/newsfirstlive-kannada/media/post_attachments/wp-content/uploads/2024/03/namrutha-8.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ತಮ್ಮ ಜೀವನದಲ್ಲಿ ಒಂದೊಳ್ಳೆ ಇನಿಷಿಯೇಟಿವ್ ತಗೋಳೋದಕ್ಕೆ ಮುಂದಾಗಿದ್ದಾರೆ. ಇಂದು ಮಾರ್ಚ್ 17. ಸ್ಯಾಂಡಲ್ವುಡ್ನ ಪ್ರೀತಿಯ ಪವರ್ ಸ್ಟಾರ್ ಅಪ್ಪು ಅವರ ಹುಟ್ಟುಹಬ್ಬ. ಈ ಸಲುವಾಗಿ ಅವರಿಗೆ ಹಲವಾರು ಕಲಾವಿದರು ಇವತ್ತಿನ ದಿನದಂದು ಬಹಳಷ್ಟು ಒಳ್ಳೆ ಕೆಲಸಗಳನ್ನ ಮಾಡುತ್ತಿದ್ದಾರೆ.
ಇದನ್ನು ಓದಿ: ಗುಡುಗು ಸಮೇತ ಭಾರೀ ಮಳೆ; ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರೆದ ಜಲರಾಯ
ಈಗ ಅದೇ ಸಾಲಿನಲ್ಲಿ ನಮ್ರತಾ ಗೌಡ ಕೂಡ ಮಾರ್ಚ್ 17ರಂದು ಒಂದು ನೂತನ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ತ ಬೀದಿ ಬದಿಯಲ್ಲಿ ಹಸಿವಿನಿಂದ ಬಳಲುವವರಿಗೆ, ಅನಾಥರಿಗೆ, ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಉಟ ನೀಡಿದ್ದಾರೆ. ಇದು ನಮ್ರತಾ ಅವರೇ ಹೇಳಿರೋ ಹಾಗೆ ಅಪ್ಪು ಸರ್ ಹುಟ್ಟಿದ ಹಬ್ಬ ಪ್ರಯುಕ್ತ ಈ ರೀತಿಯ ಇನಿಷಿಯೇಟಿವ್ನ ನಾನು ಪ್ರತಿ ತಿಂಗಳು ಮಾಡಬೇಕು ಅಂತಾ ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
View this post on Instagram
ಇನ್ನೂ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ ಅವರು ಅಪ್ಪು ಅವರ ದೊಡ್ಡ ಅಭಿಮಾನಿ. ಹಾಗಾಗಿನೇ ಈ ರೀತಿಯ ಒಳ್ಳೆ ಉದ್ದೇಶ ಪೂರ್ವಕವಾಗಿರೋ ಕೆಲಸಗಳನ್ನ ವೈಯಕ್ತಿಕವಾಗಿ ಇಂಟ್ರೆಸ್ಟ್ ಕೊಟ್ಟು ಮಾಡುತ್ತಿದ್ದಾರೆ. ನಮ್ರತಾ ಗೌಡ ಅವರ ಈ ಕೆಲಸಕ್ಕೆ ಅಪ್ಪು ಅಭಿಮಾನಿಗಳು ಕೂಡ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ