ಬಿಗ್​ಬಾಸ್​ ಮನೆಗೆ ಬಂದ ಧನು ಮುದ್ದಿನ ಕೂಸು; ಅಪ್ಪನಿ​ಗೆ ಮಗಳಿಂದ ಎನರ್ಜಿ ಬೂಸ್ಟ್..! Video

author-image
Ganesh
Updated On
ಬಿಗ್​ಬಾಸ್​ ಮನೆಗೆ ಬಂದ ಧನು ಮುದ್ದಿನ ಕೂಸು; ಅಪ್ಪನಿ​ಗೆ ಮಗಳಿಂದ ಎನರ್ಜಿ ಬೂಸ್ಟ್..! Video
Advertisment
  • ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಧನು ಫ್ಯಾಮಿಲಿ
  • ಪತ್ನಿಯಿಂದ ಹೊಡೆತ ತಿಂದ ಸ್ಪರ್ಧಿ ಧನರಾಜ್
  • ಬಿಗ್​ಬಾಸ್ ಮನೆಯಲ್ಲಿ ಭಾವನಾತ್ಮಕ ಘಳಿಗೆ

ಬರೀ ಕಿತ್ತಾಟ, ಗಲಾಟೆಯಿಂದ ತುಂಬಿರುತ್ತಿದ್ದ ಬಿಗ್​ಬಾಸ್ ಮನೆ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ವೀಕ್ಷಕರಿಗೆ ಸ್ಪೆಷಲ್ ಮನರಂಜನೆಯ ಬೂಸ್ಟ್ ಸಿಗ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗ್ತಿದೆ.

ಅಂತೆಯೇ ಧನರಾಜ್ ಆಚಾರ್ಯ ಅವರ ಕೂಡು ಕುಟುಂಬ ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದೆ. ಇಡೀ ಕುಟುಂಬವನ್ನು ಕಂಡ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಹುಲಿ ಕುಣಿತದ ಸ್ಟೆಪ್ಸ್ ಹಾಕಿದ್ದಾರೆ.

ಇದನ್ನೂ ಓದಿ: Jio ಹೆಸರಲ್ಲಿ ಈ ಮೆಸೇಜ್ ಬಂದರೆ ಹುಷಾರ್.. ಈಗಲೇ ನಿಮ್ಮ ಫೋನ್ ​​ಚೆಕ್​ ಮಾಡಿ..!

publive-image

ವಿಶೇಷ ಅಂದರೆ ಅವರ ಮುದ್ದಿನ ಮಗಳು ಕೂಡ ಬಿಗ್​ಬಾಸ್ ಮನೆಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಇದನ್ನು ನೋಡಿದ ಧನು, ಪ್ಲೀಸ್​ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್​ಬಾಸ್​​ಗೆ ಮನವಿ ಮಾಡಿಕೊಂಡಿದ್ದಾರೆ. ಧನು ಭಾವುಕರಾಗಿದ್ದನ್ನು ನೋಡಿದ ಬಿಗ್​ಬಾಸ್​, ಕೊನೆಗೂ ಮಗುವನ್ನು ಎತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಧನು, ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ. ಅಂದ್ಹಾಗೆ ಧನರಾಜ್-ಪ್ರಜ್ಞಾ ದಂಪತಿಗೆ ಸೆಪ್ಟೆಂಬರ್ 20 ರಂದು ಹೆಣ್ಣು ಮಗು ಜನಿಸಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ‘ಚಾಲೆಂಜ್’​​ಗೆ ಪರ್ಫೆಕ್ಟ್​ ಪ್ಲಾನ್​ ಸಿದ್ಧ.. ತೆರೆ ಹಿಂದೆ ತಜ್ಞರಿಂದ ಭರ್ಜರಿ ಸ್ಟ್ರಾಟರ್ಜಿ..! ಏನದು?

publive-image

ಇನ್ನು, ಪತ್ನಿ ಪ್ರಜ್ಞಾ ಧನುಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ. ಇವತ್ತು ರಾತ್ರಿ ಈ ಎಪಿಸೋಡ್ ಪ್ರಸಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment