newsfirstkannada.com

VIDEO: ಆಟೋ ರಾಜನಾದ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್; ಅಭಿಮಾನಿಗಳು ಏನಂದ್ರು ಗೊತ್ತಾ?

Share :

Published February 12, 2024 at 6:42pm

    ಆಟೋ ಓಡಿಸಿದ ಡ್ರೋನ್ ಪ್ರತಾಪ್ ವಿಡಿಯೋ ವೈರಲ್​

    ಗಿಚ್ಚಿ ಗಿಲಿಗಿಲಿ ಸೀಸನ್​ 3ರ ಸ್ಪರ್ಧಿಯಾಗಿರೋ ಡ್ರೋನ್​ ಪ್ರತಾಪ್​​

    ನೀವು ಬಿಡಿ​ ಸಕಲ ಕಲಾ ವಲ್ಲಭ ಎಂದು ಕಾಮೆಂಟ್​ ಮಾಡಿದ ಫ್ಯಾನ್ಸ್​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಡ್ರೋನ್​ ಪ್ರತಾಪ್​​ ಎಲ್ಲಿ ಹೋದರೂ ಸುದ್ದಿಯಾಗುತ್ತಾರೆ.

ಇದನ್ನು ಓದಿ: BBK10: ಅಪ್ಪನ ಜತೆ ಮುದ್ದೆ ಮಾಡಿದ ಡ್ರೋನ್ ಪ್ರತಾಪ್​; ವಿಡಿಯೋ ನೋಡಿ ಫ್ಯಾನ್ಸ್‌ ಏನಂದ್ರು?

ಬಿಗ್​ಬಾಸ್​ ಸೀಸನ್​ 10 ರನ್ನರ್​ ಅಪ್​​ ಪಟ್ಟವನ್ನು ಪಡೆದುಕೊಂಡ ಡ್ರೋನ್​ ಪ್ರತಾಪ್​ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್​ಬಾಸ್​​ ರನ್ನರ್​ ಅಪ್ ಪಟ್ಟ ಪಡೆದುಕೊಂಡ ಬಳಿಕ ಡ್ರೋನ್​ ಪ್ರತಾಪ್​ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನೆಟ್ಕಲ್​ ಗ್ರಾಮಕ್ಕೆ ಹೋಗಿದ್ದರು. ಅಲ್ಲದೆ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದಾರೆ. ಮುದ್ದೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿತ್ತು.

ಇದೀಗ ಅಭಿಮಾನಿಯ ಆಟೋ‌ ಓಡಿಸಿ ಎಲ್ಲಾ ಆಟೋ ಚಾಲಕರಿಗೂ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಡ್ರೋನ್​ ಪ್ರತಾಪ್​ ಅವರು ಅಭಿಮಾನಿಯೊಬ್ಬರ ಆಟೋವನ್ನು ಓಡಿಸಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ನೀವು ಬಿಡಿ​ ಸಕಲ ಕಲಾ ವಲ್ಲಭ ಡ್ರೋನ್​ ಪ್ರತಾಪ್, ಪ್ರತಾಪ್ ನೀವು ಚೆನ್ನಾಗಿರಬೇಕು ಒಳ್ಳೆದಾಗಲಿ ನಿಮ್ಮ ಭವಿಷ್ಯಕ್ಕೆ ಅಂತಾ ಕಾಮೆಂಟ್​ ಮಾಡಿದ್ದಾರೆ. ಸದ್ಯ ಡ್ರೋನ್​ ಪ್ರತಾಪ್​ ಅವರು ಗಿಚ್ಚಿ ಗಿಲಿಗಿಲಿ ಸೀಸನ್​ 3ರ ಸ್ಪರ್ಧಿಯಾಗಿದ್ದಾರೆ. ಅದರಲ್ಲೂ ಡ್ರೋನ್​ ಪ್ರತಾಪ್​ ಅವರ ಅಭಿನಯ ಕಂಡು ಇನ್ನೂ ಕೆಲವರು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಆಟೋ ರಾಜನಾದ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್; ಅಭಿಮಾನಿಗಳು ಏನಂದ್ರು ಗೊತ್ತಾ?

https://newsfirstlive.com/wp-content/uploads/2024/02/drone-prathap-6.jpg

Load More