/newsfirstlive-kannada/media/post_attachments/wp-content/uploads/2024/11/drama.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 9ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ 8ನೇ ವಾರಕ್ಕೆ ಬಿಗ್ಬಾಸ್ ಮನೆಯಿಂದ ನಟ ಧರ್ಮ ಕೀರ್ತಿರಾಜ್ ಅವರು ಆಚೆ ಬಂದಿದ್ದಾರೆ.
ಇದನ್ನೂ ಓದಿ:ಉಪಚುನಾವಣೆ ಮಹಾ ವಿಜಯ, ಕೈ ಪಾಳಯದ ಹೊಸ ಲೆಕ್ಕಾಚಾರ; ಗೃಹಲಕ್ಷ್ಮೀ ಸಂಘಗಳ ಸ್ಥಾಪನೆಗೆ ಚಿಂತನೆ
ನಿನ್ನೆಯ ಸಂಚಿಕೆಯಲ್ಲಿ ವೀಕ್ಷಕರಿಂದ ಕಡಿಮೆ ವೋಟ್ಸ್ ಪಡೆದ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ನಟ ಧರ್ಮ ಕೀರ್ತಿರಾಜ್ ಆಚೆ ಬಂದಿದ್ದಾರೆ. ಆದರೆ ನಟ ಧರ್ಮ ಕೀರ್ತಿರಾಜ್ ಅವರು ಬಿಗ್ಬಾಸ್ ಮೂಲಕವೇ ಸಾಕಷ್ಟು ಜನರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. 50ಕ್ಕಿಂತ ಹೆಚ್ಚು ದಿನ ಮನೆಯಲ್ಲಿದ್ದ ಧರ್ಮ ಕೀರ್ತಿರಾಜ್ ತಮ್ಮ ವ್ಯಕ್ತಿತ್ವ ಹೇಗೆ ಎಂದು ಜನರಿಗೆ ತಿಳಿಸಿಕೊಟ್ಟಿದ್ದಾರೆ.
ಬಿಗ್ಬಾಸ್ನಿಂದ ತಮ್ಮ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರಿಂದ ಪ್ರೀತಿಯ ಸ್ವಾಗತ ಸಿಕ್ಕಿದೆ. ಧರ್ಮ ಕೀರ್ತಿರಾಜ್ ತಂದೆ ಮಗನ ಆಟ ಹಾಗೂ ಸ್ವಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗನಿಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ.
View this post on Instagram
ನಟ ಧರ್ಮ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಧರ್ಮ ಕೀರ್ತಿರಾಜ್ ಹಾಗೂ ಹಿರಿಯ ನಟ ಕೀರ್ತಿರಾಜ್ ಒಟ್ಟಿಗೆ ನಿಂತುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟವಾಡಿದ್ದು, ಎಲ್ಲರ ಮನಸ್ಸನ್ನು, ಹೃದಯವನ್ನು ಗೆದ್ದಿದ್ದೀರಿ. ನಿಮ್ಮನ್ನು ವಿನ್ನರ್ ಅಂತ ನಾವು ತಿಳಿದಿದ್ದೇವೆ. ಹೊರಬಂದಿದ್ದಕ್ಕೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ನೀವು ಲೂಸರ್ ಅಲ್ಲ. ನಾವೆಲ್ಲರೂ ನಿಮ್ಮನ್ನು ಪ್ರೀತಿ ಮಾಡ್ತೇವೆ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಮಗನಿಗೆ ಕೀರ್ತಿರಾಜ್ ಹರಸಿದ್ದಾರೆ.
ಬಿಗ್ಬಾಸ್ ಮನೆಯಿಂದ ನಿನ್ನ ಮನೆಗೆ ಬಂದ ಅನುಭವ ಹೇಗಿದೆ ಎಂದು ಧರ್ಮ ಅವರಿಗೆ ತಂದೆ ಕೀರ್ತಿರಾಜ್ ಕೇಳಿದ್ದಾರೆ. ನಟ ಧರ್ಮ ಕೀರ್ತಿರಾಜ್, ಬಿಗ್ ಬಾಸ್ ಜರ್ನಿ ತುಂಬಾ ಅದ್ಭುತವಾಗಿತ್ತು. 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದಿದ್ದು ಖುಷಿಯ ವಿಷ್ಯ. ಅಲ್ಲಿನ ಸ್ಪರ್ಧಿಗಳನ್ನು ಮಿಸ್ ಮಾಡ್ತಿದ್ದೇನೆ. ಬಿಗ್ಬಾಸ್ನಲ್ಲಿ ಇನ್ನೂ ಆಟವಿತ್ತು. ಹೊರಗೆ ಬಂದಿದ್ದು ಸ್ವಲ್ಪ ಬೇಸರವಾಗಿದೆ. ಅದರ ಜೊತೆ ಮನೆಗೆ ಬಂದ ಖುಷಿ ಇದೆ. ಅಪ್ಪ, ಅಪ್ಪ, ಅಕ್ಕ- ಭಾವನನ್ನು ನೋಡಿದ ಸಂತೋಷವಿದೆ ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ