ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆ ಬಿಗ್​ಬಾಸ್ ಮಾಜಿ ಸ್ಪರ್ಧಿ ಮಗ; ಕೃತಿಕಾ ಮಲಿಕ್ ಕಣ್ಣೀರು

author-image
Veena Gangani
ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆ ಬಿಗ್​ಬಾಸ್ ಮಾಜಿ ಸ್ಪರ್ಧಿ ಮಗ; ಕೃತಿಕಾ ಮಲಿಕ್ ಕಣ್ಣೀರು
Advertisment
  • ಯೂಟ್ಯೂಬರ್ ಅರ್ಮಾನ್ ಮಲಿಕ್ ಮಗನಿಗೆ ಏನಾಗಿದೆ ಗೊತ್ತಾ?
  • ಮೊದಲ ವಾರಕ್ಕೆ ಬಿಗ್​​ ಶೋನಿಂದ ಎಲಿಮಿನೇಟ್ ಆದ ಫಸ್ಟ್​ ಹೆಂಡತಿ
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್​ ಆಗಿದೆ ಈ ಕುಟುಂಬ

ಹಿಂದಿ ಬಿಗ್​ಬಾಸ್ ಒಟಿಟಿ ಸೀಸನ್​ 3 ಸ್ಪರ್ಧಿಗಳಾಗಿದ್ದ ಅರ್ಮಾನ್ ಮಲಿಕ್ ಹಾಗೂ ಇಬ್ಬರು ಹೆಂಡತಿಯರಾದ ಪಾಯಲ್ ಮತ್ತು ಕೃತಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್​ಬಾಸ್​ಗೆ ಹೋದ ಮೊದಲ ವಾರಕ್ಕೆ ಅರ್ಮಾನ್ ಮಲಿಕ್ ಮೊದಲ ಹೆಂಡತಿ ಪಾಯಲ್ ಮಲಿಕ್​ ​ಶೋನಿಂದ ಎಲಿಮಿನೇಟ್ ಆಗಿದ್ದರು. ಬಿಗ್​ಬಾಸ್​ಗೂ ಬರುವ ಮುನ್ನ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದ ಅರ್ಮಾನ್ ಮಲಿಕ್ ದಂಪತಿ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ.

ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?

ಹೌದು, ಬಿಗ್​ಬಾಸ್ ಸ್ಪರ್ಧಿ ಅರ್ಮಾನ್ ಮಲಿಕ್ ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ 2 ವರ್ಷದ ಮಗ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ವಿಶೇಷ ವಿನಂತಿಯನ್ನು ಕೂಡ ಮಾಡಿಕೊಂಡಿದ್ದಾರೆ ಕೃತಿಕಾ ಮಲಿಕ್​. ಅರ್ಮಾನ್ ಮಲಿಕ್ ಇಡೀ ಕುಟುಂಬ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿದ್ದಾರೆ.


ಆದ್ರೆ ಇದೀಗ ಅರ್ಮಾನ್ ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಅವರ ಎರಡು ವರ್ಷದ ಮಗ ಜೈದ್​ ರಿಕೆಟ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ ಅಂತ ಖುದ್ದು ಕೃತಿಕಾ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ನನ್ನ ಮಗನ ದೇಹದಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ರಂಜಕದಿಂದ ಈ ರೋಗ ಕಾಣಿಸಿಕೊಂಡಿದೆ ಎಂದಿದ್ದಾರೆ. ಇದರಿಂದಾಗಿ ಮಗನ ಮೂಳೆಗಳು ದುರ್ಬಲವಾಗುತ್ತಿವೆ ಅಂತ ವಿಡಿಯೋದಲ್ಲಿ ತನ್ನನ್ನು ದ್ವೇಷಿಸುವವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತಮ್ಮ ಮಗನ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment