/newsfirstlive-kannada/media/post_attachments/wp-content/uploads/2025/05/ranjith-kumar7.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ‘ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ’- ಪಾಕ್ ಪ್ರಧಾನಿ ಹೇಳಿದ 4 ಸುಳ್ಳುಗಳು ಇಲ್ಲಿವೆ!
ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಕುಮಾರ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇಂದು ಪ್ರೀತಿಸಿದ ಹುಡುಗಿ ಜೊತೆಗೆ ರಂಜಿತ್ ಕುಮಾರ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ದೊಡ್ಡಬಳ್ಳಾಪುರ ಸಿಂಗನಾಯಕನಹಳ್ಳಿನಲ್ಲಿ ನಟ ರಂಜಿತ್ ಕುಮಾರ್ ಹಾಗೂ ಮಾನಸ ಅವರ ಮದುವೆ ನಡೆದಿದೆ.
ಇನ್ನೂ ರಂಜಿತ್ ಕುಮಾರ್ ಹಾಗೂ ಮಾನಸಾ ಮದುವೆಗೆ ಬಿಗ್ಬಾಸ್ ಸ್ಪರ್ಧಿಗಳು ಆಗಮಿಸಿ ಶುಭ ಹಾರೈಸಿದ್ದಾರೆ.
ತುಕಾಲಿ ಸಂತೋಷ್ ಹಾಗೂ ಮಾನಸಾ ಸಂತೋಷ್, ಲಾಯರ್ ಜಗದೀಶ್, ಗೋಲ್ಡ್ ಸುರೇಶ್, ಅನುಷಾ ರೈ, ಯಮುನಾ ಶ್ರೀನಿಧಿ ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದ್ದಾರೆ.
ನಿನ್ನೆ ರಂಜಿತ್ ಅವರು ಭಾವಿ ಪತ್ನಿ ಜೊತೆಗೆ ಮೆಹೆಂದಿ ಹಾಗೂ ಸಂಗೀತ ಶಾಸ್ತ್ರದಲ್ಲಿ ಸಖತ್ ಮಿಂಚಿದ್ದರು.
ಭಾವಿ ಪತ್ನಿ ಮಾನಸಾ ಅವರ ಕೈಗೆ ಮೆಹೆಂದಿ ಹಾಕಿ ಖುಷಿಪಟ್ಟಿದ್ದರು. ಅಷ್ಟೇ ಅಲ್ಲದೇ ಭಾವಿ ಪತ್ನಿ ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದರು.
ರಂಜಿತ್ ಅವರು ಮದುವೆಯಾಗುತ್ತಿರೋ ಹುಡುಗಿಯ ಹೆಸರು ಮಾನಸಾ ಗೌಡ. ಇವರು ಫ್ಯಾಷನ್ ಡಿಸೈನರ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ