/newsfirstlive-kannada/media/post_attachments/wp-content/uploads/2024/04/bhoomi.jpg)
ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ ಸಖತ್​ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/bhoomi1.jpg)
ಹೌದು, ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಕಿನ್ನರಿ ಸೀರಿಯಲ್​ ಮೂಲಕ ಕಿರುತೆರೆ ಲೋಕದಲ್ಲಿ ಕಾಲಿಟ್ಟ ನಟಿ ಭೂಮಿ ಶೆಟ್ಟಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಿನ್ನ ವಿಭಿನ್ನ ಆಗಿರೋ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ:ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾದ ನಟಿ ಹರಿಪ್ರಿಯ; ಸೀರಿಯಲ್ಲಾ.. ರಿಯಾಲಿಟಿ ಶೋನಾ?
/newsfirstlive-kannada/media/post_attachments/wp-content/uploads/2024/04/bhoomi2.jpg)
ಆದರೆ ಇದೀಗ ಭೂಮಿ ಶೆಟ್ಟಿ ಅವರು ಹೊಸ ಲುಕ್​ಗೆ ಫ್ಯಾನ್ಸ್​​ ಫುಲ್​ ಫಿದಾ ಆಗಿ ಬಿಟ್ಟಿದ್ದಾರೆ. ಇವರು ಶೇರ್​ ಮಾಡಿಕೊಂಡಿರೋ ಫೋಟೋದಲ್ಲಿ ಕೇಶ ವಿನ್ಯಾಸ ಚೇಂಚ್​ ಮಾಡಿದ್ದಾರೆ. ಈ ನ್ಯೂ ಲುಕ್​ಗೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್​ ಕಾಮೆಂಟ್​ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗುತ್ತಿವೆ. ಈ ಫೋಟೋ ನೋಡಿದ ನೆಟ್ಟಿಗರು ವಾವ್​ ಅಕ್ಕ ಸೂಪರ್​​, ಎಷ್ಟು ಚೆನ್ನಾಗಿ ಕಾಣುತ್ತಿದ್ದೀರಿ, ನಿಮಗೆ ಇದೇ ಹೇರ್ ಸ್ಟೈಲ್ ಸೂಟ್​ ಆಗುತ್ತೆ ಎಂದು ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us