newsfirstkannada.com

ಮಗು ದತ್ತು ಪಡೆದ ಕೇಸ್‌ಗೆ ಮೇಜರ್ ಟ್ವಿಸ್ಟ್‌.. ರೀಲ್ಸ್ ಸ್ಟಾರ್ ಸೋನು ಗೌಡ ಜೈಲಿಗೆ ಹೋಗೋದು ಪಕ್ಕಾ?

Share :

Published March 22, 2024 at 6:20pm

  ಒಂದು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೋನು ಗೌಡ ಬಗ್ಗೆ ಚರ್ಚೆ

  ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದುಕೊಂಡ ಸೋನು ಗೌಡ

  ದೂರಿನ ಮೇರೆಗೆ ಬಿಗ್‌ಬಾಸ್ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಗೌಡ ಅರೆಸ್ಟ್‌

ಬೆಂಗಳೂರು: ಸೋಷಿಯಲ್ ಮೀಡಿಯಾ ಅನ್ನೋದೇ ಹೀಗೆ ಯಾವಾಗ? ಯಾರು? ಹೇಗೆ? ಸುದ್ದಿಯಾಗುತ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಅದೇ ಸಾಲಿಗೆ ಈಗ ಬಿಗ್​ಬಾಸ್​ ಮಾಜಿ ಸ್ಪರ್ಧಿ, ರೀಲ್ಸ್​ ಸ್ಟಾರ್​​ ಸಖತ್​ ಸುದ್ದಿಯಲ್ಲಿದ್ದಾರೆ. ಹೌದು, ಸೋನು ಗೌಡಗೂ ವಿವಾದಕ್ಕೂ ತುಂಬಾನೇ ನಂಟಿದೆ. ಆಕೆ ಮಾಡಿದ್ದೆಲ್ಲಾ ಕಾಂಟ್ರವರ್ಸಿಯಾಗಿ ಕನ್ವರ್ಟ್ ಆಗಿದೆ. ಇಲ್ಲಿಯವರೆಗೆ ಆಗಿದ್ದೆಲ್ಲವೂ ಯಾವುದೂ ಕಾನೂನು ಪರಿಧಿಗೆ ಬಂದಿರಲಿಲ್ಲ.

ಆದ್ರೆ, ಈ ಬಾರಿ ಮಾಡಿರೋ ತಪ್ಪು ಆಕೆಯನ್ನ ಅರೆಸ್ಟ್ ಮಾಡಿಸಿದೆ. ಒಂದು ತಿಂಗಳಿಂದ ಸೋನು ಶ್ರೀನಿವಾಸ ಗೌಡ ಸಖತ್ ಸುದ್ದಿಯಲ್ಲಿದ್ದರು. ಅವರ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್ ಆಗಿರೋ ವಿಡಿಯೋಗಳಿಗೆ ಸಾಕಷ್ಟು ಪಾಸಿಟಿವ್‌ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆಕೆಯ ಮುಖದಲ್ಲಿ ಮಂದಹಾಸವಿತ್ತು. ಜೀವನದಲ್ಲಿ ಖುಷಿ ಕಂಡುಕೊಂಡಿದ್ದೀನಿ ಅನ್ನೋ ಫೀಲ್ ಇತ್ತು. ಆದ್ರೆ, ಇದೇ ಆಕೆಗೆ ಕಂಬಿಯ ಹಿಂದೆ ಕಳುಹಿಸುತ್ತೆ ಅನ್ನೋದು ಆಕೆಗೆ ನಿಜಕ್ಕೂ ಗೊತ್ತಿರಲಿಲ್ಲ. ಅದು ಸ್ಟ್ರಾಂಗ್‌ ಕೇಸ್‌ನಲ್ಲಿ ಅರೆಸ್ಟ್ ಆಗ್ತೀನಿ ಅನ್ನೋದನ್ನ ಆಕೆ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.

ಸೋನು ಗೌಡ ಯೂಟ್ಯೂಬ್‌ ಚಾನಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಅಪ್‌ಲೋಡ್ ಆಗಿರೋದು ಮಗುವಿನ ಜೊತೆ ಇರೋ ವಿಡಿಯೋಗಳೇ. ಸೋನುಗೌಡ ಮನೆಯ ಪಕ್ಕದ ಶೆಡ್‌ನಲ್ಲಿ ವಾಸವಿದ್ದ ರಾಯಚೂರು ಮೂಲದ ದಂಪತಿಯ ಮಗಳ ಜೊತೆ ಮಾಡಿರೋ ವಿಡಿಯೋಗಳನ್ನ ಸೋನುಗೌಡ ಅಪ್‌ಲೋಡ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಮಗುವಿನ ಮುಖವನ್ನೂ ತೋರಿಸಿದ್ದಾರೆ. ಆಕೆಗೆ ಕಿವಿ ಚುಚ್ಚಿಸುವುದು, ಐಸ್‌ಕ್ರೀಮ್ ಕೊಡಿಸೋದು, ಶಾಪಿಂಗ್ ಮಾಡಿಸೋದು, ಮೇಕಪ್ ಮಾಡೋ ವಿಡಿಯೋಗಳೆಲ್ಲಾ ಅಪ್‌ಲೋಡ್ ಆಗಿದೆ. ಆ ಮಗು ಮತ್ತು ಸೋನುಗೌಡ ನಡುವೆ ಒಂದು ಉತ್ತಮ ಬಾಂಧವ್ಯ ಬೆಳೆದಿರೋದು ಯಾರಿಗಾದ್ರೂ ಅರ್ಥವಾಗತ್ತೆ. ಇನ್‌ಫ್ಯಾಕ್ಟ್ ಆ ಕುಟುಂಬ ಬೆಂಗಳೂರು ಬಿಟ್ಟು ರಾಯಚೂರಿಗೆ ಹೋದ ನಂತರ ಆ ಮಗುವನ್ನ ಸೋನು, ಬೆಂಗಳೂರಿಗೆ ವಾಪಸ್‌ ಕರೆದುಕೊಂಡು ಬರ್ತಾರೆ. ಒಂದು ವಿಡಿಯೋದಲ್ಲಿ ಮಗುವಿನಾ ತಾಯಿ, ಕರೆದುಕೊಂಡು ಹೋಗಮ್ಮ. ಮಗಳು ಅಂತಾ ಅಂದ್ಕೊಂಡು ಚೆನ್ನಾಗಿ ಓದಿಸು ಅಂತಾನೂ ಹೇಳ್ತಾರೆ.

ಇದಿಷ್ಟೇ ಅಲ್ಲ, ಒಂದರ ನಂತರ ಒಂದು ವಿಡಿಯೋ ಅಪ್‌ಲೋಡ್ ಆದ್ಮೇಲೆ, ಕೆಲ ನೆಗೆಟಿವ್ ಕಮೆಂಟ್ಸ್ ಕೂಡ ಬಂದಿವೆ. ಮಗವನ್ನ ವ್ಯೂವ್ಸ್​ಗಾಗಿ ಬಳಸಿಕೊಳ್ತಿದ್ಯಾ ಅಂತಾ ಕೆಲವರು ಕಮೆಂಟ್ಸ್ ಹಾಕಿದ್ದಾರೆ. ಹೀಗಾಗಿ, ಸೋನು ಕಮೆಂಟ್ಸ್ ಬಾಕ್ಸ್ ಆಪ್‌ ಮಾಡುತ್ತಾರೆ. ಇದು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಮಕ್ಕಳ ಸಂರಕ್ಷಣಾ ಘಟಕದ ಅಧಿಕಾರಿಗಳು ಎಲ್ಲವನ್ನೂ ಅಬ್ಸರ್‌ ಮಾಡ್ತಿರ್ತಾರೆ. ದತ್ತು ಪಡೆದಿದ್ದೇನೆ ಅಂತಾ ಹೇಳಿರುವುದನ್ನ ಗಮನಿಸಿದ್ದಾರೆ. ಆದ್ರೆ, ಕಾನೂನಿನ ಮೂಲಕ ಯಾವುದೇ ಪ್ರಕ್ರಿಯೆ ನಡೆದಿಲ್ಲ ಅನ್ನೋದು ಅವರಿಗೆ ಗೊತ್ತಿರುತ್ತದೆ. ಹೀಗಾಗಿ, ಎಲ್ಲಾವನ್ನೂ ತನಿಖೆ ಮಾಡಿ, ನಿನ್ನೆ ಅಂದ್ರೆ ಮಾರ್ಚ್‌ 21ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣಾಗೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ದೂರು ನೀಡ್ತಾರೆ. ಇದರ ಆಧಾರದ ಮೇಲೆ ಜೆ.ಜೆ ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿ ಸೋನುಗೌಡರನ್ನ ಇವತ್ತು ಬಂಧಿಸಿದ್ದಾರೆ.

ಇದನ್ನು ಓದಿ: ಮಗು ದತ್ತು ಪಡೆದ ಕೇಸ್.. ಸೋನು ಶ್ರೀನಿವಾಸ್ ಗೌಡಗೆ 4 ದಿನ ಪೊಲೀಸ್‌ ಕಸ್ಟಡಿ; ಮುಂದೇನು?

ಯಾವುದೇ ಮಕ್ಕಳನ್ನ ದತ್ತು ಪಡೆಯೋಕೆ ಹಲವು ಕಾನೂನುಗಳನ್ನ ಪಾಲಿಸಬೇಕಾಗುತ್ತದೆ. ಸೋನುಗೌಡ ಪ್ರಕರಣದಲ್ಲಿ ಯಾವುದೇ ಕಾನೂನು ಪಾಲನೆಯಾಗಿಲ್ಲ. ಇನ್‌ಫ್ಯಾಕ್ಟ್‌, ಈ ಬಗ್ಗೆ ಸೋನುಗೌಡ ಅವರಿಗೆ ಅರಿವೇ ಇಲ್ಲ ಅನ್ನೋದು ಕೂಡ ವಿಚಾರಣೆ ವೇಳೆ ಗೊತ್ತಾಗಿದೆ. ಇನ್ನೊಂದೆಡೆ, ಸೋನುಗೌಡ ಯೂಟ್ಯೂಬ್‌ನಲ್ಲಿ ಮಗುವಿನ ಗುರುತನ್ನ ಬಹಿರಂಗಪಡಿಸಿರೋದು ಕೂಡ ಕಾನೂನು ಉಲ್ಲಂಘನೆಯಾಗಿದೆ.

ಬಾಲ ನ್ಯಾಯ ಕಾಯಿದೆ 2000 ಕಲಂ 29 ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಸಮಿತಿಯ ಆದೇಶದ ಪ್ರಕಾರವೇ ದತ್ತು ಕ್ರಿಯೆ ಪೂರೈಸಬೇಕು. ಆದರೆ ಇದನ್ನ ಮಗುವಿನ ಪೋಷಕರು ಮಾಡದೇ ಇರೋದು ಅಕ್ರಮವಾಗಿದೆ. ಜೊತೆಗೆ ಸೋನು ಶ್ರೀನಿವಾಸ್ ಗೌಡ ಕೆಲವು ವಿಡಿಯೋಗಳಲ್ಲಿ ಪೋಷಕರಿಗೆ ವಿವಿಧ ರೀತಿಯ ಸೌಕರ್ಯಗಳನ್ನು ನೀಡಿರುತ್ತೇನೆ ಎಂದು ಹೇಳಿರುವುದರಿಂದ ಇದು ಒಂದು ರೀತಿಯ ಮಗುವಿನ ಮಾರಾಟ ಮಾಡಿರುವಂತೆ ಕಂಡು ಬಂದಿರುತ್ತದೆ. ವಿಚಾರಣೆ ವೇಳೆ, ಮದ್ವೆಯಾಗದೇ ಈ ಮಗುವನ್ನ ನೋಡಿಕೊಳ್ಳಲು ನಿರ್ಧರಿಸಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ಬರೋ ಹಣವನ್ನ ಆಕೆಯ ಜೀವನಕ್ಕೆ ವಿನಿಯೋಗಿಸಲು ತೀರ್ಮಾನಿಸಿದ್ದೇ. ಆದರೆ ದತ್ತು ತೆಗೆದುಕೊಳ್ಳುವ ಪ್ರೋಸೆಸ್ ಇಷ್ಟು ದೊಡ್ಡದು ಎಂದು ನನಗೆ ಗೊತ್ತಿರಲಿಲ್ಲ ಅಂತಾ ವೇಳೆ ಸೋನು ಗೌಡ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೀತಾ, ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ

ಮೇಲ್ನೋಟಕ್ಕೆ ಕಾನೂನು ಉಲ್ಲಂಘನೆಯಾಗಿರೋದು ಕಂಡು ಬರುತ್ತಿದೆ. ಹೀಗಾಗಿ ಇದೊಂದು ಸಾಮಾನ್ಯ ಪ್ರಕರಣವಂತೂ ಅಲ್ಲ. ಇದು ಗಂಭೀರವಾದ ಕೇಸ್ ಆಗಿ ಬದಲಾಗಿದೆ. ಸದ್ಯ ಸೋಮವಾರ ಸೋನು ಶ್ರೀನಿವಾಸ್ ಗೌಡರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಹೆಚ್ಚಿನ ತನಿಖೆ ಹಾಗೂ ಮಹಜರ್ ನಡೆಸಬೇಕಾದ ಹಿನ್ನೆಲೆ ಸೋನು ಗೌಡ ಪೊಲೀಸ್​ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ಆರೋಪಿ ಸ್ಥಾನದಲ್ಲಿರೋ ಸೋನು ಗೌಡ ಸದ್ಯಕ್ಕೆ ಮಹಿಳಾ ಸಾಂತ್ವನ ನಿಲಯ ಆಶ್ರಯ ಪಡೆಯಲಿದ್ದಾರೆ. ನಾಳೆ ಸೋನು ಗೌಡರನ್ನು ರಾಯಚೂರಿಗೆ ಕರೆದುಕೊಂಡು ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗು ದತ್ತು ಪಡೆದ ಕೇಸ್‌ಗೆ ಮೇಜರ್ ಟ್ವಿಸ್ಟ್‌.. ರೀಲ್ಸ್ ಸ್ಟಾರ್ ಸೋನು ಗೌಡ ಜೈಲಿಗೆ ಹೋಗೋದು ಪಕ್ಕಾ?

https://newsfirstlive.com/wp-content/uploads/2024/03/sonu-gowda-5.jpg

Load More