newsfirstkannada.com

ದಿಢೀರ್​ ಆಸ್ಪತ್ರೆಗೆ ದಾಖಲಾಗಿದ್ದ ನಟಿ ನಮ್ರತಾ ಗೌಡಗೆ ಏನಾಗಿತ್ತು? ಇಲ್ಲಿದೆ ಅಸಲಿ ಮಾಹಿತಿ

Share :

Published June 7, 2024 at 8:13pm

    ಕನ್ನಡದ ದೊಡ್ಡ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ನಟಿ ನಮ್ರತಾ ಗೌಡ

    ನಟಿ ಶೇರ್​ ಮಾಡಿಕೊಂಡ ಫೋಟೋ ನೋಡಿ ಫ್ಯಾನ್ಸ್​ ಆಗಿದ್ರು ಫುಲ್​​ ಶಾಕ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ನಟಿ ನಮ್ರತಾ ಗೌಡ ಫೋಟೋ

ಕಿರುತೆರೆ ನಟಿ, ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್ ಸ್ಪರ್ಧಿಯಾಗಿರೋ​ ಬೆಡಗಿ ನಮ್ರತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಫ್ಯಾನ್ಸ್​ಗಳಿಗೆ ಇನ್ನೂ ಹತ್ತಿರವಾಗುತ್ತಿರುತ್ತಾರೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​​; ಸ್ಟಾರ್​ ನಟನ ಜತೆ ಸ್ಕ್ರೀನ್ ಶೇರ್ ಮಾಡ್ತಾರಾ ನಟಿ ಮೇಘಾ ಶೆಟ್ಟಿ

ಆದರೆ ನಟಿ ನಮ್ರತಾ ಗೌಡ ನಿನ್ನೆ ಶೇರ್ ಮಾಡಿಕೊಂಡ ಫೋಟೋ ನೋಡಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅನಾರೋಗ್ಯಕ್ಕೆ ತುತ್ತಾದ ಕಾರಣ ನಟಿ ನಮ್ರತಾ ಗೌಡ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿದ್ದರು. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಶಾಕ್​ ಆಗಿದ್ದರು. ಇನ್ನು ನಮ್ರತಾ ಗೌಡ ಅವರಿಗೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದರಂತೆ. ಹೀಗಾಗಿ ನಟಿ, ಬಿಗ್​ಬಾಸ್​ ಬೆಡಗಿ ನಮ್ರತಾ ಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ ಅಂತ ನ್ಯೂಸ್​​ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ನಮ್ರತಾ ಗೌಡ ಬೆಡ್​​ ಮೇಲೆ ಮಲಗಿಕೊಂಡಿದ್ದರು. ನಮ್ರತಾ ಗೌಡ ಅವರ ಪಕ್ಕದಲ್ಲಿ ತಾಯಿ ನಿಂತುಕೊಂಡಿದ್ದರು. ಅದೇ ಫೋಟೋವನ್ನು ಶೇರ್ ಮಾಡಿಕೊಂಡ ನಮ್ರತಾ ಗೌಡ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಈಗ ಹೆಚ್ಚು ವಿಶ್ರಾಂತಿ ಪಡೆದುಕೊಳ್ಳುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ಇದೇ ಫೋಟೋ ನೋಡಿದ ನೆಟ್ಟಿಗರು ಶೀಘ್ರದಲ್ಲಿ ಗುಣಮುಖರಾಗಿ ಎಂದು ಕಾಮೆಂಟ್​​ ಮಾಡಿದ್ದರು. ಸದ್ಯ ನಟಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್​ ಆಸ್ಪತ್ರೆಗೆ ದಾಖಲಾಗಿದ್ದ ನಟಿ ನಮ್ರತಾ ಗೌಡಗೆ ಏನಾಗಿತ್ತು? ಇಲ್ಲಿದೆ ಅಸಲಿ ಮಾಹಿತಿ

https://newsfirstlive.com/wp-content/uploads/2024/06/namrutha1.jpg

Load More