ಅಪರ್ಣಾ ‘ಮಜಾ ಟಾಕೀಸ್‌’ ಜರ್ನಿ ಶುರುವಾಗಿದ್ದು ಹೇಗೆ? ಕನ್ನಡಿಗರ ಮನಗೆದ್ದ ವರಲಕ್ಷ್ಮೀ ಇನ್ನು ನೆನಪು ಮಾತ್ರ

author-image
Veena Gangani
Updated On
ಅಪರ್ಣಾ ‘ಮಜಾ ಟಾಕೀಸ್‌’ ಜರ್ನಿ ಶುರುವಾಗಿದ್ದು ಹೇಗೆ? ಕನ್ನಡಿಗರ ಮನಗೆದ್ದ ವರಲಕ್ಷ್ಮೀ ಇನ್ನು ನೆನಪು ಮಾತ್ರ
Advertisment
  • ಮಜಾ ಟಾಕೀಸ್​ ಮಾಡಿದ ಮೇಲೆ ಅಪರ್ಣಾ ಸಿನಿಮಾಕ್ಕೆ ಆಫರ್ ಬಂದಿತ್ತಂತೆ!
  • ಮಜಾ ಟಾಕೀಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿದ್ದ ನಿರೂಪಕಿ ಅಪರ್ಣಾ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಸಲ್ಲು, ಒಬಾಮಾ ಡೈಲಾಗ್

ಮಜಾ ಟಾಕೀಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಿರೂಪಕಿ ಅಪರ್ಣಾ ಅವರು ಮೃತಪಟ್ಟಿದ್ದಾರೆ. ಕನ್ನಡ ಸ್ಪಷ್ಟವಾಗಿ ಮಾತನಾಡುವುದರಲ್ಲೇ ಖ್ಯಾತಿ ಗಳಿಸಿದ್ದ ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರಂತೆ. ಆದರೆ ಈ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಫುಲ್​ ಶಾಕ್​ಗೆ ಒಳಗಾಗಿದ್ದಾರೆ.

publive-image

ಇದನ್ನೂ ಓದಿ:BIG BREAKING: ಖ್ಯಾತ ಕನ್ನಡದ ನಿರೂಪಕಿ ಅಪರ್ಣಾ ಇನ್ನಿಲ್ಲ

ಹೌದು, ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವ ಚಲುವೆ ಅಪರ್ಣಾ ಅವರು ಬಿಗ್​ಬಾಸ್​ ಸೀಸನ್​ 1ಕ್ಕೆ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಹಲವು ಕಾರ್ಯಕ್ರಮಳಲ್ಲಿ ಅಪರ್ಣಾ ಅವರು ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ನಟ ಸೃಜನ್ ಲೋಕೇಶ್ ಬ್ಯಾನರ್‌ನಡಿ ಮೂಡಿಬಂದ 'ಮಜಾ ಟಾಕೀಸ್' ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.

publive-image

ಅದರಲ್ಲೂ ಕೂಡ ನಿರೂಪಕಿ ಅಪರ್ಣಾ ಅವರು ಅತಿ ಹೆಚ್ಚು ಖ್ಯಾತಿ ಪಡೆದುಕೊಂಡರು. ಇನ್ನು ವಿಶೇಷ ಎಂದರೆ ನಿರೂಪಕಿ ಅಪರ್ಣಾ ಅವರನ್ನು ಖುದ್ದು ನಟ ಸೃಜನ್ ಲೋಕೇಶ್ ಅವರೇ ಈ ಶೋಗೆ ಬರುವಂತೆ ಒತ್ತಾಯ ಮಾಡಿದ್ದರು. ಇದಾದ ಬಳಿಕ ಮಜಾ ಟಾಕೀಸ್​ನಲ್ಲಿ ವರಲಕ್ಷ್ಮೀ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದರು.

ಇದನ್ನೂ ಓದಿ:ನಟಿ ಅಪರ್ಣಾ ಕೊನೆ ಸಂದರ್ಶನದಲ್ಲಿ ಆಡಿದ್ದ ಮಾತುಗಳೇನು..? ತಮ್ಮ ಬದುಕಿನ ಬಗ್ಗೆ ಏನಂದಿದ್ರು?

publive-image

ಇನ್ನು ವರಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದ ಅಪರ್ಣಾ ಅವರ ಸಲ್ಲು, ಒಬಾಮಾ ಕಾಲ್ ಮಾಡೋದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮೂಲಕ ಕೂಡ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ವರಲಕ್ಷ್ಮೀ ಪಾತ್ರ ಮಾಡಿದ ಮೇಲೆ ಅವರ ನಿಜ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಈ ಮಜಾ ಟಾಕೀಸ್​ ಮಾಡಿದ ಮೇಲೆ ಕಾಮಿಡಿ ಸಿನಿಮಾಕ್ಕೆ ಆಫರ್ ಬಂದಿತಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment