  • ಥೇಟ್​​ ರಶ್ಮಿಕಾ ಮಂದಣ್ಣನ ಲುಕ್​ನಲ್ಲಿ ಚೈತ್ರಾ ಕುಂದಾಪುರ
  • ಸೋಷಿಯಲ್​ ಮೀಡಿಯಾದಲ್ಲಿ ಫೈರ್ ಬ್ರ್ಯಾಂಡ್ ಌಕ್ವೀವ್
  • ಬಿಗ್​ಬಾಸ್​ನಿಂದ ಆಚೆ ಬಂದ ಬೆನ್ನಲ್ಲೇ ಚೈತ್ರಾ ಲುಕ್​ ಚೇಂಜ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ಫೈರ್ ಬ್ರ್ಯಾಂಡ್ ಖ್ಯಾತಿಯ ಚೈತ್ರಾ ಕುಂದಾಪುರ ಲುಕ್​ ಫುಲ್​ ಬದಲಾಗಿ ಬಿಟ್ಟಿದೆ.

ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

publive-image

ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಚೈತ್ರಾ ಕುಂದಾಪುರ ಅವರು ಸೋಷಿಯಲ್​ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್​ ಆಗಿದ್ದಾರೆ.

publive-image

ಬಿಗ್​​ಬಾಸ್​ನಿಂದ ಆಚೆ ಬಂದ ಬೆನ್ನಲ್ಲೇ ಚೈತ್ರಾ ಕುಂದಾಪುರ ಅವರು ಸಖತ್​ ಚೇಂಚ್​ ಆಗಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್​ ಆಗಿ ಇರುತ್ತಿದ್ದರು. ಆದ್ರೆ, ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ದಿನೇ ದಿನೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.

ಇಂದು ತಮ್ಮ ಇನ್​ಸ್ಟಾದಲ್ಲಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡು ಮಹಿಳೆಯರ ದಿನಾಚರಣೆಗೆ ಶುಭ ಕೋರಿದ್ದಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಅವರ ಹೊಚ್ಚ ಹೊಸ ಸಿನಿಮಾ ಛಾವದ ಲುಕ್​ ಅನ್ನು ರೀಕ್ರಿಯೇಟ್ ಮಾಡಿದ್ದಾರೆ.

ಸೇಮ್​ ಟು ಸೇಮ್​ ರಶ್ಮಿಕಾ ಮಂದಣ್ಣ ಅವರ ಛಾವ ಗೆಟಪ್​ನಲ್ಲಿ ಕಾಣಿಸಿಕೊಂಡು ಮಹಿಳೆಗೆ ವಿಶ್​ ಮಾಡಿದ್ದಾರೆ. ತನ್ನಂತೆ ಬದುಕುವ ಜೀವವೊಂದಕ್ಕೆ ದೇವತೆಯ ಸ್ಥಾನ ಕೊಡುವ, ತಾಯಿಯಲ್ಲಿ, ಮಡದಿಯಲ್ಲಿ, ಮಗಳಲ್ಲಿ ದೇವರನ್ನೇ ಹುಡುಕುವ, ಹೆಣ್ಣು ಜೀವವನ್ನು ಬದುಕಿನುದ್ದಕ್ಕೂ ಸಂಭ್ರಮಿಸುವ ಎಲ್ಲ ಗಂಡು ಮಕ್ಕಳಿಗೆ ಹೃದಯ ತುಂಬಿ ಧನ್ಯವಾದ ಹೇಳದೆ ಈ ದಿನ ಪರಿಪೂರ್ಣವಾಗಲಾರದು ಎಂದು ಬರೆದುಕೊಂಡಿದ್ದಾರೆ.

ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು 'ಸಂಸ್ಕೃತಿ ಅನ್ನೋದು ನಾಲಿಗೆಯಲ್ಲು, ಗುಣದಲ್ಲೂ, ಮನದಲ್ಲೂ ಇದ್ದು ಅದಕ್ಕೊಂದು ಸೀರೆ ಉಡಿಸಿದರೆ ಅದುವೇ ಚೈತ್ರ ಕುಂದಾಪುರ, ಮಹಿಳಾ ದಿನದ ಶುಭಾಶಯಗಳು ಚೈತ್ರಕ್ಕ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment