/newsfirstlive-kannada/media/post_attachments/wp-content/uploads/2025/01/BHAVYA_GOWDA.jpg)
ಗ್ರ್ಯಾಂಡ್ ಫಿನಾಲೆಯಲ್ಲಿ 6 ಕಂಟೆಸ್ಟೆಂಟ್ಸ್ ಪೈಕಿ ಒಬ್ಬರು ಮಾತ್ರ ಬಿಗ್ಬಾಸ್ ಟ್ರೋಫಿಯನ್ನು ಜಯಿಸಲಿದ್ದಾರೆ. ಸದ್ಯ ಅದು ಯಾರು ಎನ್ನುವುದು ವೀಕ್ಷಕರ, ಪ್ರೇಕ್ಷಕರ ಕುತೂಹಲವಾಗಿದೆ. ಕಪ್ ಗೆಲ್ಲುವ ರೇಸ್ನಲ್ಲಿ ಹನುಮಂತು, ತ್ರಿವಿಕ್ರಮ್, ರಜತ್, ಮಂಜು, ಮೋಕ್ಷಿತಾ ಜೊತೆ ಭವ್ಯ ಕೂಡ ಸ್ಥಾನ ಪಡೆದಿದ್ದಾರೆ. ಕಪ್ ಗೆಲ್ಲುವ ಭರವಸೆಯಲ್ಲಿರುವ ಭವ್ಯ, ಇದೀಗ ಕೈಮುಗಿದು ಕ್ಷಮೆ ಕೇಳಿದ್ದಾರೆ.
ಈ ಬಾರಿಯ ಬಿಗ್ಬಾಸ್ ಶೋನಲ್ಲಿ ಮೂರು ಬಾರಿ ಕ್ಯಾಪ್ಟನ್ ಆದ ಏಕೈಕ ಸ್ಪರ್ಧಿ ಎಂದರೆ ಅದು ಭವ್ಯ ಆಗಿದ್ದಾರೆ. ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಆದರೆ ಎಲ್ಲತರದಲ್ಲೂ ಒಳ್ಳೆತನ ಕಾಣಬೇಕು. ಕ್ಯಾಪ್ಟನ್ ಆದ ಮೇಲೂ ಅವರ ವರ್ತನೆ ಉತ್ತಮವಾಗಿದೆ ಎಂದು ಜನರಿಗೆ ಅನಿಸಬೇಕು. ಆದರೆ ಭವ್ಯ 3 ಬಾರಿ ಕ್ಯಾಪ್ಟನ್ ಆದರೂ ಆರೋಪಗಳು ಅವರನ್ನ ಬಿಟ್ಟಿಲ್ಲ. ಬೇರೆಯವರ ಸಹಾಯದಿಂದ ಮೊದಲ ಬಾರಿಗೆ ಭವ್ಯ ಕ್ಯಾಪ್ಟನ್ ಆದರು. 2ನೇಯದು ಬಿಟ್ಟರೇ, 3ನೇ ಬಾರಿ ಮೋಸ ಮಾಡಿ ಕ್ಯಾಪ್ಟನ್ ಆದರು ಎನ್ನುವ ಆರೋಪಗಳಿವೆ.
ಇದನ್ನೂ ಓದಿ:BBK11; ಪ್ರೇಕ್ಷಕರ ಮುಂದೆ ತಮ್ಮ ಮನದಾಳ ಬಿಚ್ಚಿಟ್ಟ ಭವ್ಯ, ಮಂಜು, ರಜತ್ ಕಿಶನ್.. ಏನಂದ್ರು?
ಇದು ಅಲ್ಲದೇ ಟಾಸ್ಕ್ ಸಮಯದಲ್ಲಿ ಚೆಂಡುಗಳನ್ನು ಬಾಸ್ಕೆಟ್ನಲ್ಲಿ ತುಂಬುವಾಗ ಹನುಮಂತು ಮೇಲೆ ಹಲ್ಲೆ ಮಾಡಿದ ಆರೋಪ ಭವ್ಯ ಮೇಲಿದೆ. ಹನುಮಂತು ಮೇಲೆ ಕೈ ಮಾಡಿದ್ದಕ್ಕೆ ಮನೆಯಲ್ಲಿ ಒಂದು ದಿನ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜಿಲೇಬಿ ವಿಚಾರದಲ್ಲೂ ದೊಡ್ಡ ರಾದ್ಧಾಂತ ಮಾಡಿದ್ದರು. ಇಷ್ಟೇ ಅಲ್ಲದೇ ವಾರದ ಪಂಚಾಯತಿಯಲ್ಲಿ ಸತತವಾಗಿ ಭವ್ಯಗೆ ಕಿಚ್ಚ ಸುದೀಪ್ ಕ್ಲಾಸ್ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಹಲವು ಏಳು-ಬೀಳುಗಳನ್ನು ಭವ್ಯ ಅವರು ಕಂಡಿದ್ದಾರೆ.
ಭವ್ಯ ಜನರಿಗೆ ಕಾಣುವಂತೆ ಕೆಲವು ಸಮಯದಲ್ಲಿ ಡ್ರಾಮಾ ಮಾಡುತ್ತಾರೆ ಎನ್ನಲಾಗುತ್ತದೆ. ತಮ್ಮ ಸ್ವಾರ್ಥಕ್ಕಾಗಿ ತ್ರಿವಿಕ್ರಮ್ ಅವರನ್ನು ಮನೆಯಲ್ಲಿ ಜೊತೆಗಿಟ್ಟುಕೊಂಡು ಫಿನಾಲೆ ಸಮೀಪಿಸುತ್ತಿದ್ದಂತೆ ಕೊಂಚ ಅಂತರ ಕಾಪಾಡಿಕೊಂಡರು ಎಂಬ ಆರೋಪವಿದೆ. ಸ್ವತಹ ತ್ರಿವಿಕ್ರಮ್ ಈ ಸಂಬಂಧ ಆರೋಪಿಸಿದ್ದರು. ಧಾರಾವಾಹಿ ಹಿನ್ನೆಲೆಯವರಾದ ಭವ್ಯ ಅವರಿಗೆ ಗ್ರ್ಯಾಂಡ್ ಫಿನಾಲೆಯಲ್ಲಿ ಎಷ್ಟು ಮತಗಳು ಬರುತ್ತವೆ ಎಂದು ಕಾದು ನೋಡಬೇಕಿದೆ.
ಸದ್ಯ ಭವ್ಯ ಅವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿರುವ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದಾರೆ. ಈ ಸಂಬಂಧ ಮೇಲೆ ತಿಳಿಸಿದ ಎಲ್ಲ ಕಾರಣಗಳಿಂದ ಪ್ರೇಕ್ಷಕರ ಬಳಿ ವೋಟ್ಗಳಿಗೆ ಮನವಿ ಮಾಡುವಾಗ ಕೈಮುಗಿದು ಕ್ಷಮೆ ಕೇಳಿದ್ದಾರೆ. ಈ ವೇಳೆ ಮಾತನಾಡಿದ ಭವ್ಯ, ನಾನು ಆಡಿರುವ ಆಟಗಳಿಂದ, ಮಾತುಗಳಿಂದ, ವರ್ತನೆಯಿಂದ ಬೇಸರ ಆಗಿದ್ದಾರೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಕೈ ಮುಗಿದು ವೋಟ್ಗಾಗಿ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ