newsfirstkannada.com

ಅಪರ್ಣಾ ‘ಮಜಾ ಟಾಕೀಸ್‌’ ಜರ್ನಿ ಶುರುವಾಗಿದ್ದು ಹೇಗೆ? ಕನ್ನಡಿಗರ ಮನಗೆದ್ದ ವರಲಕ್ಷ್ಮೀ ಇನ್ನು ನೆನಪು ಮಾತ್ರ

Share :

Published July 11, 2024 at 11:05pm

Update July 11, 2024 at 11:06pm

  ಮಜಾ ಟಾಕೀಸ್​ ಮಾಡಿದ ಮೇಲೆ ಅಪರ್ಣಾ ಸಿನಿಮಾಕ್ಕೆ ಆಫರ್ ಬಂದಿತ್ತಂತೆ!

  ಮಜಾ ಟಾಕೀಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿದ್ದ ನಿರೂಪಕಿ ಅಪರ್ಣಾ

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಸಲ್ಲು, ಒಬಾಮಾ ಡೈಲಾಗ್

ಮಜಾ ಟಾಕೀಸ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಿರೂಪಕಿ ಅಪರ್ಣಾ ಅವರು ಮೃತಪಟ್ಟಿದ್ದಾರೆ. ಕನ್ನಡ ಸ್ಪಷ್ಟವಾಗಿ ಮಾತನಾಡುವುದರಲ್ಲೇ ಖ್ಯಾತಿ ಗಳಿಸಿದ್ದ ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರಂತೆ. ಆದರೆ ಈ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಫುಲ್​ ಶಾಕ್​ಗೆ ಒಳಗಾಗಿದ್ದಾರೆ.

ಇದನ್ನೂ ಓದಿ: BIG BREAKING: ಖ್ಯಾತ ಕನ್ನಡದ ನಿರೂಪಕಿ ಅಪರ್ಣಾ ಇನ್ನಿಲ್ಲ

ಹೌದು, ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವ ಚಲುವೆ ಅಪರ್ಣಾ ಅವರು ಬಿಗ್​ಬಾಸ್​ ಸೀಸನ್​ 1ಕ್ಕೆ ಎಂಟ್ರಿ ಕೊಟ್ಟಿದ್ದರು. ಅದಾದ ಬಳಿಕ ಹಲವು ಕಾರ್ಯಕ್ರಮಳಲ್ಲಿ ಅಪರ್ಣಾ ಅವರು ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ನಟ ಸೃಜನ್ ಲೋಕೇಶ್ ಬ್ಯಾನರ್‌ನಡಿ ಮೂಡಿಬಂದ ‘ಮಜಾ ಟಾಕೀಸ್’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.

ಅದರಲ್ಲೂ ಕೂಡ ನಿರೂಪಕಿ ಅಪರ್ಣಾ ಅವರು ಅತಿ ಹೆಚ್ಚು ಖ್ಯಾತಿ ಪಡೆದುಕೊಂಡರು. ಇನ್ನು ವಿಶೇಷ ಎಂದರೆ ನಿರೂಪಕಿ ಅಪರ್ಣಾ ಅವರನ್ನು ಖುದ್ದು ನಟ ಸೃಜನ್ ಲೋಕೇಶ್ ಅವರೇ ಈ ಶೋಗೆ ಬರುವಂತೆ ಒತ್ತಾಯ ಮಾಡಿದ್ದರು. ಇದಾದ ಬಳಿಕ ಮಜಾ ಟಾಕೀಸ್​ನಲ್ಲಿ ವರಲಕ್ಷ್ಮೀ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದರು.

ಇದನ್ನೂ ಓದಿ: ನಟಿ ಅಪರ್ಣಾ ಕೊನೆ ಸಂದರ್ಶನದಲ್ಲಿ ಆಡಿದ್ದ ಮಾತುಗಳೇನು..? ತಮ್ಮ ಬದುಕಿನ ಬಗ್ಗೆ ಏನಂದಿದ್ರು?

ಇನ್ನು ವರಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದ ಅಪರ್ಣಾ ಅವರ ಸಲ್ಲು, ಒಬಾಮಾ ಕಾಲ್ ಮಾಡೋದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮೂಲಕ ಕೂಡ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ವರಲಕ್ಷ್ಮೀ ಪಾತ್ರ ಮಾಡಿದ ಮೇಲೆ ಅವರ ನಿಜ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಈ ಮಜಾ ಟಾಕೀಸ್​ ಮಾಡಿದ ಮೇಲೆ ಕಾಮಿಡಿ ಸಿನಿಮಾಕ್ಕೆ ಆಫರ್ ಬಂದಿತಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಪರ್ಣಾ ‘ಮಜಾ ಟಾಕೀಸ್‌’ ಜರ್ನಿ ಶುರುವಾಗಿದ್ದು ಹೇಗೆ? ಕನ್ನಡಿಗರ ಮನಗೆದ್ದ ವರಲಕ್ಷ್ಮೀ ಇನ್ನು ನೆನಪು ಮಾತ್ರ

https://newsfirstlive.com/wp-content/uploads/2024/07/aparana9.jpg

Load More